ಕರ್ನಾಟಕದಲ್ಲಿ ತಪ್ಪಾದ ವ್ಯಕ್ತಿಯನ್ನು ಬಂಧಿಸಿದ್ದರಿಂದ ಆ ವ್ಯಕ್ತಿಗೆ ೫ ಲಕ್ಷ ರೂಪಾಯಿಗಳನ್ನು ನಷ್ಟ ಪರಿಹಾರ ನೀಡುವಂತೆ ಉಚ್ಚನ್ಯಾಯಾಲಯದ ಆದೇಶ

ಬೆಂಗಳೂರು (ಕರ್ನಾಟಕ) – ಇಲ್ಲಿ ೫೬ ವರ್ಷದ ನಿಂಗರಾಜೂ ಎನ್. ವಕ್ತಿಗೆ ತಪ್ಪಾಗಿ ಬಂಧಿಸಿರುವ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅವರಿಗೆ ನಷ್ಟ ಪರಿಹಾರವೆಂದು ೫ ಲಕ್ಷ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ೨೦೧೧ ರಲ್ಲಿ ಅಪರಾಧ ದಾಖಲಿಸಿಲಾಗಿದ್ದ ರಾಜೂ ಎನ್.ಜಿ.ಎನ್. ಹೆಸರಿನ ವ್ಯಕ್ತಿಯು ಈ ವ್ಯಕ್ತಿಯಾಗಿರಲಿಲ್ಲ.

ನ್ಯಾಯಾಲಯವು, ಯಾರ ವಿರುದ್ಧ ಬಂಧನದ ವಾರಂಟ ಹೊರಡಿಸಲಾಗಿತ್ತೋ, ಅದು ಇದೇ ವ್ಯಕ್ತಿ ಆಗಿರುವನೇ ಎಂದು ದೃಢಪಡಿಸಿಕೊಳ್ಳದೇ ಆ ವ್ಯಕ್ತಿಯನ್ನು ಬಂಧಿಸಿರುವುದು ಆಶ್ಚರ್ಯಕಾರಕವಾಗಿದೆ. ಈ ರೀತಿ ಅಮಾಯಕ ವ್ಯಕ್ತಿಯ ಗುರುತನ್ನು ಖಾತ್ರಿ ಮಾಡಿಕೊಳ್ಳದೇ ಅವನನ್ನು ಬಂಧಿಸಲಾಗಿತ್ತು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಈ ಮೊತ್ತವನ್ನು ಸಂಬಂಧಪಟ್ಟ ಪೊಲೀಸ ಅಧಿಕಾರಿಯಿಂದ ತೆಗೆದುಕೊಳ್ಳಬೇಕು ! ದೇಶದಲ್ಲಿ ಈ ಪದ್ಧತಿಯಿಂದ ನಡೆಯುವ ಅಥವಾ ಬಂಧನದ ಬಳಿಕ ವ್ಯಕ್ತಿ ನಿರಪರಾಧಿ ಎಂದು ಬಿಡುಗಡೆಯಾದರೆ ಆ ವ್ಯಕ್ತಿಗೆ ನಷ್ಟ ಪರಿಹಾರ ನೀಡುವ ಕಾನೂನು ಮಾಡುವುದು ಆವಶ್ಯಕವಾಗಿದೆ !

ಈ ಘಟನೆಯಿಂದ ‘ಪೊಲೀಸರು ಯಾವ ರೀತಿ ಕೆಲಸ ಮಾಡುತ್ತಾರೆ’, ಎನ್ನುವುದು ಗಮನಕ್ಕೆ ಬರುತ್ತದೆ ! ಇದರಿಂದ ಜನರಿಗೆ ಈಗ ಪೊಲೀಸರ ಮೇಲೆ ವಿಶ್ವಾಸವೇ ಇಲ್ಲವಾಗಿದೆ !