ಮಾಂಸದ ಅಂಗಡಿಗಳನ್ನು ತೆರೆಯುವಂತೆ ಹಿಂದೂಗಳಿಗೆ ಕರೆ ನೀಡಿದ್ದಕ್ಕಾಗಿ ಮತಾಂಧರಿಂದ ಪ್ರವೀಣ ನೆಟ್ಟಾರು ಅವರ ಹತ್ಯೆಯಾಗಿರುವ ಸಾಧ್ಯತೆ !

ಪ್ರವೀಣ್ ನೆಟ್ಟಾರು ಕೂಡ ಮಾಂಸದ ಅಂಗಡಿ ತೆರೆದಿದ್ದರು !

ಬೆಳ್ಳಾರೆ – ಕೆಲವು ದಿನಗಳ ಹಿಂದೆ ಇಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಮತಾಂಧರು ಹತ್ಯೆ ಮಾಡಿದ್ದರು. ಈ ಹತ್ಯೆಯ ಹಿಂದಿನ ಕಾರಣವೊಂದು ಇದೀಗ ಬೆಳಕಿಗೆ ಬಂದಿದೆ. ಪ್ರವೀಣ ನೆಟ್ಟಾರು ಸ್ಥಳೀಯ ಹಿಂದೂಗಳಿಗೆ ಹಿಂದೂ ಅಂಗಡಿಗಳಿಂದ ಮಾತ್ರ ಮಾಂಸವನ್ನು ಖರೀದಿಸುವಂತೆ ಮನವಿ ಮಾಡಿದ್ದರು. ೯ ತಿಂಗಳ ಹಿಂದೆ ನೆಟ್ಟಾರು ಸ್ವತಃ ಮಾಂಸದ ಅಂಗಡಿ ತೆರೆದಿದ್ದರು. ಇದು ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳೀಯ ಮುಸಲ್ಮಾನರಿಗೆ ತಲೆನೋವಾಗಿತ್ತು. ಇದರಿಂದ ಆತನನ್ನು ಹತ್ಯೆ ಮಾಡಲಾಗಿದೆ, ಎಂದು ಹೇಳಲಾಗಿದೆ. ರಾಜ್ಯದಲ್ಲಿ ಮುಸ್ಲಿಂ ಮಾಂಸ ಮಾರಾಟಗಾರರನ್ನು ಬಹಿಷ್ಕರಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ. ಅದಕ್ಕೆ ನೆಟ್ಟಾರು ನೇತೃತ್ವ ವಹಿಸಿದ್ದರು. ಅವರು ಹಿಂದೂಗಳಿಗೆ ತಮ್ಮದೇ ಆದ ಕೋಳಿ ವ್ಯಾಪಾರವನ್ನು ಪ್ರಾರಂಭಿಸಲು ಕರೆ ನೀಡಿದ್ದರು

 

ಪ್ರವೀಣ ನೆಟ್ಟಾರಿಗೆ ಬೆದರಿಕೆ ಬರುತ್ತಿದೆ ಎಂದು ಪೊಲೀಸರಿಗೆ ತಿಳಿಸಿದರೂ ನಿಷ್ಕ್ರಿಯರಾಗಿದ್ದ ಪೊಲೀಸರು ! – ನೆಟ್ಟಾರು ಅವರ ಸೋದರಮಾವನ ಆರೋಪ

ಪ್ರವೀಣ ನೆಟ್ಟಾರು ಅವರ ಸೋದರ ಮಾವ ಅವರು, ಪ್ರವೀಣರು ಸಾಮಾಜಿಕ ಜಾಲತಾಣಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಬಗ್ಗೆ ನಿರಂತರವಾಗಿ ತಮ್ಮ ಬರಹಗಳನ್ನು ಪ್ರಸಾರ ಮಾಡುತ್ತಿದ್ದರು. ಇದರಿಂದಾಗಿ ಅವರಿಗೆ ನಿತ್ಯ ಬೆದರಿಕೆಗಳು ಬರುತ್ತಿದ್ದವು. ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು; ಆದರೆ ಪೊಲೀಸರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಲೆಗೂ ಮುನ್ನ ಆತನಿಗೆ ಬೆದರಿಕೆಗಳು ಬಂದಿದ್ದವು. ಬೆಳ್ಳಾರೆಯಲ್ಲಿ ಮಾಂಸ ಮಾರಾಟ ದಂಧೆ ಮುಸಲ್ಮಾನರದ್ದಾಗಿದೆ. ಅಂದು ನೆಟ್ಟಾರು ತಮ್ಮದೇ ಮಾಂಸದಂಗಡಿ ತೆರೆದಿದ್ದರಿಂದ ಇತರ ಹಿಂದೂಗಳೂ ಇಂತಹ ಅಂಗಡಿಗಳನ್ನು ಅಲ್ಲಲ್ಲಿ ತೆರೆಯತೊಡಗಿದರು. ಇದರಿಂದಾಗಿ ಅವರಿಗೆ ಬೆದರಿಕೆಗಳು ಬರುತ್ತಿದ್ದವು ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಕರ್ನಾಟಕದಲ್ಲಿ ಭಾಜಪ ಸರಕಾರವಿದ್ದರೂ ತಮ್ಮದೇ ಪಕ್ಷದ ಅಧಿಕಾರಿಗಳಿಗೆ ಭದ್ರತೆ ಸಿಗದಿರುವುದು ಇದು ಹಿಂದುಗಳಿಗೆ ಅಪೇಕ್ಷಿತವಿಲ್ಲ !