ಕೊಪ್ಪಳ (ಕರ್ನಾಟಕ) ಇಲ್ಲಿಯ ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ವಿವಾಹವಾದುದರಿಂದ ನಡೆದ ಹಿಂಸಾಚಾರದಲ್ಲಿ ೨ ಸಾವು !

ಕೊಪ್ಪಳ (ಕರ್ನಾಟಕ) – ಇಲ್ಲಿ ಮುಸಲ್ಮಾನ ಯುವಕನು ಹಿಂದೂ ಯುವತಿಯ ಜೊತೆ ವಿವಾಹ ವಾದನೆಂದು ನಡೆದ ವಾದ ವಿವಾದದಿಂದ ೨ ಸಾವನ್ನಪ್ಪಿದ್ದಾರೆ. ಹಾಗೂ ೬ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಇಲ್ಲಿ ಕಲಂ ೧೪೪ ಜಾರಿ ಮಾಡಲಾಯಿತು.

 

(ಸೌಜನ್ಯ : TV9 ಕನ್ನಡ)

ಪಾಷಾವಲಿ ಮಹಮ್ಮದ್ ಸಾಬ್ (ವಯಸ್ಸು ೨೨ ವರುಷ) ಮತ್ತು ಯಂಕಪ್ಪ ಶಾಮಪ್ಪ ತಳವಾರ (ವಯಸ್ಸು ೬೦ ವರುಷ) ಇವರು ಸಾವನ್ನಪ್ಪಿದವರು. ಇವರಿಬ್ಬರೂ ಕೊಪ್ಪಳ ಜಿಲ್ಲೆಯ ಹುಲಿಹೈದರ್ ಗ್ರಾಮದ ನಿವಾಸಿಗಳು. ಪಾಶಾವಲಿ ಇವನು ತಳವಾರ ಸಮುದಾಯದ ಒಬ್ಬ ಹುಡುಗಿಯನ್ನು ವಿವಾಹ ಮಾಡಿಕೊಂಡಿದ್ದನು. ಆದ್ದರಿಂದ ಈ ಸಮುದಾಯದಲ್ಲಿ ಜನರು ಅಪ್ರಸನ್ನರಾಗಿದ್ದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸಂಪಾದಕೀಯ ನಿಲುವು

ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ. ಕರ್ನಾಟಕದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಸಮ್ಮತಿಸಲಾಗಿದೆ. ಹಾಗಿದ್ದರೂ ಮತಾಂಧರಿಗೆ ಕಾನೂನಿನ ಭಯವಿಲ್ಲದ ಕಾರಣ ಈ ರೀತಿಯ ಘಟನೆಗಳು ಈಗಲೂ ನಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಈ ಕಾನೂನಿನಲ್ಲಿ ಇನ್ನು ಹೆಚ್ಚಿನ ಕಠಿಣ ಶಿಕ್ಷೆಯ ಏರ್ಪಾಡು ಮಾಡುವ ಅವಶ್ಯಕತೆಯಿದೆ.