ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜಾಕೀರ್ ಮತ್ತು ಶಫೀಕ್ ಎಂಬವರ ಬಂಧನ !

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಂಟಿರುವುದರ ಬಗ್ಗೆ ತನಿಖೆ !

ಬೆಂಗಳೂರು – ಜುಲೈ ೨೬ ರಂದು ಭಾರತೀಯ ಜನತಾ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲೆಯ ಸಚಿವ ಪ್ರವೀಣ ನೆಟ್ಟಾರು ಇವರ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಕಿರ್ ಮತ್ತು ಶಫೀಕ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೂ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೂ ಸಂಬಂಧ ಇದೆಯೇ, ಎಂಬ ತನಿಖೆ ಪ್ರಾರಂಭವಾಗಿದೆ. ಪ್ರವೀಣ್ ಇವರ ಹತ್ಯೆ ಪಿ ಎಫ್ ಐ ಮತ್ತು ಅದರ ರಾಜಕೀಯ ಸಂಘಟನೆಯಾದ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಇವರು ಮಾಡಿರಬಹುದೆಂದು ಪೊಲೀಸರಿಗೆ ಸಂಶಯವಿದೆ.

ತನಿಖೆ ಎನ್ಐಎ ಕೈಗೆ ಒಪ್ಪಿಸಿ ! ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇವರು ಕೇಂದ್ರದ ಗ್ರಹ ಸಚಿವರಾದ ಅಮಿತ ಶಾಹ ಇವರಿಗೆ ಪತ್ರ ಬರೆದು ರಾಷ್ಟ್ರೀಯ ತನಿಖಾ ದಳಕ್ಕೆ ಈ ಹತ್ಯೆಯ ತನಿಖೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಹತ್ಯೆಯ ಹಿಂದೆ ಹಿಜಾಬ ವಿವಾದ ಬೆಳೆಸಿರುವ ಸಂಘಟನೆಗಳ ಕೈವಾಡ ! – ಗೃಹ ಸಚಿವ ಜ್ಞಾನೇಂದ್ರ

(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳುವುದಕ್ಕಾಗಿ ಉಪಯೋಗಿಸುವ ವಸ್ತ್ರ)

ಇನ್ನೊಂದು ಕಡೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಇವರು, ಪ್ರವೀಣ್ ಹತ್ಯೆಯ ಹಿಂದೆ ಹಿಜಾಬ ವಿವಾದ ಬೆಳೆಸಿರುವ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಜ್ಞಾನೇಂದ್ರ ಮಾತು ಮುಂದುವರಿಸಿ ಈ ಹತ್ಯೆ ಕೇರಳ ಮತ್ತು ಕರ್ನಾಟಕದ ಗಡಿಯ ಹತ್ತಿರ ನಡೆದಿದೆ. ಆದ್ದರಿಂದ ಕೊಲೆಗಾರರು ಹತ್ಯೆ ಮಾಡಿದ ನಂತರ ಕೇರಳಕ್ಕೆ ಓಡಿ ಹೋಗಿರಬಹುದು. ಅವರನ್ನು ಆದಷ್ಟು ಬೇಗನೆ ಬಂಧಿಸಲಾಗುವುದು.

ಕೇಂದ್ರ ಸಚಿವ ಮತ್ತು ಭಾಜಪದ ನಾಯಕರಾದ ಪ್ರಲ್ಹಾದ ಜೋಶಿ ಇವರು ಹತ್ಯೆಯ ಹಿಂದೆ ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಇವರ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.