ಸುಳ್ಯದ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಇವರ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ !

ಇಲ್ಲಿಯವರೆಗೆ 4 ಜನರ ಬಂಧನ

ಬೆಂಗಳೂರು – ಭಾಜಪ ಯುವಮೋರ್ಚಾ ಮುಖಂಡ ಪ್ರವೀಣ ನೆಟ್ಟಾರು ಹತ್ಯೆಯ ಪ್ರಕರಣದಲ್ಲಿ ಸದ್ದಾಂ ಮತ್ತು ಹ್ಯಾರಿಸ ಎಂಬ್ಬಿಬ್ಬರನ್ನು ಬಂಧಿಸಲಾಗಿದೆ. ಅವರ ಮೇಲೆ ದೂರು ದಾಖಲಿಸಲಾಗಿದೆ. ಈ ಹಿಂದೆ ಶಫೀಕ ಮತ್ತು ಝಾಕೀರ ಎಂಬವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆಯಿಂದ ಈ ಇಬ್ಬರ ಹೆಸರು ಬಹಿರಂಗಗೊಂಡಿತು. ಗೃಹಮಂತ್ರಿ ಅರಗ ಜ್ಞಾನೇಂದ್ರ ಕೂಡ ಸದ್ದಾಂ ಮತ್ತು ಹ್ಯಾರಿಸ ಬಂಧನವನ್ನು ದೃಢಪಡಿಸಿದ್ದಾರೆ.

ಅಗಸ್ಟ 1 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು “ತಪ್ಪಿತಸ್ಥರನ್ನು ಆದಷ್ಟು ಬೇಗನೆ ಬಂಧಿಸಲಾಗುವುದು. 2-3 ದಿನಗಳಲ್ಲಿ ಈ ಪ್ರಕರಣವನ್ನು ಅಧಿಕೃತವಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಆಯ್.ಎ) ಒಪ್ಪಿಸಲಾಗುವುದು” ಎಂದು ಹೇಳಿದ್ದರು.

ಬಂಧಿಸಲಾಗಿರುವ ಮತಾಂಧರ ತಂದೆ ‘ನಾವು ಮುಸಲ್ಮಾನರಾಗಿರುವುದರಿಂದ ನಮ್ಮನ್ನು ಗುರಿ ಮಾಡಲಾಗುತ್ತಿದೆ’(ಅಂತೆ)

ಬಂಧಿತ ಶಫೀಕನ ತಂದೆ ಇಬ್ರಾಹಿಂ,’ನನ್ನ ಮಗನನ್ನು ಏಕೆ ಬಂಧಿಸಲಾಗಿದೆ, ಎಂದು ನನಗೆ ತಿಳಿದಿಲ್ಲ. ನಾವು ಮುಸಲ್ಮಾನರು, ಆದ್ದರಿಂದ ನಮ್ಮನ್ನು ಗುರಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.