ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡನ ಮೇಲೆ ಹಲ್ಲೆ : ಸೈಯದ್ ವಾಸಿಂನ ಬಂಧನ !

ಕೋಲಾರ (ಕರ್ನಾಟಕ) – ಇಲ್ಲಿಯ ಮಾಲೂರು ಕ್ಷೇತ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಮತ್ತು ಕೋಲಾರ ಜಿಲ್ಲೆಯ ಸಚಿವ ಶ್ರೀ. ರವಿ ಇವರ ಮೇಲೆ ಸೈಯದ್ ವಾಸಿಂ ಎಂಬ ಮತಾಂಧ ಮುಸಲ್ಮಾನನಿಂದ ಚಾಕು ಮೂಲಕ ಹಲ್ಲೆ ಮಾಡಿದ್ದಾನೆ. ಇದರಲ್ಲಿ ರವಿ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯನ್ನು ಖಂಡಿಸಿ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮಾಲೂರಿನಲ್ಲಿ ಆಗಸ್ಟ್ ೬ ರಂದು ನಿಷೇಧ ಆಂದೋಲನ ನಡೆಸಿದರು.

ಇಲ್ಲಿಯ ಮಾರಿಕಾಂಬಾ ದೇವಸ್ಥಾನದ ಹತ್ತಿರ ರವಿ ಅವರ ಅಂಗಡಿ ಇದೆ. ಅಲ್ಲಿ ಸೈಯ್ಯದ್ ವಾಸಿಂ ಮತ್ತು ಇನ್ನೊಬ್ಬರೊಂದಿಗೆ ಯಾವುದೋ ಕಾರಣದಿಂದ ವಾದ ವಿವಾದ ನಡೆಯಿತು. ಇಬ್ಬರಲ್ಲಿನ ವಾದ ವಿವಾದ ಬಗೆಹರಿಸಲು ರವಿ ಮಧ್ಯಸ್ಥಿಕೆ ಮಾಡುವಾಗ ವಾಸೀಂನು ಅವರಿಗೆನೇ ಅವಾಚ್ಯ ಪದಗಳಿಂದ ನಿಂದಿಸಿ ಅವರ ಮೇಲೆ ಚಾಕುವಿನಿನಿಂದ ದಾಳಿ ಮಾಡಿದನು. ರವಿ ಇವರು ಮಾಲೂರು ಪೊಲೀಸರಲ್ಲಿ ದೂರು ನೀಡಿದ್ದಾರೆ ಮತ್ತು ವಾಸೀಂನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಸರುಕ್ಷಿತ ಹಿಂದೂಗಳ ನಾಯಕ ! ಹಿಂದುತ್ವನಿಷ್ಠರ ಮೇಲಿನ ದಾಳಿಗಳು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಏಕೈಕ ಉಪಾಯವಾಗಿದೆ !