‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೊದಲು ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲಾಗುವುದು !(ಅಂತೆ)

ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು.

ಹಿಂದೂ ಧರ್ಮವನ್ನು ತೊರೆದವರನ್ನು ಪುನಃ ಧರ್ಮಕ್ಕೆ ಕರೆತರಲು ಮಠಗಳು ಮತ್ತು ದೇವಾಲಯಗಳು ವಾರ್ಷಿಕ ಗುರಿಗಳನ್ನು ನಿಗದಿಪಡಿಸಬೇಕು ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ

ಯಾರು ವಿವಿಧ ಕಾರಣಗಳಿಗಾಗಿ ಸನಾತನ ಧರ್ಮವನ್ನು ತ್ಯಜಿಸಿ ಇತರ ಧರ್ಮಕ್ಕೆ ಪ್ರವೇಶಿದರೋ ಅವರನ್ನು ಮರಳಿ ಕರೆತರಲು ದೇವಾಲಯಗಳು ಮತ್ತು ಮಠಗಳು ವರ್ಷಪೂರ್ತಿ ಗುರಿಗಳನ್ನು ನಿಗದಿಪಡಿಸಬೇಕು.

ಕರ್ನಾಟಕ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ !

ರಾಜ್ಯದಲ್ಲಿ ಭಾಜಪದ ಸರಕಾರವಿದೆ. ಕೇಂದ್ರದಲ್ಲೂ ಭಾಜಪ ಸರಕಾರವಿರುವುದರಿಂದ ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ತರಲು ಭಾಜಪ ಹೆಜ್ಜೆ ಇಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !

ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಶ್ರೀ. ವಿವೇಕ ಸುಬ್ಬಾ ರೆಡ್ಡಿ ಹಾಗೂ ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆ

ಬೆಂಗಳೂರು ವಕೀಲರ ಸಂಘದ ಚುನಾವಣೆಯು ಡಿಸೆಂಬರ್ ೧೯ ರಂದು ನಡೆಯಿತು. ಇದರಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವಿವೇಕ ರೆಡ್ಡಿ ಹಾಗೂ ಸಂಘದ ಕಾರ್ಯಕಾರಿ ಸಮಿತಿಗೆ ನ್ಯಾಯವಾದಿ ಅಮೃತೇಶ ಎನ್.ಪಿ. ಆಯ್ಕೆಯಾಗಿದ್ದಾರೆ.

‘ಮಸೀದಿಯ ಜಾಗದಲ್ಲಿ ದೇವಾಲಯಗಳನ್ನು ಕಟ್ಟಿದರೆ ಅಲ್ಲಿಯೂ ‘ಅಲ್ಲಾ ಹು ಅಕಬರನ ಘೋಷಣೆ ಮೊಳಗಲಿದೆ ! (ಯಂತೆ)

ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

‘ಬಲಾತ್ಕಾರ ನಿಲ್ಲಿಸಲು ಸಾಧ್ಯವಿಲ್ಲದಿದ್ದರೆ, ಮಲ್ಕೊಳ್ಳಿ ಮತ್ತು ಮಜಾ ಮಾಡಿ’, ಎಂದು ಕರ್ನಾಟಕದ ವಿಧಾನಸಭೆಯಲ್ಲಿ ಹೇಳಿದ್ದ ಕಾಂಗ್ರೆಸ್ ಶಾಸಕ ರಮೇಶ ಕುಮಾರ ಇವರಿಂದ ಕ್ಷಮೆ ಯಾಚನೆ !

ಕರ್ನಾಟಕದ ವಿಧಾನಸಭೆಯಲ್ಲಿ ಮಾತನಾಡುವಾಗ ‘ಬಲಾತ್ಕಾರ ತಡೆಯಲು ಸಾಧ್ಯವಿಲ್ಲದಿದ್ದರೆ, ಮಲಗಿ ಮತ್ತು ಮಜಾ ಮಾಡಿ’, ಎಂದು ಹೇಳಿಕೆ ನೀಡುವ ಕಾಂಗ್ರೆಸ್‌ನ ಶಾಸಕ ಮತ್ತು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಇವರ ಮೇಲೆ ಎಲ್ಲಕಡೆಯಿಂದಲೂ ಟೀಕೆಯಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಲಿರುವ ಕರ್ನಾಟಕ ಸರಕಾರ !

ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಕೂನ್ನೂರಿನಲ್ಲಿ (ತಮಿಳುನಾಡು) ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ

ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಮೇಲೆ ಬೆಂಗಳೂರಿನ ವಾಯುಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಅವರ ದೇಹ ಶೇ. ೪೫ ರಷ್ಟು ಸುಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅವರು ಡಿಸೆಂಬರ್ ೧೫ ರಂದು ನಿಧನರಾದರು.

ಗೋವುಗಳ ರಕ್ಷಣೆಗಾಗಿ ಖಡ್ಗಗಳು ಮತ್ತು ಇತರ ಆಯುಧಗಳನ್ನು ಖರೀದಿಸಿ! – ವಿಎಚ್‌ಪಿ ನಾಯಕಿ ಸಾಧ್ವಿ ಸರಸ್ವತಿ

ಸಂಚಾರವಾಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಜನರು ಗೋವುಗಳ ರಕ್ಷಣೆಗಾಗಿ ಖಡ್ಗ ಮತ್ತಿತರ ಆಯುಧಗಳನ್ನು ಖರೀದಿಸಬೇಕು. ಲಕ್ಷಾಂತರ ರೂಪಾಯಿ ಮೌಲ್ಯದ ಸಂಚಾರವಾಣಿ ಖರೀದಿಸಲು ಜನರು ಶಕ್ತರಾಗಿದ್ದರೆ, ಅವರು ನಮ್ಮ ಹಸುಗಳನ್ನು ರಕ್ಷಿಸಲು ಖಂಡಿತವಾಗಿಯೂ ಆಯುಧಗಳನ್ನು ಖರೀದಿಸಿ ಮನೆಯಲ್ಲಿ ಇರಿಸಬಹುದು.

ಸರಕಾರೀಕರಣದ ವಿರುದ್ದ ಹೋರಾಟ ಮುಂದುವರಿಸಬೇಕು ! – ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು

ದೇವಸ್ಥಾನಗಳ ಸರಕಾರೀಕರಣ ಸರಿಯಲ್ಲ. ಸರಕಾರೀಕರಣದ ವಿರುದ್ದದ ಹೋರಾಟವನ್ನ ವ್ಯವಸ್ಥಿತವಾಗಿ ನಡೆಸಬೇಕಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.