ಬೆಂಗಳೂರಿನ ಮಹಾವಿದ್ಯಾಲಯದಲ್ಲಿ ಸಿಖ್ ವಿದ್ಯಾರ್ಥಿನಿಗೆ ಪಗಡಿ ತೆಗೆಯಲು ಹೇಳಿದ್ದರಿಂದ ಸಿಖ್‌ರಲ್ಲಿ ಆಕ್ರೋಶ

ಬೆಂಗಳೂರು – ಇಲ್ಲಿಯ ಒಂದು ಮಹಾವಿದ್ಯಾಲಯದ ವ್ಯವಸ್ಥಾಪಕರು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಸಂದರ್ಭ ನೀಡುತ್ತಾ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ‘ತುರ್ಬಾನ್’ ಅಂದರೆ ಪಗಡಿ ತೆಗೆಯಲು ಹೇಳಿದಾಗ ವಿದ್ಯಾರ್ಥನಿಯು ಪಗಡಿ ತೆಗೆಯಲು ನಿರಾಕರಿಸಿದಳು. ಅದರ ನಂತರ ವ್ಯವಸ್ಥಾಪಕರು ಆಕೆಯ ತಂದೆಯಂದಿಗೆ ಚರ್ಚೆ ನಡೆಸಿದರು. ‘ಒಬ್ಬ ಸಿಖ್ ವ್ಯಕ್ತಿಯ ಪಗಡಿಯ ಮೇಲೆ ಎಷ್ಟು ಶ್ರದ್ಧೆ ಇದೆ ಇದು ನಮಗೆ ತಿಳಿದಿದೆ; ಆದರೆ ನ್ಯಾಯಾಲಯದ ಆದೇಶದಿಂದ ನಾವು ಅಸಹಾಯಕರಾಗಿದ್ದೇವೆ’, ಎಂದು ವ್ಯವಸ್ಥಾಪಕರು ವಿದ್ಯಾರ್ಥಿನಿಯ ತಂದೆಗೆ ಹೇಳಿದರು.

ಈ ಘಟನೆಯಿಂದ ಸಿಖ್ ಸಮುದಾಯ ರೊಚ್ಚಿಗೆದ್ದಿದ್ದಾರೆ. ‘ಒಬ್ಬ ಸಿಖ್ ವ್ಯಕ್ತಿಗೆ ಪಗಡಿ ತೆಗೆಯಲು ಹೇಳುವುದು, ಇದು ಸಿಖ್ ಧರ್ಮದ ಅವಮಾನವಾಗಿದೆ. ದೇಶದಲ್ಲಿ ಮೊದಲಿನಿಂದ ಪ್ರಚಲಿತವಿರುವ ಪದ್ಧತಿಗಳಿಗೆ ಅನುಮತಿ ನೀಡಬೇಕು. ಆದ್ದರಿಂದ ಜನರಿಗೆ ತೊಂದರೆಯಾಗುವುದಿಲ್ಲ’, ಎಂದು ಸಿಖ್ ಧರ್ಮದ ಜನರು ಒತ್ತಾಯಿಸಿದ್ದಾರೆ.