ಹರ್ಷರವರ ಹತ್ಯೆಯ ಹಿಂದಿದೆ ಭಯೋತ್ಪಾದನೆಯ ‘ಕೇರಳ ಮಾಡೆಲ್’ ! – ಭಾಜಪದ ಸಂಸದ ತೇಜಸ್ವೀ ಸೂರ್ಯಾ

(ಕೇರಳದಲ್ಲಿ ಜಿಹಾದಿಗಳು ಹಿಂದುತ್ವನಿಷ್ಠರನ್ನು ಅತ್ಯಂತ ಕ್ರೂರತನದಿಂದ ಹತ್ಯೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇದನ್ನೇ ‘ಕೇರಳ ಮಾಡೆಲ್’ ಎಂದು ಹೇಳಲಾಗುತ್ತದೆ.)

ಬೆಂಗಳೂರು (ಕರ್ನಾಟಕ) – ಕರ್ನಾಟಕದಲ್ಲಿ ಹರ್ಷರವರನ್ನು ಯಾವ ರೀತಿಯಲ್ಲಿ ಹತ್ಯೆ ಮಾಡಲಾಗಿದೆಯೋ ಅದೇ ರೀತಿಯ ಹತ್ಯೆಗಳನ್ನು ನಾವು ನೋಡುತ್ತ ಬಂದಿದ್ದೇವೆ. ಇದು ಮೊದನೇ ಬಾರಿ ನಡೆದ ಘಟನೆಯಲ್ಲ. ಇದು ಭಯೋತ್ಪಾದನೆಯ ‘ಕೇರಳ ಮಾಡೆಲ್’ ಆಗಿದೆ, ಎಂಬ ಹೇಳಿಕೆಯನ್ನು ಸಂಸದರಾದ ತೇಜಸ್ವೀ ಸೂರ್ಯರವರು ನೀಡಿದ್ದಾರೆ. ಅವರು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನಾದ ಹರ್ಷರವರ ಹತ್ಯೆಯ ನಂತರ ಅವರ ಮನೆಗೆ ಹೋಗಿ ಅವರ ಕುಟುಂಬದವರನ್ನು ಭೇಟಿಯಾದರು. ಆಗ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರು ಕರ್ನಾಟಕ ಮತ್ತು ದೇಶದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳಿವೆ ಎಂದು ಹೇಳಿದ್ದರು.

ಸಂಸದ ತೇಜಸ್ವೀ ಸೂರ್ಯರವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಹರ್ಷರವರು ಬಜರಂಗದಳದ ಓರ್ವ ಸಮರ್ಪಿತ ಕಾರ್ಯಕರ್ತರಾಗಿದ್ದರು, ಅವರು ಹಿಂದುತ್ವಕ್ಕಾಗಿ ಜೀವಿಸಿದ್ದರು ಮತ್ತು ಹಿಂದುತ್ವಕ್ಕಾಗಿಯೇ ಪ್ರಾಣ ನೀಡಿದರು.

೨. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಇಸ್ಲಾಮಿ ಕಟ್ಟರತೆಯು ಹರ್ಷರವರ ಪ್ರಾಣ ತೆಗೆದಿದೆ. ನಾನು ಸರಕಾರದ ಬಳಿ ‘ಇದು ಹತ್ಯೆಯಾಗಿರದೇ ಭಯೋತ್ಪಾದಕ ಕೃತ್ಯವಾಗಿದೆ, ಈ ಪ್ರಕರಣವನ್ನು ಕಲಮ ೩೦೨ರಂತೆ (ಕೊಲೆಗೆ ಹಾಕಲಾಗುವ ಕಲಮು) ಅಲ್ಲದೇ, ಕಾನೂನು ಬಾಹಿರ ಕೃತ್ಯಗಳ ಅಧಿನಿಯಮಗಳ ಅಡಿಯಲ್ಲಿ ಪರಿಗಣಿಸಬೇಕು’ ಎಂದು ವಿನಂತಿಸುತ್ತೇನೆ.

೩. ಈ ಹತ್ಯೆಯು ವೈಯಕ್ತಿಕ ಕಾರಣಗಳಿಂದಾಗಿ ಆಗಿಲ್ಲ. ಕೇವಲ ಹರ್ಷನು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದರಿಂದಾಗಿ ಆತನ ಹತ್ಯೆಯಾಗಿದೆ. ಹತ್ಯೆ ಮಾಡಿದವರು ಸುಪಾರಿ ಪಡೆದು ಹತ್ಯೆ ಮಾಡಿದ್ದರೂ ಮುಖ್ಯ ಸೂತ್ರಧಾರನು ಪರದೆಯ ಹಿಂದೆ ಇದ್ದಾನೆ.