ಹರ್ಷನ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ೮ ಮತಾಂಧರ ಬಂಧನ

ನ್ಯಾಯಾಲಯದಲ್ಲಿ ಅವರ ಮೇಲೆ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಆದಷ್ಟು ಬೇಗ ಗಲ್ಲು ಶಿಕ್ಷೆಯಾಗಲು ರಾಜ್ಯಸರಕಾರವು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಶಿವಮೊಗ್ಗ (ಕರ್ನಾಟಕ) – ಬಜರಂಗದಳದ ಕಾರ್ಯಕರ್ತರಾದಿ ಹರ್ಷರವರ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯ ವರೆಗೆ ಪೊಲೀಸರು ೮ ಮತಾಂಧರನ್ನು ಬಂಧಿಸಿದ್ದಾರೆ. ಆಸಿಫ, ಸಯ್ಯದ ನದೀಮ, ರೆಹಾನ ಶರೀಫ, ನಿಹಾನ, ಅಬ್ದುಲ ಅಫನಾನ ಮತ್ತು ಕಾಶಿಫ ಇವು ಇವರಲ್ಲಿನ ೬ ಜನರ ಹೆಸರುಗಳು. ಈ ಪ್ರಕರಣದಲ್ಲಿ ಒಟ್ಟು ೧೨ ಜನರ ವಿಚಾರಣೆ ನಡೆಸಲಾಯಿತು. ಅನಂತರ ೮ ಜನರನ್ನು ಬಂಧಿಸಲಾಯಿತು. ಈ ಆರೋಪಿಗಳು ೨೦ ರಿಂದ ೨೨ ವರ್ಷ ವಯಸ್ಸಿನವರಾಗಿದ್ದಾರೆ.

(ಸೌಜನ್ಯ : News18 Kannada)

೧. ಪೊಲೀಸರು ‘೨೦೧೬-೧೭ರಲ್ಲಿ ಹರ್ಷರವರ ಮೇಲೆ ಧಾರ್ಮಿಕ ಭಾವನೆಯನ್ನು ನೋಯಿಸಿರುವ ಬಗ್ಗೆ ಅಪರಾಧವನ್ನು ದಾಖಲಿಸಲಾಗಿತ್ತು’, ಎಂಬ ಮಾಹಿತಿಯನ್ನು ನೀಡಿದ್ದಾರೆ. ಹರ್ಷರವರ ಹತ್ಯೆಯಲ್ಲಿ ರಿಯಾಜ, ಮುಜಾಹಿದ, ಕಾಸಿಫ ಮತ್ತು ಆಸಿಫರ ಸಹಭಾಗವಿತ್ತು, ಆದರೆ ನದೀಮ ಮತ್ತು ಅಫಾನರು ಸಂಚು ರೂಪಿಸಿದ್ದರು. ಇದರಲ್ಲಿ ಕಾಸಿಫನು ಮುಖ್ಯ ಸೂತ್ರಧಾರನಾಗಿದ್ದಾನೆ.

೨. ಹರ್ಷರವರ ಹತ್ಯೆಯ ನಂತರ ನಗರದಲ್ಲಿ ಹಿಂಸಾಚಾರ ಮತ್ತು ಸುಡುವ ೧೪ ಬೇರೆ ಬೇರೆ ಘಟನೆಗಳು ನಡೆದಿವೆ. ೩ ಪ್ರಕರಣಗಳಲ್ಲಿ ದೂರನ್ನು ನೋಂದಾಯಿಸಲಾಗಿದೆ. ಪೊಲೀಸರು ಸುಡುವುದು ಮತ್ತು ಹಿಂಸಾಚಾರ ನಡೆಸಿ ವಾಹನ ಹಾಗೂ ಸಂಪತ್ತಿನ ಹಾನಿ ಮಾಡಿದವರನ್ನು ಹುಡುಕುತ್ತಿದ್ದಾರೆ.