ಅಂತಿಮ ತೀರ್ಪು ನೀಡುವ ವರೆಗೆ ಧಾರ್ಮಿಕ ವಸ್ತ್ರಗಳ ಮೇಲೆ ನಿರ್ಬಂಧವಿರಲಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯದ ಸ್ಪಷ್ಟ ಹೇಳಿಕೆ

ಬೆಂಗಳೂರು (ಕರ್ನಾಟಕ) – ಹಿಜಾಬಿನ ಮೇಲೆ ನಿರ್ಬಂಧ ಹೇರುವ ಬಗೆಗಿನ ಅರ್ಜಿಯ ಮೇಲೆ ಅಂತಿಮ ತೀರ್ಪು ನೀಡುವ ವರೆಗೆ ಶಾಲೆ ಮತ್ತು ಮಹಾವಿದ್ಯಾಲಯಗಳು ನಿರ್ಧರಿಸಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಾಲಿಸಲೇಬೇಕು, ಎಂಬ ಸ್ಪಷ್ಟ ಹೇಳಿಕೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಫೆಬ್ರುವರಿ ೨೩ರಂದು ನೀಡಿದೆ. ಸಮಯದಲ್ಲಿ ‘ಹಿಜಾಬಿಗೆ ಸಂಬಂಧಿಸಿದಂತೆ ತಾವು ನೀಡಿರುವ ಮಧ್ಯಂತರದ ಆದೇಶದ ಬಗ್ಗೆ ಸ್ಪಷ್ಟತೆ ನೀಡಬೇಕು. ನೀವು (ನ್ಯಾಯಾಲಯವು) ನೀಡಿರುವ ಆದೇಶದ ಮೇರೆಗೆ ಅನೇಕ ಮಹಾವಿದ್ಯಾಲಯಗಳು ಹಿಜಾಬನ್ನು ಧರಿಸಿ ಬಂದಿರುವ ವಿದ್ಯಾ ರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ’ ಎಂದು ಅರ್ಜಿದಾರರ ಪರ ನ್ಯಾಯವಾದಿಗಳಾದ ಮಹಮ್ಮದ ತಾಹಿರರವರು ಆಲಿಕೆಯ ಹೇಳಿದ್ದರು. ಆಗ ನ್ಯಾಯಮೂರ್ತಿಗಳಾದ ರಿತುರಾಜ ಅವಸ್ಥಿಯವರೂ ಸ್ಪಷ್ಟವಾಗಿ ಉತ್ತರಿಸಿದರು. ‘ನಮ್ಮ ಈ ಆದೇಶವು ಕೇವಲ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದೆ’ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ. ‘ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಿಗೂ ಹಿಜಾಬ ತೆಗೆಯಲು ಹೇಳಲಾಗುತ್ತಿದೆ’ ಎಂದು ನ್ಯಾಯವಾದಿಗಳು ಆಲಿಕೆಯ ಸಮಯದಲ್ಲಿ ಆರೋಪಿಸಿದರು, ಈ ಆರೋಪದ ಮೇರೆಗೆ ನ್ಯಾಯಾಲಯವು ಈ ತೀರ್ಪನ್ನು ನೀಡಿತು.

ನ್ಯಾಯವಾದಿ ನಾಗಾನಂದರವರು ಮಂಡಿಸಿರುವ ಯುಕ್ತಿವಾದ

೧. ನ್ಯಾಯವಾದಿ ನಾಗಾನಂದರವರು ಅರ್ಜಿದಾರರಾದ ಮುಸಲ್ಮಾನ ಹುಡುಗಿಯರ ಆಧಾರ ಕಾರ್ಡನಲ್ಲಿರುವ ಛಾಯಾಚಿತ್ರವನ್ನು ತೋರಿಸಿದರು. ಅದರಲ್ಲಿ ಆ ಹುಡುಗಿಯರು ಹಿಜಾಬ ಧರಿಸಿರಲಿಲ್ಲ. ಇದರಿಂದ ನಾಗಾನಂದರವರು ‘ಹಿಜಾಬನ್ನು ಸಮರ್ಥಿಸುವವರು ಯಾವಾಗಲೂ ಹಿಜಾಬನ್ನು ಧರಿಸಬೇಕು. ಹೀಗಿದ್ದರೆ ಆಧಾರ ಕಾರ್ಡನಲ್ಲಿರುವ ಛಾಯಾಚಿತ್ರದಲ್ಲಿ ಅವರು ಹಿಜಾಬನ್ನು ಧರಿಸಿರುತ್ತಿದ್ದರು’ ಎಂದು ಹೇಳಿದರು.

೨. ‘ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ’ ಎಂಬ ಸಂಘಟನೆಯು ಮಹಾವಿದ್ಯಾಲಯಗಳಲ್ಲಿ ಹಿಜಾಬಿಗೆ ಅನುಮತಿ ದೊರಕಿಸಿ ಕೊಡಲು ಇಚ್ಛಿಸುತ್ತಿದೆ. ೨೦೦೪ರಿಂದ ಸಮವಸ್ತ್ರ ಧರಿಸುವುದನ್ನು ಖಡ್ಡಾಯಗೊಳಿಸಲಾಗಿದೆ ಮತ್ತು ಅಂದಿನಿಂದ ಎಲ್ಲರೂ ಸಮವಸ್ತ್ರವನ್ನು ಧರಿಸುತ್ತಿದ್ದಾರೆ. ಆದರೆ ಈಗ ಈ ಸಂಘಟನೆಯು ಜನರನ್ನು ಹಿಜಾಬಿಗಾಗಿ ಕೆರಳಿಸುತ್ತಿದೆ. ಅನೇಕ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಬೆದರಿಸಿರುವ ಬಗ್ಗೆ ಆರೋಪಿಸಲಾಗುತ್ತಿದೆ. ವಾಸ್ತವದಲ್ಲಿ ಶಿಕ್ಷಕರು ‘ನೀವು ತರಗತಿಯಲ್ಲಿ ಕುಳಿತುಕೊಳ್ಳದಿದ್ದರೆ ನಿಮ್ಮನ್ನು ಗೈರು ಎಂದು ಪರಿಗಣಿಸಲಾಗುವುದು’ ಎಂದು ಹೇಳಿದ್ದರು, ಎಂದು ವಿದ್ಯಾರ್ಥಿನಿಯರು ಹೇಳಿದ್ದರು. ಇದನ್ನು ಬೆದರಿಸುವುದು ಎಂದು ಹೇಗೆ ಹೇಳಬಹುದು ? ಈ ಪ್ರಕರಣವನ್ನು ಖಟ್ಲೆಯಾಗಿಸಿ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಲಾಗುತ್ತಿದೆ.

೩. ಓರ್ವ ಹುಡುಗನು ಮನೆಯಲ್ಲಿ ಅಯೋಗ್ಯವಾಗಿ ವರ್ತಿಸಿದರೆ ಅವನಿಗೆ ತಿಳಿಸಿ ಹೇಳಬೇಕು. ಆದರೂ ಕೇಳದಿದ್ದರೆ ಅವನಿಗೆ ಕೆನ್ನೆಗೆ ಹೊಡೆಯಬೇಕಾಗುತ್ತದೆ. ಇದು ಪಾಲಕರ ಅಧಿಕಾರವಾಗಿದೆ. ಹಾಗೆಯೇ ತರಗತಿಯಲ್ಲಿಯೂ ಮಾಡಬೇಕಾಗುತ್ತದೆ.

೪. ಸರಕಾರವು ‘ನೀವು ಮಕ್ಕಳಿಗೆ ಶಾಲೆಗೆ ಕಳುಹಿಸುತ್ತಿದ್ದರೆ, ಅವರಿಗೆ ಶಿಕ್ಷಕರು ಶಿಸ್ತನ್ನು ಕಲಿಸುತ್ತಾರೆ’ ಎಂದು ಹೇಳುತ್ತದೆ. ಅನೇಕ ರೂಢಿಪ್ರಿಯ ಬ್ರಾಹ್ಮಣರು ಉಪನಯನದ ನಂತರ ಶರ್ಟ ಧರಿಸುವುದಿಲ್ಲ. ಅವರು ಧರ್ಮದ ಪಾಲನೆಗಾಗಿ ಶರ್ಟ ಧರಿಸದೇ ಶಾಲೆಗೆ ಬಂದರೆ ಏನಾಗಬಹುದು ?’ ಎಂಬ ಪ್ರಶ್ನೆಯನ್ನು ಅವರು ಕೇಳಿದರು.