ಮಂಗಳೂರು : ಹತ್ಯೆಯಾಗಿದ್ದ ಹರ್ಷ ಇವರ ವಿರುದ್ಧ ಅವಹೇಳನಕಾರಿ ‘ಪೋಸ್ಟ್’
ಮಂಗಳೂರು : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವಿರುದ್ಧ ‘ಮಂಗಳೂರು ಮುಸ್ಲಿಂ’ ಹೆಸರಿನ ಫೇಸ್.ಬುಕ್ ಪೇಜ್‌ನಲ್ಲಿ ಅವಹೇಳನಕಾರಿ ಪೋಸ್ಟ್ ವೈರಲ್ ಆದನಂತರ ಆ ಪೇಜ್ ವಿರುದ್ಧ ಮಂಗಳೂರು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಹರ್ಷ ಇವರನ್ನು ‘ಶಿವಮೊಗ್ಗದ ಬೀದಿ ನಾಯಿ’ ಎಂದು ಉಲ್ಲೇಖಿಸಲಾಗಿದೆ.
(ಸೌಜನ್ಯ : Dighvijay 24X7 News)
ಹಿಂದೂ ದೇವತೆಗಳ, ಹಿಂದೂಗಳ ಭಾವನೆಗಳ ಬಗ್ಗೆ ಪೋಸ್ಟ್ ಮಾಡಿದ್ದರಿಂದ ಈ ಪೇಜ್ ಕೆಲವು ಸಮಯ ಸ್ಥಗಿತವಾಗಿತ್ತು. ೨೦೧೫ ರಲ್ಲಿ ಹರ್ಷನು ‘ಧರ್ಮನಿಂದನೆ’ ಮಾಡಿದ್ದಾನೆ ಎಂದು ಆರೋಪಿಸಿ ‘ಧರ್ಮನಿಂದನೆ’ ಮಾಡಿದವರನ್ನು ಎಂದಿಗೂ ಬಿಡಲ್ಲ’ ಎಂದು ಬೆದರಿಕೆ ನೀಡಲಾಗಿತ್ತು; ಆದರೆ ಈಗ ಈ ಪೇಜ್ ಪುಃನ ತಲೆ ಎತ್ತುತ್ತಿದೆ. ಈ ಬಗ್ಗೆ ಮಂಗಳೂರು ಮುಸ್ಲಿಮ್ ಫೇಸ್.ಬುಕ್ ಪೇಜ್‌ನಲ್ಲಿ ಬೆದರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಮುಸ್ಲಿಂ ಪೇಜ್ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದಲ್ಲಿನ ಹಿಂದುತ್ವನಿಷ್ಠರ ಹತ್ಯಾಕಾಂಡವು ನಡೆಯುತ್ತಲೇ ಇದೆ ! ಯಾರ ಹತ್ಯೆಯಾಗಿದೆ ಎಂಬುದನ್ನು ತಿಳಿದುಕೊಳ್ಳಿ !೧. ಸುಖಾನಂದ ಶೆಟ್ಟಿ (ವಯಸ್ಸು ೩೨ ವರ್ಷ), ಭಾಜಪದ ನೇತಾರರು, ಮಂಗಳೂರು, ಜಿ. ದಕ್ಷಿಣ ಕನ್ನಡ (ಡಿಸೆಂಬರ್ ೨೦೦೬) ೨. ಸಿ. ಎನ್. ಶ್ರೀನಿವಾಸ, ನೇತಾರರು, ಭಾಜಪ, ಬೆಂಗಳೂರು (ಮಾರ್ಚ ೨೦೧೪) ೩. ಲಕ್ಷ್ಮಣ (ವಯಸ್ಸು ೩೭ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನಾ, ತಾ. ದೇವರಗೀ, ಜಿಲ್ಲೆ ಶಿವಮೊಗ್ಗ (ಸಪ್ಟೆಂಬರ್ ೨೦೧೪) ೪. ಕೊರೆಪ್ಪಾ ಕೊಟರಪ್ಪಾ ಜಾವರೂ (ವಯಸ್ಸು ೩೨ ವರ್ಷ), ಕಾರ್ಯಕರ್ತರು, ಶ್ರೀರಾಮ ಸೇನಾ, ಹಳ್ಳಿಕೇರಿ, ಧಾರವಾಡ (ಅಕ್ಟೋಬರ್ ೨೦೧೪) ೫. ವಿಶ್ವನಾಥನ್ ಶೆಟ್ಟಿ (ವಯಸ್ಸು ೩೮ ವರ್ಷ), ಸಂಘ ಸ್ವಯಂಸೇವಕರು, ಶಿವಮೊಗ್ಗ (ಫೆಬ್ರುವರಿ ೨೦೧೫) ೬. ವಾಮನ ಪೂಜಾರಿ, ಹಿಂದುತ್ವನಿಷ್ಠ , ಮೂಡಬಿದ್ರಿ, ಜಿಲ್ಲೆ ದಕ್ಷಿಣ ಕನ್ನಡ (ಸಪ್ಟೆಂಬರ ೨೦೧೫) ೭. ಪ್ರಶಾಂತ ಪೂಜಾರಿ, ಕಾರ್ಯಕರ್ತ, ಬಜರಂಗದಳ, ಮೂಡಬಿದ್ರಿ, ಜಿಲ್ಲೆ ದಕ್ಷಿಣ ಕನ್ನಡ (ಸಪ್ಟೆಂಬರ ೨೦೧೫) ೮. ಡಿ. ಕೆ. ಕುಟಪ್ಪಾ, ವಿಶ್ವಹಿಂದೂ ಪರಿಷದ್, ಮಡಿಕೇರಿ, ಜಿಲ್ಲೆ ಕೊಡಗು (ನವೆಂಬರ್ ೨೦೧೫) ೯. ರಾಜೇಶ ಕೋಟ್ಯಾನ, ಉಲ್ಲಾಳ, ಜಿಲ್ಲೆ ದಕ್ಷಿಣ ಕನ್ನಡ (ಎಪ್ರಿಲ್ ೨೦೧೬) ೧೦. ಅಶ್ವತ್ಥ, ನೇತಾರರು, ಭಾಜಪ, ಅತ್ತಿಬೆಲೆ, ಜಿಲ್ಲೆ ಬೆಂಗಳೂರು (ಮೇ ೨೦೧೬) ೧೧. ಯೋಗೇಶ ಗೌಡ, ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಮತ್ತು ಭಾಜಪದ ನೇತಾರರು, ಧಾರವಾಡ (ಜೂನ ೨೦೧೬) ೧೨. ಪ್ರವೀಣ ಪೂಜಾರಿ, ಸಂಘ ಸ್ವಯಂಸೇವಕ, ಕುಶಾಲನಗರ, ಜಿಲ್ಲೆ ಕೊಡಗು (ಅಗಸ್ಟ ೨೦೧೬) ೧೩. ರುದ್ರೇಶ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಬೆಂಗಳೂರು (ಅಕ್ಟೋಬರ್ ೨೦೧೬) ೧೪. ಕಾರ್ತಿಕ ರಾಜ, ಸಂಘ ಸ್ವಯಂಸೇವಕ ಹಾಗೂ ಭಾಜಪದ ಕಾರ್ಯಕರ್ತ, ಮಂಗಳೂರು, ಜಿಲ್ಲೆ ದಕ್ಷಿಣ ಕನ್ನಡ (ಅಕ್ಟೋಬರ್ ೨೦೧೬) ೧೫. ರವಿ ಮಗಳಿ, ನೇತಾರರು, ಭಾಜಯುಮೋ, ಪರಿಯಾಪಟ್ಟಣ, ಜಿಲ್ಲೆ ಮೈಸೂರು (ನವೆಂಬರ್ ೨೦೧೬) ೧೬. ಸುನೀಲ ಡೊಂಗರೆ, ಕಾರ್ಯಕರ್ತ, ಭಾಜಪ, ಔರದ, ಜಿಲ್ಲೆ ಬೀದರ (ನವೆಂಬರ್ ೨೦೧೬) ೧೭. ಶ್ರೀನಿವಾಸ ಪ್ರಸಾದ (ವಾಸು), ಹಿಂದುತ್ವನಿಷ್ಠ, ಬೊಮ್ಮನಹಳ್ಳಿ, ಜಿಲ್ಲೆ ಬೆಂಗಳೂರು (ಮಾರ್ಚ ೨೦೧೭) ೧೮. ಹರೀಶ, ಹಿಂದುತ್ವನಿಷ್ಠ, ಚಂದಾಪುರ, ತಾಲೂಕು ಆನೇಕಲ, ಜಿಲ್ಲೆ ಬೆಂಗಳೂರು (ಜೂನ ೨೦೧೭) ೧೯. ಶರತ ಮಡಿವಾಳ (ವಯಸ್ಸು ೨೮ ವರ್ಷ), ಸಂಘ ಸ್ವಯಂಸೇವಕ, ಕಂಡುರ, ಮಂಗಳೂರು, ಜಿಲ್ಲೆ ದಕ್ಷಿಣ ಕನ್ನಡ (ಜುಲೈ ೨೦೧೭) ೨೦. ಚಿಕ್ಕತಿಮ್ಮೇಗೌಡ, ಕಾರ್ಯಕರ್ತ, ಭಾಜಪ, ಬೆಂಗಳೂರು (ನವೆಂಬರ್ ೨೦೧೭) ೨೧. ಪರೇಶ ಮೇಸ್ತ (ವಯಸ್ಸು ೧೮ ವರ್ಷ), ಹೊನ್ನಾವರ, ಜಿಲ್ಲೆ ಉತ್ತರ ಕನ್ನಡ (ಡಿಸೆಂಬರ್ ೨೦೧೭) ೨೨. ಮಹಾದೇವ ಕಾಳೆ, (ವಯಸ್ಸು ೫೦ ವರ್ಷ), ಕಾರ್ಯಕರ್ತ, ಭಾಜಪ, ಅಫಜಲಪುರ, ಜಿಲ್ಲೆ ಕಲಬುರ್ಗಿ (೨೦೧೭) ೨೩. ರಮೇಶ ಬಂದಿ, ಕಾರ್ಯಕರ್ತ, ಭಾಜಪ, ಬಳ್ಳಾರಿ (೨೦೧೭) ೨೪. ತಿಪ್ಪೇಶ, ಯುವನೇತಾರ, ಭಾಜಪ ತಿಪಟೂರು, ಜಿಲ್ಲೆ ಹಾಸನ (೨೦೧೭) ಟಿಪ್ಪಣಿ : ಈ ಹಿಂದುತ್ವನಿಷ್ಠರ ಪೈಕಿ ಹೆಚ್ಚಿನ ಹೆಸರುಗಳು ಉಡುಪಿಯಲ್ಲಿನ ಭಾಜಪದ ಸಂಸದರು ಹಾಗೂ ‘ಕೃಷಿ ಮತ್ತು ರೈತ ಕಲ್ಯಾಣ’ ಮಂತ್ರಾಲಯದ ಕೇಂದ್ರೀಯ ರಾಜ್ಯ ಮಂತ್ರಿಗಳಾದ ಶೋಭಾ ಕರಂದ್ಲಾಜೆಯವರು ೨೦೧೮ರಲ್ಲಿ ಬಹಿರಂಗಗೊಳಿಸಿದ ಪ್ರಸಿದ್ಧಿ ಪತ್ರಕದಿಂದ ತೆಗೆದುಕೊಳ್ಳಲಾಗಿವೆ. |