ಬಾಗಲಕೋಟೆಯಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಮತಾಂಧರು ಮಾಡಿದ ದಾಳಿಯಲ್ಲಿ ಹಿಂದೂ ಯುವಕ ಗಾಯ

ಕರ್ನಾಟಕದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಇಂತಹ ಮಾರಣಾಂತಿಕ ದಾಳಿ ನಡೆಸಲು ಮತಾಂಧರಿಗೆ ಹೇಗೆ ಧೈರ್ಯವಾಗುತ್ತದೆ ? ಸರಕಾರವು ಇಂತಹವರ ಮೇಲೆ ಭಯ ನಿರ್ಮಾಣವಾಗಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕರ್ನಾಟಕದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎಂದು ಹೇಳುವವರ ಬಾಯಿ ಏಕೆ ಮುಚ್ಚಿದೆ ?

ಬಾಗಲಕೋಟೆ – ಇಲ್ಲಿ ಟಿಪ್ಪು ಸುಲ್ತಾನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿ ತಮ್ಮ ವಿಚಾರವನ್ನು ಪ್ರಸಾರ ಮಾಡಿದ ಪ್ರಕಾಶ ಲೋಣಾರೆ ಎಂಬ ಯುವಕನ ಮೇಲೆ ೧೫ ರಿಂದ ೫೦ ಮತಾಂಧರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ, ಇದರಲ್ಲಿ ಗಂಭಿರವಾಗಿ ಗಾಯಗೊಂಡಿರುವ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಶಾಸಕ ವಿರಣ್ಣ ಚರಂತಿಮಠ ಹಾಗೂ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಆಸ್ಪತ್ರೆಗೆ ಹೋಗಿ ಪ್ರಕಾಶ್ ಅವರನ್ನು ಭೇಟಿ ಮಾಡಿದರು.