ಹಿಂದೂಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ಹರ್ಷನ ಹತ್ಯೆ !

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ಪಷ್ಟ ಹೇಳಿಕೆ

ಕೊಲೆಯ ಮೂಲದವರೆಗೆ ಹೋಗುವುದರ ಆಶ್ವಾಸನೆ !

ಬೆಂಗಳೂರು – ‘ಹರ್ಷ ಹಿಂದೂ’ ಎಂದೂ ಕರೆಯಲ್ಪಡುವ ಹರ್ಷ್ ಹಿಂದೂ ಕಾರ್ಯಕರ್ತನಾಗಿದ್ದ. ಆತ ಎಲ್ಲಾ ಪ್ರಕಾರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ . ಅವರು ಇತ್ತಿಚೆಗೆ ಹಿಂದೂಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದ. ಹಾಗಾಗಿ ಕೆಲವರು ಕೋಪಗೊಂಡಿದ್ದರು. ಕೆಲ ಸ್ಥಳೀಯರು ಕೂಡಾ ಆತನ ವಿರುದ್ಧ ಹರಿಹಾಯ್ದಿದ್ದರು. ಅದಕ್ಕಾಗಿ ಅವನನ್ನು ಹತ್ಯೆ ಮಾಡಲಾಯಿತು. ಈ ಕೊಲೆ ಭಿಕರವಾಗಿತ್ತು. ಇದು ಚಿಕ್ಕ ಹುಡುಗನ ಮೇಲೆ ತೋರಿದ ಉಗ್ರ ದ್ವೇಷದಂತಿದೆ. ಹರ್ಷನ ಹತ್ಯೆಯ ಹಿಂದಿನ ದೊಡ್ಡ ಕಾರಣವೆಂದರೇ ಅವನು ಹಿಂದೂ ಕಾರ್ಯಕರ್ತನಾಗಿದ್ದು ಮತ್ತು ನಿರ್ಭೀತಿಯಿಂದ ಧ್ವನಿ ಎತ್ತುತ್ತಿರುವುದು, ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ರಿಪಬ್ಲಿಕ್ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಬೊಮ್ಮಾಯಿ ಕೂಡಾ ‘ಈ ಪೂರ್ವಯೋಜಿತ ಕೊಲೆಯ ಮೂಲದ ವರೆಗೂ ಹೋಗುವೆವು’, ಎಂದು ಈ ಸಮಯದಲ್ಲಿ ಭರವಸೆ ನೀಡಿದರು.

(ಸೌಜನ್ಯ : Republic World)