ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಕನ್ನಡ ನಟನ ಬಂಧನ

ಬೆಂಗಳೂರು – ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸುವ ನ್ಯಾಯಾಧೀಶರ ಮೇಲೆ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಕನ್ನಡ ನಟ ಚೇತನ ಕುಮಾರ ಇವರನ್ನು ಬಂಧಿಸಲಾಗಿದೆ. ನಟ ಚೇತನ ಕುಮಾರ ಇವರು ಕರ್ನಾಟಕದ ಪ್ರಸ್ತುತ ಮುಖ್ಯ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಇವರಿಗೆ ಸಂಬಂಧಿತ ಒಂದು ಹಳೆಯ ಮೊಕದ್ದಮೆಯ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದರು.

ಅದರಲ್ಲಿ ಮುಖ್ಯ ನ್ಯಾಯಾಧೀಶ ದೀಕ್ಷಿತ್ ಇವರ ವಿರುದ್ಧ ಆಕ್ಷೇಪಾರ್ಹ ಟಿಪ್ಪಣಿ ಸಹಿತ ಬಲಾತ್ಕಾರ ಪ್ರಕರಣದಲ್ಲಿ ಅವರ ನೀಡಿರುವ ಉಚ್ಚ ನ್ಯಾಯಾಲಯದ ಆದೇಶದ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದರು.