ಹರ್ಷ ರವರ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠೋರ ಶಿಕ್ಷೆ ನೀಡಬೇಕು !

ಶ್ರೀರಾಮ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ಮಾಡಿದರು !

ಬೆಂಗಳೂರು (ಕರ್ನಾಟಕ) – ಬಜರಂಗದಳದ ಕಾರ್ಯಕರ್ತರಾದ ಹರ್ಷರವರ ಹತ್ಯೆಯ ಹಿಂದಿರುವ ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು, ಎಂಬ ಮನವಿ ಮಾಡಲು ಹಿಂದೂ ಸಂಘಟನೆಗಳ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ, ಬೆಂಗಳೂರಿನ ಅಧ್ಯಕ್ಷರಾದ ಶ್ರೀ. ಚಂದ್ರಶೇಖರ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಹಾಗೂ ಇತರ ಕಾರ್ಯಕರ್ತರು ಉಸ್ಥಿತರಿದ್ದರು. ಹರ್ಷರವರ ಅಂತಿಮ ಯಾತ್ರೆಯ ಸಮಯದಲ್ಲಿ ಮತಾಂಧರು ಕಲ್ಲುತೂರಾಟ ಮಾಡಿರುವುದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಯಿತು.

೧. ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಶ್ರೀ. ಮುತಾಲಿಕರವರು ’ಕೊಡಲಿ ಮತ್ತು ಖಡ್ಗವನ್ನು ಹಿಡಿದು ದಂಗೆ ಮಾಡಲು ಇದು ತಾಲಿಬಾನ್ ಅಲ್ಲ, ಇಲ್ಲಿ ಸಂವಿಧಾನವಿದೆ. ಇದು ಕರ್ನಾಟಕದಲ್ಲಿನ ೨೫ ನೇ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ. ಈ ಪ್ರಕರಣವನ್ನು ಅನೇಕ ವರ್ಷಗಳ ವರೆಗೆ ದೂಡದೆ ೧ ತಿಂಗಳಿನಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು’ ಎಂದು ಹೇಳಿದರು.

೨. ಶ್ರೀ. ಮೋಹನ ಗೌಡ ರವರು ಮಾತನಾಡುತ್ತ ’ಹಿಜಾಬಿನ ಪ್ರಕರಣದ ನಂತರ ಹಿಂದೂ ಕಾರ್ಯಕರ್ತರಿಗೆ ಕೊಲ್ಲುವುದಾಗಿ ಮೊಬೈಲಿನಲ್ಲಿ ಬೆದರಿಕೆಯ ಕರೆಗಳು ಬರುತ್ತಿವೆ. ಇಂದು ಹಿಜಾಬಿನ ಪ್ರಕರಣವು ನ್ಯಾಯಾಲಯದಲ್ಲಿದ್ದರೂ ಮತಾಂಧ ಸಂಘಟನೆಗಳು ಕಾನೂನು ವಿರೋಧಿ ಕೃತ್ಯಗಳನ್ನು ಮಾಡುತ್ತಿವೆ. ಕಾಂಗ್ರೆಸ್ ನೇತಾರ ಮುಕರಮ ಖಾನನು ಹಿಜಾಬಿನ ವಿಷಯದಲ್ಲಿ ಎಚ್ಚರಿಕೆ ನೀಡುವ ಮನವಿ ನೀಡುತ್ತಿದ್ದಾರೆ. ಇಂತಹ ಜನರನ್ನು ತಕ್ಷಣ ಬಂಧಿಸಬೇಕು’ ಎಂದು ಹೇಳಿದರು.

ಮನವಿಯಲ್ಲಿರುವ ಬೇಡಿಕೆಗಳು

೧. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಸಂಘಟನೆಗಳ ಮೇಲೆ ನಿರ್ಬಂಧ ಹೇರಿ ಅವುಗಳ ಪ್ರಮುಖರನ್ನು ಜೈಲಿಗೆ ಅಟ್ಟಬೇಕು.

೨. ಮೃತ ಹರ್ಷನ ಕುಟುಂಬಕ್ಕೆ ೨೫ ಲಕ್ಷ ರೂಪಾಯಿಗಳ ಪರಿಹಾರ ನಿಧಿಯನ್ನು ನೀಡಬೇಕು.

೩. ಹಿಂದೂ ಕಾರ್ಯಕರ್ತರಿಗೆ, ಹಿಂದೂ ನೇತಾರ ರಿಗೆ ಸಂರಕ್ಷಣೆ ಒದಗಿಸಬೇಕು.