ಹರ್ಷ ಇವರ ಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ ! – ಭಾಜಪ ಶಾಸಕ ರೇಣುಕಾಚಾರ್ಯ ಆರೋಪ

ಬೆಂಗಳೂರು – ಕಾಂಗ್ರೆಸ್ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ ಮತ್ತು ಕಾಂಗ್ರೆಸ್‌ನ ಇತರ ಮುಖಂಡರಿಂದಾಗಿ ಭಜರಂಗದಳ ಕಾರ್ಯಕರ್ತ ಹರ್ಷ ಇವರ ಹತ್ಯೆಯಾಗಿದೆ. ಅವರ ಹತ್ಯೆ ಹಿಂದೆ ಕಾಂಗ್ರೆಸ್‌ನ ಕೈವಾಡವಿದೆ ಎಂದು ಭಾಜಪ ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.

(ಸೌಜನ್ಯ : Tv9 Kannada)

‘ಈ ಪ್ರಕರಣದ ತನಿಖೆಯನ್ನು ‘ರಾಷ್ಟ್ರೀಯ ತನಿಖಾ ದಳ’ಕ್ಕೆ (ಎನ್.ಐ.ಎ.) ಹಸ್ತಾಂತರಿಸುವಂತೆ ನಾನು ಗೃಹ ಸಚಿವರಲ್ಲಿ ವಿನಂತಿಸುತ್ತೇನೆ’, ಎಂದು ಅವರು ಹೇಳಿದರು. ಹರ್ಷನ ಕುಟುಂಬಕ್ಕೆ ಶಾಸಕ ರೇಣುಕಾಚಾರ್ಯ ೫ ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.