‘ಮರ್ಯಾದೆಯನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು !’(ಅಂತೆ) – ಟ್ವಿಟರ್

ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ

ಮನೆಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ೨೫ ರೂಪಾಯಿ ಹೆಚ್ಚಳ !

ಸಬ್ಸಿಡಿ ಇಲ್ಲದಿರುವ ಮನೆಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ನ ಬೆಲೆಯನ್ನು ೨೫ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ನಂತರ ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಮನೆ ಬಳಕೆಯ ೧೪.೨ ಕೆಜಿಯ ಎಲ್.ಪಿ.ಜಿ ಸಿಲಿಂಡರಿನ ಬೆಲೆ ೮೫೯.೫ ರೂಪಾಯಿ ಆಗಿದೆ.

ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಖುಲಾಸೆ !

ವಿಶೇಷ ನ್ಯಾಯಾಲಯವು ಸುನಂದಾ ಪುಷ್ಕರ್ ಇವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್‌ಅನ್ನು ಖುಲಾಸೆಗೊಳಿಸಿದೆ. ೨೦೧೪ ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್ ಇವರ ಶವ ಪತ್ತೆಯಾಗಿತ್ತು.

ನ್ಯಾಯಬದ್ಧವಾಗಿ ಬೇಹುಗಾರಿಕೆಯಾಗಿದ್ದರೆ, ಅದಕ್ಕೆ ಅನುಮತಿ ನೀಡುವ ವಿಭಾಗವು ಪ್ರಮಾಣಪತ್ರ ದಾಖಲಿಸಬೇಕು ! – ಸರ್ವೋಚ್ಚ ನ್ಯಾಯಾಲಯ

ನಾವು ನಿಮಗೆ (ಕೇಂದ್ರ ಸರಕಾರಕ್ಕೆ) ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಕೇಳುತ್ತಿಲ್ಲ. ಯಾವುದು ನೀವು ಹೇಳಲಾಗುವುದಿಲ್ಲ, ಅದನ್ನು ಹೇಳಲು ನಾವು ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಿಲ್ಲ. ನಾವು ಕೇವಲ ಜನರ ಗೌಪ್ಯತೆಯ ಉಲ್ಲಂಘನೆ ಮತ್ತು ಬೇಹುಗಾರಿಕೆಯ ನ್ಯಾಯಬದ್ಧತೆಯ ದೃಷ್ಟಿಯಿಂದ ನೋಟಿಸ್ ನೀಡಲು ಇಚ್ಚಿಸುತ್ತೇವೆ.

ಭಾರತಕ್ಕೇ ಶೌರ್ಯಶಾಲಿ ಇತಿಹಾಸ ಇದ್ದರೂ ಕೂಡ ನಾವು ಕಾಬೂಲಿಗೆ ಸೈನ್ಯ ಕಳಿಸಲು ನಿರಾಕರಿಸಿದೆವು ! – ಡಾ. ಸುಬ್ರಹ್ಮಣ್ಯ ಸ್ವಾಮಿ

ಅಫ್ಘಾನಿಸ್ತಾನದ ಗಡಿ ಭಾರತಕ್ಕೆ (ಪಾಕ ಆಕ್ರಮಿತ ಕಾಶ್ಮೀರಕ್ಕೆ) ಅಂಟಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಾರತ ಸಹ ಆಡಳಿತ ನಡೆಸಿದೆ. ಮಹಾಭಾರತ ಕಾಲದಿಂದ ಇತ್ತೀಚಿನ ಮಹಾರಾಜ ರಣಜಿತ್ ಸಿಂಹ ಇವರ ತನಕ ನಾವು ಅಫ್ಘಾನಿಸ್ತಾನದ ಮೇಲೆ ರಾಜ್ಯವಾಳಿದ ಇತಿಹಾಸವಿದೆ.

ವೀಕ್ಷಿಸಿ ವಿಡಿಯೋ : ‘ಲವ್ ಜಿಹಾದ್’ ಬಗ್ಗೆ ಜಾಗೃತಿ ನಿರ್ಮಿಸುವ ಹಿಂದಿ ಚಲನಚಿತ್ರ ‘ದಿ ಕನ್ವರ್ಷನ್’ನ ಟ್ರೇಲರ್ ಬಿಡುಗಡೆ !

ಲವ್ ಜಿಹಾದ್ ವಿರುದ್ಧ ಚಲನಚಿತ್ರ ನಿರ್ಮಿಸುವ ನಿರ್ದೇಶಕ ವಿನೋದ ತಿವಾರಿ ಮತ್ತು ‘ನೋಸ್ಟ್ರಮ್ ಎಂಟರ್‍ಟೈನ್‍ಮೆಂಟ್’ ಅವರನ್ನು ಎಷ್ಟೇ ಹೊಗಳಿದರೂ ಕಡಿಮೆಯೇ!

ತಾಲಿಬಾನ್, ಪಾಕ್ ಮತ್ತು ಚೀನಾ 1 ವರ್ಷದ ನಂತರ ಭಾರತದ ಮೇಲೆ ದಾಳಿ ಮಾಡುವರು ! – ಡಾ. ಸುಬ್ರಹ್ಮಣ್ಯಮ್ ಸ್ವಾಮಿ

ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು !

ಕಡೆಗೂ ಕಾಶ್ಮೀರದಲ್ಲಿನ ಲಾಲ್ ಚೌಕದ ಘಂಟಾಘರನಲ್ಲಿ ಹಾರಾಡಿದ ರಾಷ್ಟ್ರಧ್ವಜ !

ಭಾರತೀಯರ ಸ್ವಾಭಿಮಾನ ಮತ್ತು ಗೌರವದ ಚಿಹ್ನೆಯಾಗಿರುವ ರಾಷ್ಟ್ರಧ್ವಜವನ್ನು ಅಲ್ಲಿ ಹಾರಾಡಿಸುವುದು ಕೇವಲ ಒಂದು ಕನಸಾಗಿತ್ತು

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಎಚ್ಚರಿಕೆ !

ಇದು ನವ ಭಾರತವಾಗಿದೆ, ಹಾಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು ! – ಪ್ರಧಾನಿ ಮೋದಿ

ಭಾರತ ಸಹಿತ 12 ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಗೆ ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ವಿರೋಧ

ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.