ನ್ಯಾಯಬದ್ಧವಾಗಿ ಬೇಹುಗಾರಿಕೆಯಾಗಿದ್ದರೆ, ಅದಕ್ಕೆ ಅನುಮತಿ ನೀಡುವ ವಿಭಾಗವು ಪ್ರಮಾಣಪತ್ರ ದಾಖಲಿಸಬೇಕು ! – ಸರ್ವೋಚ್ಚ ನ್ಯಾಯಾಲಯ

ಪೆಗಾಸಸ್ ಬೇಹುಗಾರಿಕೆ ಪ್ರಕರಣ

ನವ ದೆಹಲಿ – ನಾವು ನಿಮಗೆ (ಕೇಂದ್ರ ಸರಕಾರಕ್ಕೆ) ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಕೇಳುತ್ತಿಲ್ಲ. ಯಾವುದು ನೀವು ಹೇಳಲಾಗುವುದಿಲ್ಲ, ಅದನ್ನು ಹೇಳಲು ನಾವು ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಿಲ್ಲ. ನಾವು ಕೇವಲ ಜನರ ಗೌಪ್ಯತೆಯ ಉಲ್ಲಂಘನೆ ಮತ್ತು ಬೇಹುಗಾರಿಕೆಯ ನ್ಯಾಯಬದ್ಧತೆಯ ದೃಷ್ಟಿಯಿಂದ ನೋಟಿಸ್ ನೀಡಲು ಇಚ್ಚಿಸುತ್ತೇವೆ. ನ್ಯಾಯಬದ್ಧವಾಗಿ ಬೇಹುಗಾರಿಕೆಯಾಗಿದ್ದರೆ, ಅದಕ್ಕೆ ಅನುಮತಿ ನೀಡುವ ವಿಭಾಗದಿಂದ ಪ್ರಮಾಣಪತ್ರ ಸಲ್ಲಿಸಬೇಕು. ಈ ಪ್ರಕರಣದಲ್ಲಿ ಹೊಸ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸ ಬೇಕಾಗಿದೆಯೋ ಇಲ್ಲವೋ ? ಇದನ್ನು ಕೇಂದ್ರ ಸರಕಾರ ನಮಗೆ ತಿಳಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ‘ಪೆಗಾಸಸ್’ ಈ ಗಣಕೀಯ ವ್ಯವಸ್ಥೆ ಮೂಲಕ ಮಾಡಲ್ಪಟ್ಟ ಬೇಹುಗಾರಿಕೆಯ ಪ್ರಕರಣ ಸಲ್ಲಿಸಿದ ಅರ್ಜಿಯ ವಿಚಾರಣೆ ಮಾಡುವ ವೇಳೆ ಹೇಳಿದೆ. ‘ಕೇಂದ್ರ ಸರಕಾರದ ಉತ್ತರದ ನಂತರವೇ ನಾವು ಸಮಿತಿ ಸ್ಥಾಪನೆಯ ವಿಷಯ ವಿಚಾರ ಮಾಡುವೆವು’. ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿ ಒಂದು ವಾರದೊಳಗೆ ಉತ್ತರ ಕೊಡಲು ಸೂಚಿಸಿದೆ.