ಭಾರತ ಸಹಿತ 12 ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಗೆ ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ವಿರೋಧ

ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.- ಸಂಪಾದಕರು 

ನವ ದೆಹಲಿ – ಭಾರತ, ಅಮೇರಿಕಾ, ಚೀನಾ ಸಹಿತ 12 ದೇಶಗಳು ಅಫ್ಘಾನಿಸ್ತಾನದಲ್ಲಿ ಬಲವಂತವಾಗಿ ಸರಕಾರ ಸ್ಥಾಪಿಸಲು ಪ್ರಯತ್ನಿಸುತ್ತಿರುವ ತಾಲಿಬಾನನನ್ನು ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ನಿರಾಕರಿಸಿವೆ. ಇತರ ದೇಶದಲ್ಲಿ ಪಾಕಿಸ್ತಾನ, ಕತಾರ್, ಉಜ್ಬೇಕಿಸ್ಥಾನ, ಬ್ರಿಟನ್, ಜರ್ಮನಿ, ನಾರ್ವೆ, ತಜಿಕಿಸ್ತಾನ, ತುರ್ಕಿ ಮತ್ತು ತುರ್ಕಮೆನಿಸ್ತಾನ ಇವುಗಳ ಸಮಾವೇಶವಿದೆ. ವಿಶ್ವ ಸಂಸ್ಥೆ ಮತ್ತು ಯುರೋಪಿಯನ್ ಮಹಾಸಂಘ ಇವುಗಳಿಂದ ವಿರೋಧ ವ್ಯಕ್ತವಾಗಿದೆ. ಅಮೆರಿಕವು ತಾಲಿಬಾನಿಗಳ ಆಕ್ರಮಣವನ್ನು ವಿರೋಧಿಸುತ್ತಾ ನಗರಗಳ ಮೇಲಿನ ದಾಳಿಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದೆ.