ತಾಲಿಬಾನ್, ಪಾಕ್ ಮತ್ತು ಚೀನಾ 1 ವರ್ಷದ ನಂತರ ಭಾರತದ ಮೇಲೆ ದಾಳಿ ಮಾಡುವರು ! – ಡಾ. ಸುಬ್ರಹ್ಮಣ್ಯಮ್ ಸ್ವಾಮಿ

ಭಾರತವು ಈ ದಾಳಿಗೆ ಸಿದ್ಧವಿದೆಯೇ ? ಈ ದಾಳಿ ಆಗುವುದನ್ನು ಕಾಯುವ ಬದಲು ಭಾರತವೇ ಅಕ್ರಮಕವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಳ್ಳಬೇಕು ! – ಸಂಪಾದಕರು 

ಡಾ. ಸುಬ್ರಹ್ಮಣ್ಯಮ್ ಸ್ವಾಮಿ

ನವದೆಹಲಿ – ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದ ಮೇಲೆ ಮೊದಲನೇ ವರ್ಷದಲ್ಲಿ ಅವರ ಮಧ್ಯಮ ವಿಚಾರಗಳ ನಾಯಕರು ಸರಕಾರದಲ್ಲಿ ಇರುವರು. ಈ ಮೊದಲ ವರ್ಷದಲ್ಲಿ ಅಮಾನವೀಯ ತಾಲಿಬಾನಿಗಳೇ ಕ್ಷೇತ್ರೀಯ ನಾಯಕರಾಗಿರುತ್ತಾರೆ. ಒಂದು ವರ್ಷದ ನಂತರ ಅಫ್ಘಾನಿಸ್ತಾನ ಸುರಕ್ಷಿತವಾದ ನಂತರ ತಾಲಿಬಾನ್, ಪಾಕಿಸ್ತಾನ ಮತ್ತು ಚೀನಾ ಭಾರತದ ಮೇಲೆ ಆಕ್ರಮಣ ಮಾಡಲಿವೆ ಎಂಬ ಅಭಿಪ್ರಾಯವನ್ನು ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಅವರು ಟ್ವೀಟ್ ಮಾಡಿ ಮಂಡಿಸಿದ್ದಾರೆ.