ವೀಕ್ಷಿಸಿ ವಿಡಿಯೋ : ‘ಲವ್ ಜಿಹಾದ್’ ಬಗ್ಗೆ ಜಾಗೃತಿ ನಿರ್ಮಿಸುವ ಹಿಂದಿ ಚಲನಚಿತ್ರ ‘ದಿ ಕನ್ವರ್ಷನ್’ನ ಟ್ರೇಲರ್ ಬಿಡುಗಡೆ !

ಒಂದೇ ದಿನದಲ್ಲಿ ವೀಕ್ಷಿಸಿದ 19 ಲಕ್ಷ ಜನರು !

ಲವ್ ಜಿಹಾದ್ ವಿರುದ್ಧ ಚಲನಚಿತ್ರ ನಿರ್ಮಿಸುವ ನಿರ್ದೇಶಕ ವಿನೋದ ತಿವಾರಿ ಮತ್ತು ‘ನೋಸ್ಟ್ರಮ್ ಎಂಟರ್‍ಟೈನ್‍ಮೆಂಟ್’ ಅವರನ್ನು ಎಷ್ಟೇ ಹೊಗಳಿದರೂ ಕಡಿಮೆಯೇ! ಈ ಚಲನಚಿತ್ರದ ಮೂಲಕ ಹಿಂದೂ ಹುಡುಗಿಯರು ‘ಲವ್ ಜಿಹಾದ್’ ಬಗ್ಗೆ ಜಾಗೃತರಾಗುತ್ತಾರೆ, ಎಂಬ ಅಪೇಕ್ಷೆ ! – ಸಂಪಾದಕರು 

ನವ ದೆಹಲಿ : ‘ಲವ್ ಜಿಹಾದ್’ ವಿರುದ್ಧ ನಿರ್ಮಿಸಲಾಗಿರುವ ಹಿಂದಿ ಚಿತ್ರ ‘ದಿ ಕನ್ವರ್ಷನ್’ (ಮತಾಂತರ) ಟ್ರೇಲರ್ (ಚಲನಚಿತ್ರದ ಜಾಹಿರಾತಿಗಾಗಿ ಕಿರುಚಿತ್ರ) ಬಿಡುಗಡೆಗೊಳಿಸಲಾಗಿದೆ. ಈ ಟ್ರೇಲರ್ ಅನ್ನು ಕಳೆದ 24 ಗಂಟೆಗಳಲ್ಲಿ 19 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ಚಲನಚಿತ್ರ ಬರುವ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ವಿನೋದ್ ತಿವಾರಿ ಮತ್ತು ‘ನಾಸ್ಟ್ರಮ್ ಎಂಟರ್‍ಟೈನ್‍ಮೆಂಟ್’ ಜಂಟಿಯಾಗಿ ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ.

1. ಟ್ರೇಲರ್‍ನ ಪ್ರಕಾರ, ಈ ಚಲನಚಿತ್ರದಲ್ಲಿ ಓರ್ವ ಹಿಂದೂ ಹುಡುಗಿಯ ಕಥೆಯನ್ನು ಹೇಳಲಾಗಿದೆ. ಈ ಹುಡುಗಿ `ಬಬಲು’ ಎಂದು ಹಿಂದೂ ಹೆಸರನ್ನು ಇಟ್ಟುಕೊಂಡೊರುವ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಾಳೆ. ಕುಟುಂಬದ ವಿರುದ್ಧ ಹೋಗಿ ಆತನನ್ನು ಮದುವೆಯಾಗುತ್ತಾಳೆ; ಆದರೆ ಮದುವೆಯ ನಂತರ ಆಕೆಯ ಸ್ಥಿತಿ ದಯನೀಯವಾಗುತ್ತದೆ. ಮತಾಂತರಗೊಳ್ಳುವಂತೆ ಅವಳ ಮೇಲೆ ಒತ್ತಡ ಹೇರಲಾಗುತ್ತದೆ, ಅವಳನ್ನು ಹಿಂಸಿಸಲಾಗುತ್ತದೆ. ಆದ್ದರಿಂದ ಯುವತಿಯು ‘ಬಬಲು’ವಿನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾಳೆ. ನಂತರ ಈ ರೀತಿಯ ಮತಾಂಧರ ಮೋಸದ ವಿರುದ್ಧ ಧ್ವನಿ ಎತ್ತಲು ಆರಂಭಿಸುತ್ತಾಳೆ.

2. ನಿರ್ದೇಶಕ ವಿನೋದ್ ತಿವಾರಿ ಮಾತನಾಡಿ, ‘ನಾನು ಬಹಳ ಸಮಯದಿಂದ ಇಂತಹ ಸಿನಿಮಾ ಮಾಡಲು ಯೋಗ್ಯವಾದ ಅವಕಾಶಕ್ಕಾಗಿ ಕಾಯುತ್ತಿದ್ದೆ; ಏಕೆಂದರೆ ಯುವತಿಯರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಆವಶ್ಯಕತೆ ಇದೆ. ಈ ಚಲನಚಿತ್ರವು ಕೇವಲ ಪ್ರೇಮ ವಿವಾಹದ ಬಗ್ಗೆ ಮಾತ್ರವಲ್ಲ, ಭಾರತದಲ್ಲಿ ಪ್ರೀತಿಯ ನಂತರದ ಮತಾಂತರದ ಸೂಕ್ಷ್ಮ ವಿಚಾರ ಕೂಡ ಇದೆ.

(ಸೌಜನ್ಯ : nostrum entertainment hub)

ಮತಾಂಧರಿಂದ ಚಲನಚಿತ್ರಕ್ಕೆ ವಿರೋಧ !

ಕಳೆದ ತಿಂಗಳು ಈ ಚಲನಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ನಂತರ ಮತಾಂಧರು ಚಲನಚಿತ್ರವನ್ನು ವಿರೋಧಿಸಲು ಆರಂಭಿಸಿದರು. ಅವರು #BoycottTheConversionMovie ಎಂಬ ಹ್ಯಾಶ್‍ಟ್ಯಾಗ್ ಮೂಲಕ (ಒಂದು ವಿಷಯದಲ್ಲಿ ಚರ್ಚೆ ಮಾಡುವುದು) ಟ್ರೆಂಡ್ (ಚರ್ಚೆಯಲ್ಲಿರುವ ವಿಷಯ) ಮಾಡಿ ಇದಕ್ಕೆ ವಿರೋಧಿಸಿದ್ದರು. (ತಮ್ಮ ದುಷ್ಟ ಕಾರ್ಯಗಳನ್ನು ಬಹಿರಂಗಪಡಿಸಿದರೆ, ಮತಾಂಧರು ತಕ್ಷಣವೇ ಒಗ್ಗೂಡಿ ಅದನ್ನು ವಿರೋಧಿಸುತ್ತಾರೆ, ಆದರೆ ಹಿಂದೂಗಳು ತಮ್ಮ ಮೇಲಿನ ಅನ್ಯಾಯದ ಬಗ್ಗೆ ನಿಷ್ಕ್ರಿಯರಾಗಿರುತ್ತಾರೆ ! – ಸಂಪಾದಕ) ‘ಈ ಚಲನಚಿತ್ರದಿಂದ ಮುಸಲ್ಮಾನರ ಬಗ್ಗೆ ತಪ್ಪಾದ ಸಂದೇಶ ಹೋಗಬಹುದು’, ಎಂದು ಹೇಳಲಾಗಿತ್ತು. (ಈ ಚಲನಚಿತ್ರ ಮತಾಂಧರ ಪಿತೂರಿಯನ್ನು ಬಹಿರಂಗಪಡಿಸುತ್ತಿದ್ದರಿಂದ ಈ ರೀತಿಯ ಗಲಾಟೆ ಮಾಡಲು ಪ್ರಯತ್ನಿಸಲಾಗುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕ)