ನಾನು ಈಗಲೂ ಅಧಿಕಾರದಲ್ಲಿಲ್ಲ ಮತ್ತು ಭವಿಷ್ಯದಲ್ಲೂ ಇರುವುದಿಲ್ಲ, ನನಗೆ ಕೇವಲ ಸೇವೆ ಮಾಡುವುದಿದೆ ! – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಅವರ `ಮನ್ ಕೀ ಬಾತ’ ದಲ್ಲಿ ಪ್ರತಿಪಾದನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ನನಗೆ ಅಧಿಕಾರದಲ್ಲಿರುವ ಆಶೀರ್ವಾದ ನೀಡಬೇಡಿ. ನಾನು ಬಡವರ ಸೇವೆಗಾಗಿ ಇದ್ದೇನೆ. ನಾನು ಈಗಲೂ ಅಧಿಕಾರದಲ್ಲಿಲ್ಲ ಮತ್ತು ಭವಿಷ್ಯದಲ್ಲಿಯೂ ನನಗೆ ಅಧಿಕಾರ ಬೇಡ. ನನಗೆ ಕೇವಲ ಸೇವೆಯಲ್ಲಿ ಇರುವುದಿದೆ. ನನಗಾಗಿ ಈ ಸ್ಥಾನ ಕೇವಲ ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಇದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿನ ಅವರ `ಮನ್ ಕೀ ಬಾತ’ ಈ ತಿಂಗಳ ಕಾರ್ಯಕ್ರಮದಲ್ಲಿ ಒಬ್ಬ ನಾಗರಿಕಟಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ಸಮಯದಲ್ಲಿ `ಆಯುಷ್ಮಾನ್ ಭಾರತ ಯೋಜನೆ’ಯ ಲಾಭ ಪಡೆದಿರುವ ರಾಜೇಶ ಕುಮಾರ್ ಪ್ರಜಾಪತಿ ಇವರೊಂದಿಗೆ ಚರ್ಚೆ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಇವರು ಪ್ರಜಾಪತಿ ಇವರಿಗೆ ಆಗಿರುವ ಲಾಭದ ಬಗ್ಗೆ ಪ್ರಶ್ನೆ ಕೇಳಿದಾಗ, `ಈ ಯೋಜನೆಯ ಲಾಭ ನನಗೆ ಬಹಳವಾಗಿ ಆಗಿದೆ, ನನಗೆ ನೀವು ಯಾವಾಗಲೂ ಅಧಿಕಾರದಲ್ಲಿ ಇರುವುದು ನೋಡಲಿಕ್ಕಿದೆ’ ಎಂದು ಹೇಳಿದಾಗ ಪ್ರಧಾನಿ ಮೋದಿಯವರು ಮೇಲಿನ ಮಾತುಗಳು ಹೇಳಿದರು.