ಭಾರತೀಯ ಕ್ರೀಡಾಪಟುಗಳಿಗೆ ಕೇವಲ ‘ಹಲಾಲ್’ ಮಾಂಸ ನೀಡುವ ಯಾವುದೇ ಯೋಜನೆ ಇಲ್ಲ ! ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ

ನವದೆಹಲಿ – ಭಾರತ ಮತ್ತು ನ್ಯೂಜಿಲ್ಯಾಂಡ್ ಇವರಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯ ಮೊದಲು ಭಾರತೀಯ ಸಂಘದ ಕ್ರೀಡಾಪಟುಗಳ ಆಹಾರದಲ್ಲಿ ‘ಹಲಾಲ್’ ಮಾಂಸದ ಉಪಯೋಗಿಸಲಾಗುವುದು ಎಂಬ ವಾರ್ತೆಯು ಹರಡಿತ್ತು. ಇದಕ್ಕೆ ವಿವಿಧ ಹಂತಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಟ್ವಿಟರ್ ಟ್ರೆಂಡ್ಸ್ ಸಹ ಮಾಡಲಾಗಿತ್ತು. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸ್ಪಷ್ಟೀಕರಣ ನೀಡಿದೆ. ಮಂಡಳಿಯ ಖಜಾಂಚಿ ಅರುಣ ಧುಮಲ ಇವರು, ಭಾರತೀಯ ಕ್ರೀಡಾಪಟುಗಳಿಗೆ ಇಂತಹ ಯಾವುದೇ ಯೋಜನೆ ರೂಪಿಸಿಲ್ಲ. ಅವರು ತಮಗೆ ಬೇಕಾದ ಪದಾರ್ಥ ತಿನ್ನಬಹುದು, ಅದು ಅವರ ವೈಯಕ್ತಿಕ ವಿಚಾರವಾಗಿದೆ ಎಂದು ಹೇಳಿದರು.