ಇಗ ‘ಕಾರ್ಡ’ ಇಲ್ಲದೆ ಎಟಿಎಂದಿಂದ ಹಣ ತೆಗೆಯಬಹುದು !

‘ಡಿಜಿಟಲ’ ವಂಚನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ ಬ್ಯಾಂಕ ಆಫ್ ಇಂಡಿಯಾ ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ ಬ್ಯಾಂಕ್ ಎ.ಟಿ.ಎಂ. ಗಳಿಂದ ಕಾರ್ಡ ಇಲ್ಲದೆ (ಕಾಡ್ ರಹಿತ) ಹಣ ತೆಗೆಯುವ ಸೌಲಭ್ಯವನ್ನು ಆರಂಭಿಸುವುದರ ಅನುಮತಿ ನೀಡುವ ನಿರ್ಣಯ ತೆಗೆದುಕೊಂಡಿದೆ.

ಯುವಕರಿಗೆ ಕಡ್ಡಾಯವಾಗಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಕೆಂದ್ರ ಸರಕಾರ ಯೋಜಿಸುತ್ತಿದೆ !

ರಾಷ್ಟ್ರಪ್ರೀತಿ ಮತ್ತು ರಾಷ್ಟ್ರದ ಸೇವೆ ಮಾಡಲು ಇಸ್ರೇಲನ ಎಲ್ಲಾ ನಾಗರಿಕರನ್ನು ಒಮ್ಮೆಯಾದರೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿದೆ. ಅದೇ ಮಾದರಿಯಲ್ಲಿ ಭಾರತದಲ್ಲಿ ೩ ವರ್ಷಗಳ ಕಾಲ ಸೇನೆಯಲ್ಲಿ ಸೇವೆಸಲ್ಲಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.

ಹಿಜಾಬ್ ಪ್ರಕರಣದ ವಿದ್ಯಾರ್ಥಿನಿ ಮುಸ್ಕಾನ ಖಾನ ಇವಳನ್ನು ‘ಅಲ್ ಕಾಯದಾ’ ಮುಖಂಡ ಅಲ್ ಜವಾಹಿರಿಯಿಂದ ಪ್ರಶಂಸೆ

ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು.

ಕೇವಲ ಭಾರತದಲ್ಲಿಯಷ್ಟೇ ಧ್ವನಿವರ್ಧಕದ ಮೇಲೆ ಅಜಾನ್ ಕೂಗು ಏಕೆ ಕೇಳಿಸುತ್ತದೆ ? – ಜನಪ್ರಿಯ ಗಾಯಕಿ ಅನುರಾಧಾ ಪೌಡವಾಲ

ನಾನು ಜಗತ್ತಿನ ಅನೇಕ ಸ್ಥಳಗಳಿಗೆ ಹೋಗಿದ್ದೇನೆ. ಕೊಲ್ಲೀ ರಾಷ್ಟ್ರಗಳಿಗೂ ಹೋಗಿದ್ದೇನೆ. ಅಲ್ಲಿ ಧ್ವನಿವರ್ಧಕ ನಿಷೇಧವಿದೆ. ಮುಸಲ್ಮಾನ ದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಅಜಾನ್‌ನ ಕೂಗು ಕೇಳಿಸುವುದಿಲ್ಲ. ಹೀಗಿರುವಾಗ ಕೇವಲ ಭಾರತದಲ್ಲಿಯಷ್ಟೇ ಅದು ಏಕೆ ಕೇಳಿಸುತ್ತದೆ ?, ಎಂದು ಸುಪ್ರಸಿದ್ಧ ಗಾಯಕಿ ಅನುರಾಧಾ ಪೌಡವಾಲ ಇವರು ಪ್ರಶ್ನಿಸಿದರು.

ಭೇದಭಾವ ಹಾಗೂ ಭ್ರಷ್ಟಾಚಾರವು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ ! – ಪ್ರಧಾನಮಂತ್ರಿ

ಕೆಲವು ಪಕ್ಷಗಳು ದೇಶದಲ್ಲಿ ಅನೇಕ ದಶಕಗಳವರೆಗೆ ಮತಪೆಟ್ಟಿಗೆಯ ರಾಜಕಾರಣವನ್ನು ಮಾಡಿದವು. ಭೇದಭಾವ ಮತ್ತು ಭ್ರಷ್ಟಾಚಾರಗಳು ಮತಪೆಟ್ಟಿಗೆಯ ರಾಜಕಾರಣದ ದುಷ್ಪರಿಣಾಮಗಳಾಗಿವೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಪಾದಿಸಿದ್ದಾರೆ.

ರಾಜ್ಯಗಳು ಪ್ರಾಣವಾಯುವಿನ ಕೊರತೆಯಿಂದಾಗಿ ಘಟಿಸಿದ ಸಾವುಗಳ ಸಂಖ್ಯೆಯನ್ನು ನೀಡಿಲ್ಲ ! – ಕೇಂದ್ರ ಸರಕಾರ

ಕೊರೋನಾದ ಸಮಯದಲ್ಲಿ ಯಾವುದೇ ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಾಣವಾಯುವಿನ (ಆಕ್ಸಿಜನಿನ) ಕೊರತೆಯಿಂದಾಗಿ ಸಂಭವಿಸಿರುವ ಸಾವಿನ ಮಾಹಿತಿಯನ್ನು ಇಂದಿಗೂ ನೀಡಿಲ್ಲ, ಎಂಬ ಮಾಹಿತಿಯನ್ನು ಕೇಂದ್ರೀಯ ಆರೋಗ್ಯ ಮತ್ತು ಕುಟುಂಬಕಲ್ಯಾಣ ರಾಜ್ಯ ಮಂತ್ರಿಗಳಾದ ಭಾರತೀ ಪವಾರರವರು ಏಪ್ರಿಲ್‌ ೫ರಂದು ಸಂಸತ್ತಿನ ಪ್ರಶ್ನೋತ್ತರದ ಅವಧಿಯಲ್ಲಿ ನೀಡಿದರು.

ದಕ್ಷಿಣ ದೆಹಲಿಯಲ್ಲಿ ಚೈತ್ರ ನವರಾತ್ರಿಯಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗುವುದು ! – ಮಹಾಪೌರ ಮುಕೇಶ ಸೂರ್ಯನ

ದಕ್ಷಿಣ ದೆಹಲಿಯ ಮಹಾಪೌರರಾದ ಮುಕೇಶ ಸೂಯ್ಯನ್‌ರವರು ‘ಚೈತ್ರ ನವರಾತ್ರಿಯಲ್ಲಿ ನಗರದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಆದೇಶದ ಕಠೋರವಾಗಿ ಕಾರ್ಯಾಚರಣೆಯನ್ನು ಮಾಡುವೆವು’, ಎಂದು ಹೇಳಿದ್ದಾರೆ.

ಸಿಬಿಐ ತನ್ನ ಕಳೆದುಕೊಂಡಿರುವ ವಿಶ್ವಾಸವನ್ನು ಪುನಃ ಗಳಿಸಲು ರಾಜಕಾರಣಿಗಳ ಜೊತೆಗಿನ ಸಂಬಂಧ ಮುರಿಯಬೇಕು !

ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿಶ್ವಾಸ ಕಳೆದುಕೊಂಡಿದೆ. ನಿಮಗೆ ವಿಶ್ವಾಸ ಮತ್ತೆ ಗಳಿಸಬೇಕಿದ್ದರೆ, ಮೊದಲು ನೀವು ರಾಜಕಾರಣಿಗಳ ಜೊತೆಗಿರುವ ಸಂಬಂಧ ಕಳೆದುಕೊಳ್ಳಬೇಕು ಮತ್ತು ವಿಶ್ವಾಸ ಪುನಃ ಗಳಿಸಲು ಮತ್ತೆ ಕೆಲಸ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಹೇಳಿದರು.

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

‘ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ !’(ಅಂತೆ) – ಶರದ ಪವಾರ

ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದ ಕಣಿವೆಯನ್ನು ಬಿಡಬೇಕಾಯಿತು, ಆದರೆ ಅಲ್ಲಿ ಮುಸಲ್ಮಾನರನ್ನೂ ಗುರಿಯಾಗಿಸಲಾಗಿತ್ತು. ‘ಕಶ್ಮೀರ ಫಾಯಿಲ್ಸ್’ನ ಮಾಧ್ಯಮದಿಂದ ಭಾಜಪವು ಧಾರ್ಮಿಕ ಮತ್ತು ಸಾಮಾಜಿಕ ವಾತಾವರಣವನ್ನು ಕೆಡಿಸುತ್ತಿದೆ. ಈ ಚಲನಚಿತ್ರದ ಪ್ರದರ್ಶನಕ್ಕೂ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ.