ದಕ್ಷಿಣ ದೆಹಲಿಯಲ್ಲಿ ಚೈತ್ರ ನವರಾತ್ರಿಯಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗುವುದು ! – ಮಹಾಪೌರ ಮುಕೇಶ ಸೂರ್ಯನ

(ಸೌಜನ್ಯ : Oneindia English)

ನವದೆಹಲಿ – ದಕ್ಷಿಣ ದೆಹಲಿಯ ಮಹಾಪೌರರಾದ ಮುಕೇಶ ಸೂಯ್ಯನ್‌ರವರು ‘ಚೈತ್ರ ನವರಾತ್ರಿಯಲ್ಲಿ ನಗರದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಆದೇಶದ ಕಠೋರವಾಗಿ ಕಾರ್ಯಾಚರಣೆಯನ್ನು ಮಾಡುವೆವು’, ಎಂದು ಹೇಳಿದ್ದಾರೆ. ‘ನಮಗೆ ಬಂದಂತಹ ದೂರುಗಳ ನಂತರ ನಾವು ಈ ಆದೇಶವನ್ನು ನೀಡಿದ್ದೇವೆ. ಮಾಂಸ ಮಾರಾಟವಾಗದಿದ್ದರೆ ಜನರು ಅದನ್ನು ಈ ಸಮಯದಲ್ಲಿ ತಿನ್ನುವುದೂ ಇಲ್ಲ, ಎಂದು ಅವರು ಹೇಳಿದ್ದಾರೆ.

ಸೂರ್ಯನ್‌ರವರು ಮಾತನಾಡುತ್ತ ನವರಾತ್ರಿಯಲ್ಲಿ ಉಪವಾಸ ಮಾಡುವವರಿಗೆ ಬಹಿರಂಗವಾಗಿ ಪ್ರಾಣಿಹತ್ಯೆ ಹಾಗೂ ಮಾಂಸ ಮಾರಾಟವಾಗುತ್ತಿರುವುದರಿಂದ ಕಷ್ಟವಾಗುತ್ತದೆ. ದೂರು ಬಂದ ನಂತರ ನಾವು ಈ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಮುಂಬರುವ ಏಪ್ರಿಲ್‌ ೮ ರಿಂದ ೧೦ರ ವರೆಗೆ ಎಲ್ಲ ಪ್ರಾಣಿಹತ್ಯಾಗ್ರಹಗಳನ್ನು ಮುಚ್ಚಲಾಗುವುದು, ಎಂದು ಹೇಳಿದರು.