ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ ಬಹಾದೂರ ದೇವೂಬಾರವರ ಭೇಟಿ

(ಎಡದಿಂದ) ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ೩ ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ನೇಪಾಳದ ಪ್ರಧಾನಮಂತ್ರಿ ಶೇರ ಬಹಾದೂರ ದೇವುಬಾರವರು ಎಪ್ರಿಲ್‌ ೨ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ಸಮಯದಲ್ಲಿ ನೇಪಾಳದಲ್ಲಿ ‘ರೂಪೆ ಕಾರ್ಡ’ (ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ), ಹಾಗೆಯೇ ಭಾರತ ಮತ್ತು ನೇಪಾಳದ ನಡುವೆ ರೈಲು ಸೇವೆಯ ಉದ್ಘಾಟನೆ ಮಾಡಲಾಯಿತು. ಈ ಸಮಯದಲ್ಲಿ ಇಬ್ಬರೂ ಪ್ರಧಾನಮಂತ್ರಿಗಳಿಂದ ಒಂದು ಸಂಯುಕ್ತ ನಿವೇದನೆಯನ್ನು ಪ್ರಸಿದ್ಧಿಗಾಗಿ ಕೊಡಲಾಯಿತು. ಇದರಲ್ಲಿ ದೇವುಬಾರವರು ‘ಇಂದು ನಾವು ಎರಡೂ ದೇಶಗಳಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಮೇಲೆ ಮೈತ್ರಿಪೂರ್ವಕ ಚರ್ಚೆ ಮಾಡಿದರು. ನಾವು ಭಾರತದ ಪ್ರಭಾವಿ ವ್ಯವಸ್ಥಾಪನೆಯ ಪರಿಚಯವು ಕೊರೋನಾದ ಸಮಯದಲ್ಲಾಯಿತು. ಭಾರತವು ನಮಗೆ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಗೂ ಇತರ ಸಾಹಿತ್ಯಗಳನ್ನು ಪೂರೈಸಿತು’ ಎಂದು ಹೇಳಿದರು.