‘ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ !’(ಅಂತೆ) – ಶರದ ಪವಾರ

ಕಾಶ್ಮೀರಿ ಹಿಂದೂಗಳ ಮೇಲಾದ ಅನ್ಯಾಯವು ಕಳೆದ ೩೨ ವರ್ಷಗಳ ವರೆಗೆ ಶರದ ಪವಾರರಂತಹ ಕಥಿತ ಜಾತ್ಯಾತೀತವಾದಿಗಳಿಂದ ಹತ್ತಿಕ್ಕಲಾಯಿತು. ಈಗ ಅದು ಬಹಿರಂಗವಾಗುತ್ತಿರುವುದರಿಂದ ಹಿಂದೂಗಳು ಜಾಗೃತರಾಗುತ್ತಿದ್ದಾರೆ ಮತ್ತು ಅದರ ಪರಿಣಾಮವನ್ನು ಶರದ ಪವಾರರಂತಹ ನೇತಾರರ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಭೋಗಿಸಬೇಕಾಗುವುದು. ಆದುದರಿಂದಲೇ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ !

ನವದೆಹಲಿ – ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದ ಕಣಿವೆಯನ್ನು ಬಿಡಬೇಕಾಯಿತು, ಆದರೆ ಅಲ್ಲಿ ಮುಸಲ್ಮಾನರನ್ನೂ ಗುರಿಯಾಗಿಸಲಾಗಿತ್ತು. ‘ಕಶ್ಮೀರ ಫಾಯಿಲ್ಸ್’ನ ಮಾಧ್ಯಮದಿಂದ ಭಾಜಪವು ಧಾರ್ಮಿಕ ಮತ್ತು ಸಾಮಾಜಿಕ ವಾತಾವರಣವನ್ನು ಕೆಡಿಸುತ್ತಿದೆ. ಈ ಚಲನಚಿತ್ರದ ಪ್ರದರ್ಶನಕ್ಕೂ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ. ದೇಶದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಉಳಿಸಲು ಪ್ರಯತ್ನಿಸದೇ ಈ ಚಲನಚಿತ್ರವನ್ನು ಕರರಹಿತಗೊಳಿಸಿ ಭಾಜಪದ ನೇತಾರರು ಜನರಿಗೆ ಅದನ್ನು ನೋಡಲು ಪ್ರೋತ್ಸಾಹಿಸುತ್ತಿದ್ದಾರೆ, ಎಂಬ ಸುಳ್ಳು ಟೀಕೆಯನ್ನು ಪವಾರರು ಮಾಡಿದ್ದಾರೆ. ‘ಮೋದಿ ಸರಕಾರಕ್ಕೆ ನಿಜವಾಗಿಯೂ ಕಾಶ್ಮೀರಿ ಪಂಡಿತರ ಮೇಲೆ ಕಾಳಜಿ ಇದ್ದರೆ, ಕೇಂದ್ರವು ಅವರ ಪುನರ್ವಸತಿ ಮಾಡಿಸುತ್ತಿತ್ತು. ಆದರೆ ಈ ಸರಕಾರವು ಮುಸಲ್ಮಾನರ ವಿರುದ್ಧ ಜನರ ಭಾವನೆಗಳನ್ನು ಕೆಣಕುವ ಕಾರ್ಯವನ್ನು ಮಾಡುತ್ತಿದೆ, ಎಂದು ಶರದ ಪವಾರರವರು ಆರೋಪಿಸಿದ್ದಾರೆ. ಅವರು ದೆಹಲಿಯಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ವಿಭಾಗದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಶಾಲೆಯ ಪಠ್ಯಕ್ರಮದಿಂದ ಭಾಜಪವು ಚಿಕ್ಕ ಮಕ್ಕಳ ಮನಸ್ಸನ್ನು ಕಲುಶಿತಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.

ಪವಾರರವರು ಮಾತನಾಡುತ್ತ, ಕಾಶ್ಮೀರಿ ಪಂಡಿತರು ಹಾಗೂ ಮುಸಲ್ಮಾನರ ಮೇಲಿನ ಆಕ್ರಮಣಗಳ ಹಿಂದೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳು ಜವಾಬ್ದಾರವಾಗಿದ್ದವು. ಹಾಗೆಯೇ ಕಾಶ್ಮೀರದ ಪ್ರಶ್ನೆಗೆ ಸತತವಾಗಿ ನೆಹರೂರವರನ್ನು ಜವಾಬ್ದಾರರಾಗಿಸುವುದು ಯೋಗ್ಯವಲ್ಲ. ಕಾಶ್ಮೀರಿ ಪಂಡಿತರು ಕಣಿವೆಯಿಂದ ಹೊರಬಂದಾಗ ಕೇಂದ್ರದಲ್ಲಿ ವಿಶ್ವನಾಥ ಪ್ರತಾಪ ಸಿಂಹರವರ ಸರಕಾರವಿತ್ತು. ಈ ಸರಕಾರಕ್ಕೆ ಭಾಜಪವು ಬೆಂಬಲ ನೀಡಿತ್ತು. ಮುಫ್ತಿ ಮಹಮ್ಮದ ಸಯೀದರು ಕೇಂದ್ರೀಯ ಗೃಹಮಂತ್ರಿಗಳಾಗಿದ್ದರು, ಜಗಮೋಹನರು ರಾಜ್ಯಪಾಲರಾಗಿದ್ದರು. ಇದೇ ಜಗಮೋಹನರವರು ಭಾಜಪದ ಟಿಕೇಟಿನಿಂದ ದೆಹಲಿಯಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಎಂದು ಹೇಳಿದರು.

ಬಹಿರಂಗವಾದ ಢೋಂಗಿತನ ಕಾಣಿಸುತ್ತಿರುವಾಗಲೂ ನಾನು ಅವರನ್ನು ಗೌರವಿಸುತ್ತೇನೆ ! – ವಿವೇಕ ಅಗ್ನಿಹೋತ್ರಿಯವರ ಪ್ರತ್ಯುತ್ತರ

ಶರದ ಪವಾರರ ಟೀಕೆಯ ಮೆಲೆ ‘ಕಶ್ಮೀರ ಫಾಯಿಲ್ಸ್‌’ನ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ಟ್ವೀಟ್‌ ಮಾಡಿ ಉತ್ತರಿಸುವಾಗ ‘ಕೆಲವು ದಿನಗಳ ಹಿಂದೆ ವಿಮಾನ ಪ್ರಯಾಣದ ಸಮಯದಲ್ಲಿ ನಾನು ಶರದಪ ವಾರ ಮತ್ತು ಅವರ ಪತ್ನಿಯನ್ನು ಭೇಟಿಯಾಗಿದ್ದನು. ಆಗ ನಾನು ಅವರ ಕಾಲಿಗೆ ಬಿದ್ದಾಗ ಇಬ್ಬರೂ ನನಗೆ ಅಭಿನಂದನೆ ನೀಡುತ್ತ ನನ್ನ ಮತ್ತು ನನ್ನ ಪತ್ನಿ ಪಲ್ಲವಿ ಜೋಶಿಗೂ ಶುಭಾಶಯ ಹೇಳಿದ್ದರು. ಪ್ರಸಾರಮಾಧ್ಯಮಗಳ ಎದುರು ಅವರಿಗೆ ಏನಾಯಿತು ಎಂಬುದು ತಿಳಿಯಲಿಲ್ಲ. ಬಹಿರಂಗವಾದ ಢೋಂಗಿತನ ಕಾಣಿಸುತ್ತಿರುವಾಗಲೂ ನಾನು ಅವರನ್ನು ಗೌರವಿಸುತ್ತೇನೆ’ ಎಂದು ಹೇಳಿದರು.

ಪವಾರರವರು ಟೀಕಿಸುವಾಗ ‘ಕಾಶ್ಮೀರಿ ಪಂಡಿತರ ಹೆಸರಿನಡಿಯಲ್ಲಿ ಲಾಭ ಪಡೆಯಲಾಗುತ್ತಿದೆ’ ಎಂದೂ ಹೇಳಿದ್ದರು. ಅದಕ್ಕೆ ವಿವೇಕ ಅಗ್ನಿಹೋತ್ರಿಯವರು ‘ಆದರಣೀಯ ಶರದ ಪವಾರರವರೇ, ಭಾರತದಂತಹ ಬಡ ದೇಶದಲ್ಲಿ ನಿಮ್ಮ ಅಭಿಪ್ರಾಯದಲ್ಲಿ ಓರ್ವ ರಾಜಕೀಯ ನೇತಾರನು ತನ್ನ ಬಲದಲ್ಲಿ ಗಳಿಸಿದ ಸಂಪತ್ತು ಎಷ್ಟು ಇರಬೇಕು ?’, ‘ಭಾರತದಲ್ಲಿ ಇಷ್ಟು ಬಡತನ ಏಕಿದೆ ?’, ಇದು ನಿಮಗಿಂತಲೂ ಉತ್ತಮವಾಗಿ ಬೇರೆ ಯಾರಿಗೆ ತಿಳಿದಿರಬಹುದು ? ದೇವರು ನಿಮಗೆ ದೀರ್ಘಾಯುಷ್ಯ ಮತ್ತು ಸದ್ಬುದ್ಧಿ ನೀಡಲಿ’ ಎಂದು ಹೇಳಿದರು.