ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರಬೇಕು. ಏಕೆಂದರೆ ಇಂತಹ ಕೃತಿಯಿಂದಲೇ ಹೆಚ್ಚು ಫಲವು ದೊರೆಯುತ್ತದೆ.

ದೇವರಿಗೆ ಭಾವಪೂರ್ಣವಾಗಿ ನೈವೇದ್ಯವನ್ನು ತೋರಿಸಿ ಅದನ್ನು ‘ಪ್ರಸಾದ’ವೆಂಬ ಭಾವದಿಂದ ಸೇವಿಸಿದರೆ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭ

‘ಹಿಂದೂ ಧರ್ಮದಲ್ಲಿ ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸಲಾಗುತ್ತದೆ. ‘ದೇವರಿಗೆ ನೈವೇದ್ಯವನ್ನು ತೋರಿಸಿ ಅದನ್ನು ಪ್ರಸಾದವೆಂದು ಸೇವಿಸುವವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಯಾವ ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ರಾಮನಾಥಿ (ಗೋವಾ)ಯಲ್ಲಿ ಸನಾತನದ ಆಶ್ರಮದಲ್ಲಿ ‘ಯೂ.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.

ಸಕ್ಕರೆ ಹಾಕಿ ಮಾಡಿದ ಪಾಯಸ ಮತ್ತು ಬೆಲ್ಲ ಹಾಕಿ ಮಾಡಿದ ಪಾಯಸಕ್ಕೆ ಸಂಬಂಧಿಸಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುವಾಗ ಕಬ್ಬಿನ ರಸವನ್ನು ಅತೀ ಹೆಚ್ಚು ತಾಪಮಾನದಲ್ಲಿ ಕುದಿಸುವುದರಿಂದ ಅದರಲ್ಲಿ ಆರೋಗ್ಯಕ್ಕೆ ಉಪಯುಕ್ತವಾಗಿರುವ ಪೋಷಕಾಂಶಗಳು (ಘಟಕಗಳು) ನಾಶವಾಗುತ್ತವೆ. ಸಕ್ಕರೆಯು ಬೆಳ್ಳಗೆ ಶುಭ್ರವಾಗಿ ಕಾಣಿಸಲು ಅದರ ಮೇಲೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಕಾರ್ಖಾನೆಯಲ್ಲಿ ವಿದ್ಯುತ್ ಸಂಚಾಲಿತ ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ.

ವಿದ್ಯುತ್ ದೀಪದ ಪ್ಲಾಸ್ಟಿಕ್ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ  ಹಣತೆಗಳು ಸಾತ್ತ್ವಿಕತೆಯ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಮಹತ್ವದ ಕುರಿತು ಸಮಾಜಕ್ಕೆ ಅರಿವು ಮೂಡಿಸಲು ‘ವಿದ್ಯುತ್ ದೀಪವಿರುವ ಪ್ಲಾಸ್ಟಿಕ್ ‘ಚೀನಿ ಹಣತೆ, ಮೇಣದ ಹಣತೆ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಪಾರಂಪಾರಿಕ ಮಣ್ಣಿನ ಹಣತೆಯನ್ನು ಹಚ್ಚಿದಾಗ ಆ ಪ್ರತಿಯೊಂದು ಹಣತೆಯಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡುವುದೇ ಆ ಪರೀಕ್ಷಣೆಯ ಉದ್ದೇಶವಾಗಿತ್ತು.

ವಾತಾವರಣದಲ್ಲಿ ಸಾಮಾನ್ಯ ಆಕಾಶದೀಪದಿಂದ ಬಹಳಷ್ಟು ನಕಾರಾತ್ಮಕ ಸ್ಪಂದನಗಳು ಮತ್ತು ಸನಾತನ-ನಿರ್ಮಿತ ಆಕಾಶದೀಪದಿಂದ ಬಹಳಷ್ಟು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಸಾಮಾನ್ಯ ಆಕಾಶದೀಪ ಮತ್ತು ‘ಸನಾತನ-ನಿರ್ಮಿತ ಆಕಾಶದೀಪ ಇವುಗಳಿಂದ ವಾತಾವರಣದ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ದೀಪಾವಳಿಯ ನಿಮಿತ್ತ ದೇವತೆಯ ತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಯನ್ನು ಬಿಡಿಸಿರಿ !

ಅಸಾತ್ತ್ವಿಕ ರಂಗೋಲಿಯಿಂದ ಬಹಳ ನಕಾರಾತ್ಮಕ ಸ್ಪಂದನಗಳು ಮತ್ತು ಸಾತ್ತ್ವಿಕ ರಂಗೋಲಿಯಿಂದ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು !

ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳು, ಹಾಗೆಯೇ ವಿಧಿಗಳು ಯಾವುದಾದರೊಂದು ದೇವತೆಗಳೊಂದಿಗೆ ಸಂಬಂಧಿಸಿರುತ್ತದೆ. ಆಯಾ ಹಬ್ಬದ ದಿನ ಅಥವಾ ವಿಧಿಗಳ ದಿನದಂದು ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿರುತ್ತದೆ ಅಥವಾ ವಿಧಿಗಳಿಂದಾಗಿ ಅಲ್ಲಿ ಆಕರ್ಷಿತವಾಗುತ್ತದೆ. ಆ ತತ್ತ್ವವು ಇನ್ನೂ ಹೆಚ್ಚು ಪ್ರಮಾಣದಲ್ಲಿ ಬಂದು ಎಲ್ಲರಿಗೂ ಲಾಭವಾಗಬೇಕೆಂದು, ಆ ತತ್ತ್ವಗಳನ್ನು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿರಿ.

ವಿದ್ಯುತ್ ತಂಪುಪೆಟ್ಟಿಗೆಯ ತುಲನೆಯಲ್ಲಿ ಮಣ್ಣಿನ ತಂಪುಪೆಟ್ಟಿಗೆಯಲ್ಲಿ ಇಟ್ಟಿದ್ದ ಆಹಾರದಿಂದ ಸಕಾರಾತ್ಮಕ ಸ್ಪಂದನಗಳ ಪ್ರಮಾಣ ಬಹಳ ಹೆಚ್ಚು ಪ್ರಕ್ಷೇಪಿತವಾಗುವುದು

‘ಹಿಂದಿನ ಕಾಲದಲ್ಲಿ ಆಹಾರ ಪದಾರ್ಥಗಳನ್ನು ಸಂರಕ್ಷಿಸಲು ಮಣ್ಣಿನ ತಂಪು ಪೆಟ್ಟಿಗೆಗಳನ್ನು (ಟಿಪ್ಪಣಿ) ಉಪಯೋಗಿಸುತ್ತಿದ್ದರು. ಇದರಿಂದ ಆಹಾರಪದಾರ್ಥಗಳು ಸ್ಥೂಲದಲ್ಲಿ ಉತ್ತಮವಾಗಿ ಉಳಿದು ಅವುಗಳಲ್ಲಿ ಸಾತ್ತ್ವಿಕತೆಯೂ ಉಳಿಯುತ್ತಿತ್ತು. ನೈಸರ್ಗಿಕ ಪದ್ಧತಿಯಿಂದ ಉಳಿಸಿಡಲಾದ ಆಹಾರ ಪದಾರ್ಥಗಳು ಸಾತ್ತ್ವಿಕವಾಗಿರುವುದರಿಂದ ಅವುಗಳನ್ನು ಸೇವಿಸುವವರಿಗೆ ಅವುಗಳಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿತ್ತು.

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಇತರ ವೃಕ್ಷಗಳಿಗೆ ಹೋಲಿಸಿದರೆ ಮಂದಾರದ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಿರುತ್ತದೆ. ಈ ಎಲೆಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಅವುಗಳಲ್ಲಿದ್ದ ತೇಜತತ್ತ್ವ ಕಾರ್ಯನಿರತವಾಗಲು ಪ್ರಾರಂಭವಾಗುತ್ತದೆ. ಎಲೆಗಳಿಂದ ಪ್ರಕ್ಷೇಪಿಸುವ ತೇಜೋಲಹರಿಗಳು ವಾತಾವರಣದಲ್ಲಿ ದೀರ್ಘಕಾಲ ಉಳಿಯುತ್ತವೆ.’

ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

‘ಔಷಧಿಗಳ ಮೇಲೆ ತುಳಸಿ ದಳವನ್ನು ಇಟ್ಟರೆ ಅವುಗಳ ಮೇಲೆ (ಔಷಧಿಗಳ ಮೇಲೆ) ಏನು ಪರಿಣಾಮವಾಗುತ್ತದೆ?, ಎನ್ನುವುದನ್ನು ಅಧ್ಯಯನ ಮಾಡಲು ಎಪ್ರಿಲ್ ೨೦೨೦ ರಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ‘ತುಳಸಿ ದಳಗಳನ್ನು ಇಡುವುದರಿಂದ ಔಷಧಿಗಳಲ್ಲಿ ಸಕಾರಾತ್ಮಕ ಶಕ್ತಿ ನಿರ್ಮಾಣವಾಗುತ್ತದೆ ಎನ್ನುವುದನ್ನು ಕೂಡ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪರೀಕ್ಷಣೆಯಿಂದ ಮಂಡಿಸಿದ್ದಾರೆ.