ಜೇಡಿಮಣ್ಣು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಅಶಾಸ್ತ್ರೀಯ ಮೂರ್ತಿ

‘ಗೋಮಯದಿಂದ ತಯಾರಿಸಿದ  ಅಶಾಸ್ತ್ರೀಯ ಗಣೇಶಮೂರ್ತಿ

ಗೋಮಯದಿಂದ ತಯಾರಿಸಿದ  ಗಣೇಶಮೂರ್ತಿ

‘ಗೋಮಯದಿಂದ (ಆಕಳ ಸೆಗಣಿಯಿಂದ) ತಯಾರಿಸಿದ ‘ಗೋಬರ್ ಗಣೇಶಮೂರ್ತಿಯ ಪೂಜೆ ಮಾಡಿದರೆ ಬೇಗನೇ ಫಲ ಪ್ರಾಪ್ತಿಯಾಗುತ್ತದೆ, ಅದೇ ರೀತಿ ಮಣ್ಣು ಮತ್ತು ಗೋಮಯಗಳಿಂದ ತಯಾರಿಸಿದ ಮೂರ್ತಿಯಲ್ಲಿ ಪಂಚ ತತ್ತ್ವಗಳುವಾಸಿಸುತ್ತವೆ, ಎಂಬಂತಹ ಅಯೋಗ್ಯ ಪ್ರಚಾರ ಮಾಡಲಾಗುತ್ತದೆ. ಗೋಮಯದಿಂದ ತಯಾರಿಸಿದ ಗಣೇಶಮೂರ್ತಿ ಅಶಾಸ್ತ್ರೀಯವಾಗಿದೆ ಇದರಕಾರಣ ಹೀಗಿದೆ – ಗೋಮಯ ಅಥವಾ ಗೋಮೂತ್ರ ಇವುಗಳಲ್ಲಿ ಮೂಲತಃ ಗೋಮಾತೆಯ ತತ್ತ ವಿರುತ್ತದೆ. ಶಾಸ್ತ್ರಕ್ಕನುಸಾರ ಯಾವುದೇ ವಸ್ತುವಿನಲ್ಲಿ ಯಾವುದಾದರೊಂದು ತತ್ತವಿದ್ದಲ್ಲಿ, ಅಲ್ಲಿ ಇನ್ನೊಂದು ತತ್ತ  ಬರುವುದಿಲ್ಲ. ಆದ್ದರಿಂದ ನೈಸರ್ಗಿಕವಾಗಿ ಗೋಮಾತೆಯ ತತ್ತ್ವವಿರುವ ಗೋಮಯದಲ್ಲಿ ಗಣೇಶತತ್ತ್ವವನ್ನು ಆಕರ್ಷಿಸಲು ಸಾಧ್ಯವಿಲ್ಲ.

‘ಇಕೊ-ಫ್ರೆಂಡ್ಲಿ ಗಣೇಶಮೂರ್ತಿಗಳ ವಂಚನೆಯಿಂದ ಎಚ್ಚರ !

‘ಇಕೊ-ಫ್ರೆಂಡ್ಲಿ ಶ್ರೀ ಗಣೇಶ ಮೂರ್ತಿ

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (ಅಂದರೆ ಪರಿಸರಕ್ಕೆ ಪೂರಕ) ಶ್ರೀ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳನ್ನು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತದೆ. ಈ ರೀತಿಯ ಮೂರ್ತಿಗಳು ಅಶಾಸ್ತ್ರೀಯವಾಗಿವೆ, ಅಲ್ಲದೇ ಪರಿಸರಕ್ಕೂ ಹಾನಿಕರವಾಗಿದೆ. ಕಾಗದದ ಮುದ್ದೆಯು ನೀರಿನಲ್ಲಿರುವ ಪ್ರಾಣವಾಯುವನ್ನು ಹೀರಿ ಕೊಳ್ಳುತ್ತದೆ ಮತ್ತು ಅದರಿಂದ ಜೀವಸೃಷ್ಟಿಗೆ ಹಾನಿಕರವಾದ ‘ಮಿಥೇನ್ ವಾಯು ಉತ್ಪನ್ನವಾಗುತ್ತದೆ. ‘ಕಾಗದದ ಮುದ್ದೆಯಲ್ಲಿ ‘ಟಾಲ್ಕ್ ಎಂಬ ಅಜೈವಿಕ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಅದು ನೀರಿನಲ್ಲಿ ಕರಗುವುದಿಲ್ಲ.

ವಿವಿಧ ವಸ್ತುಗಳಿಂದ ತಯಾರಿಸಿದ ಅಸಾತ್ತ್ವಿಕ ಮೂರ್ತಿ

ಇತ್ತೀಚೆಗೆ ಆವೆಮಣ್ಣು ಅಥವಾ ಜೇಡಿಮಣ್ಣನ್ನು ಬಿಟ್ಟು ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಹಾಗೆಯೇ ಕಾಗದದ ಉಂಡೆ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಗಳ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿಸುವುದಿಲ್ಲ.