ಸಂತರ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ |
‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರಿ ರಾಜ್ಯದ ಸ್ಥಾಪನೆಯ ಮಹೋನ್ನತ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡಲು ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಲ್ಲಿ ಪರಾತ್ಪರ ಗುರು ಡಾಕ್ಟರರ ಮೇಲೆ ಸತತವಾಗಿ ಆಕ್ರಮಣಗಳನ್ನು ಮಾಡುತ್ತವೆ. ಕಳೆದ ೨೦ ವರ್ಷಗಳಿಂದ ನಡೆದಿರುವ ಈ ‘ದೇವಾಸುರ ಯುದ್ಧ’ ಈಗ ಅಂತಿಮ ಹಂತವನ್ನು ತಲುಪಿದೆ. ಈ ಸೂಕ್ಷ್ಮ ಯುದ್ಧದ ಪರಿಣಾಮವು ಕಾಲಕಾಲಕ್ಕೆ ಪರಾತ್ಪರ ಗುರು ಡಾ. ಆಠವಲೆಯವರ ದೇಹ, ಅವರ ಕೋಣೆ ಮತ್ತು ಅವರ ಕೋಣೆಯಲ್ಲಿರುವ ವಸ್ತುಗಳ ಮೇಲೆ ಆಗುತ್ತದೆ. ಈ ಸಂದರ್ಭದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಅನೇಕ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಇಂತಹ ಒಂದು ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಇಲ್ಲಿ ನೀಡಲಾಗಿದೆ.
ಫೆಬ್ರವರಿ-ಮಾರ್ಚ್ ೨೦೨೧ ರಲ್ಲಿ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಮಾಡಿದ ಆಕ್ರಮಣಗಳಿಂದ ಅವರ ಪ್ರಾಣಶಕ್ತಿ ಅಲ್ಪವಾಗಿದ್ದರಿಂದ ಅವರಿಗೆ ಬಹಳ ಆಯಾಸವಾಗಿತ್ತು. ಅಲ್ಲದೇ ಅವರ ಶಾರೀರಿಕ ತೊಂದರೆಗಳಲ್ಲಿ ಹೆಚ್ಚಳವಾಗಿತ್ತು. ‘ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿ ಹೆಚ್ಚಾಗಿ ಅವರ ಆರೋಗ್ಯ ಚೆನ್ನಾಗಿರಬೇಕು ’ ಎಂದು ಸಪ್ತರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಅಥವಾ ಕೋಣೆಯ ಹೊರಗೆ ಮಂದಾರದ (ಬಿಳಿ ಎಕ್ಕೆ ಗಿಡದ) ಸಸಿಯನ್ನು ಇಡಲು ಹೇಳಿದ್ದರು. ಅದರಂತೆ ೨೬.೩.೨೦೨೧ ರಂದು ಒಂದು ಕುಂಡದಲ್ಲಿ ಮಂದಾರದ ಸಸಿಯನ್ನು ನೆಟ್ಟು, ಅದನ್ನು ಪರಾತ್ಪರ ಗುರು ಡಾಕ್ಟರರ ಕೋಣೆಯ ಹೊರಗೆ ಟೆರೇಸ್ ಮೇಲೆ ಇಡಲಾಗಿತ್ತು. ೧೬.೪.೨೦೨೧ ರಂದು ಮಂದಾರದ ಸಸಿಯನ್ನು ನೆಟ್ಟಿರುವ ಕುಂಡದಲ್ಲಿ ಒಂದು ಪಕ್ಷಿಯ ಈಗ ತಾನೇ ಹುಟ್ಟಿದ ಚಿಕ್ಕ ಮರಿ ಬಿದ್ದಿರುವುದು ಕಂಡು ಬಂದಿತು. ಈ ಘಟನೆಯಿಂದ ಮಂದಾರದ ಸಸಿಯ ಮೇಲಾದ ಪರಿಣಾಮವನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು ಆ ಸಸಿಯನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ : ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗಡೆ ಟೆರೇಸ್ ಮೇಲೆ ಇಟ್ಟಿದ್ದ ಮಂದಾರದ ಸಸಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ (ಶಕ್ತಿ) ಕಂಡು ಬಂದಿತು ಮತ್ತು ಆ ಸಸಿಯನ್ನು ಹೋಮ ಮಾಡಿದ ಸ್ಥಳದಲ್ಲಿ ಇಟ್ಟ ಮೇಲೆ ಸಸಿಯಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಯಿತು.
ಟಿಪ್ಪಣಿ : ಪಕ್ಷಿಯ ಮರಿ ಕುಂಡದಲ್ಲಿದ್ದಾಗ ಮಾಡಿದ ಮಂದಾರದ ಸಸಿಯ ಪರೀಕ್ಷಣೆ
೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗಡೆ ಇಟ್ಟಿದ್ದ ಮಂದಾರದ ಸಸಿಯಲ್ಲಿ ಪ್ರಾರಂಭದಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಇತ್ತು : ಶ್ರೀ ಗಣಪತಿಯು ಪ್ರಾಣಶಕ್ತಿಯ ದೇವತೆಯಾಗಿದ್ದಾನೆ. ಮಂದಾರದ ವೃಕ್ಷದಲ್ಲಿ ಶ್ರೀ ಗಣಪತಿಯ ತತ್ತ್ವವನ್ನು ಆಕರ್ಷಿಸಿ ಅದನ್ನು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಸಪ್ತರ್ಷಿಗಳ ಸಂಕಲ್ಪದಿಂದ ಪರಾತ್ಪರ ಗುರು ಡಾಕ್ಟರರಿಗೆ ಮಂದಾರದ ಸಸಿಯ ಮಾಧ್ಯಮದಿಂದ ಪ್ರಾಣಶಕ್ತಿ ಸಿಗುತ್ತಿತ್ತು.
೨ ಆ. ಮಂದಾರ ಸಸಿಯ ಕುಂಡದಲ್ಲಿ ಪಕ್ಷಿಯ ಮರಿ ಬಿದ್ದ ಬಳಿಕ ಸಸಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು : ಮಂದಾರ ಸಸಿಯ ಮಾಧ್ಯಮದಿಂದ ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿ ಹೆಚ್ಚಾಗಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗಲು ಸಹಾಯ ಆಗುವುದಿತ್ತು. ಹೀಗಾಗಬಾರದೆಂದು ಕೆಟ್ಟ ಶಕ್ತಿಗಳು ಪಕ್ಷಿಯ ಮರಿಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಸಸಿಯಲ್ಲಿ ನಕಾರಾತ್ಮಕ ಶಕ್ತಿಯನ್ನು ತುಂಬಿದವು. ಈ ಮರಿ ಮಂದಾರ ಸಸಿಯ ಕುಂಡದಲ್ಲಿ ಬಿದ್ದಿದ್ದರಿಂದ ಸಸಿಯ ಮೇಲೆ ನಕಾರಾತ್ಮಕ ಸ್ಪಂದನಗಳ ಆವರಣ ಬಂದಿತು. ಇದರಿಂದ ಮಂದಾರ ಸಸಿಯ ಕಾರ್ಯದಲ್ಲಿ ಅಡಚಣೆ ನಿರ್ಮಾಣವಾಯಿತು. (೧೬.೪.೨೦೨೧ ರಂದು ಮಂದಾರ ಸಸಿಯ ಕುಂಡದಲ್ಲಿ ಬಿದ್ದಿರುವ ಪಕ್ಷಿಯ ಮರಿಯ ‘ಯು.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್)’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಆಗ ಆ ಮರಿಯಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಅಧಿಕ ಪ್ರಮಾಣದಲ್ಲಿ ‘ಇನ್‍ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಗಳು ಕಂಡು ಬಂದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೧೨.೩೫ ಮೀಟರ್ ಮತ್ತು ೬.೮೩ ಮೀಟರ್
ಗಳಷ್ಟಿತ್ತು.
೨ ಇ. ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು : ಮಂದಾರ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಬೇಕೆಂದು ಆ ಸಸಿಯನ್ನು ರಾಮನಾಥಿ ಆಶ್ರಮದಲ್ಲಿ ನಡೆದಿದ್ದ ಶ್ರೀ ಲಲಿತಾ ತ್ರಿಪುರಸುಂದರೀದೇವಿಯ ಹೋಮವಾದ ಸ್ಥಳದಲ್ಲಿ ಇಡಲಾಯಿತು. ಈ ಹೋಮದ ಚೈತನ್ಯದಿಂದ ಸಸಿಯ ಮೇಲಿನ ನಕಾರಾತ್ಮಕ ಸ್ಪಂದನಗಳ ಆವರಣ ನಾಶವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು . ಸ್ವಲ್ಪದರಲ್ಲಿ, ‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯ ಪೂರ್ಣವಾಗಲು ಪರಾತ್ಪರ ಗುರು ಡಾ. ಆಠವಲೆಯವರು ಜೀವಂತವಿರುವುದು ಅತೀ ಆವಶ್ಯಕವಾಗಿದೆ’, ಹೀಗೆ ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳು (ಸಂತರು) ಹೇಳಿದ್ದಾರೆ. ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ವಿವಿಧ ಆಯೋಜನೆಗಳನ್ನು ನಡೆಸಿ ಪರಾತ್ಪರ ಗುರು ಡಾಕ್ಟರರಿಗೆ ಯಾವುದಾದರೊಂದು ರೀತಿಯಿಂದ ತೊಂದರೆಗಳನ್ನು ಕೊಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಅಡಚಣೆಗಳನ್ನು ತರಲು ಯಾವ ರೀತಿ ಪ್ರಯತ್ನಿಸುತ್ತಿರುತ್ತವೆ ಎನ್ನುವುದು ಈ ಸಂಶೋಧನೆಯಿಂದ ಗಮನಕ್ಕೆ ಬರುತ್ತದೆ’.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೭. ೬.೨೦೨೧)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |