ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಚಿ. ಋಶಂಕ ರಾಘವೇಂದ್ರ (೨ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಬಾಲಕರೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಈ ಪೀಳಿಗೆಯಲ್ಲಿನ ಒಬ್ಬನು ಚಿ. ಋಶಂಕ ರಾಘವೇಂದ್ರ !

ಚಿ. ಋಶಂಕ ರಾಘವೇಂದ್ರ

ಮೈಸೂರಿನ ಋಶಂಕನ ತಾಯಿ ರೇಣುಕಾ ಇವರಿಗೆ ಅವನು ಜನಿಸುವ ಮೊದಲು ಬಂದ ಅನುಭೂತಿಗಳು ಮತ್ತು ಅವನ ಕುಟುಂಬದವರಿಗೆ ಅರಿವಾದ ಅವನ ಗುಣವೈಶಿಷ್ಟ್ಯಗಳನ್ನು ಮುಂದೆ ಕೊಡಲಾಗಿದೆ. ಚಿ. ಋಶಂಕನು ಮೈಸೂರಿನ ಶೇ. ೬೬ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಸೌ. ರಾಧಾ ಮಂಜುನಾಥ ಇವರ ಮೊಮ್ಮಗನಾಗಿದ್ದಾನೆ.

೧. ಜನಿಸುವ ಮೊದಲು

೧ ಅ. ‘ಗರ್ಭಧಾರಣೆ ಆದಾಗಿನಿಂದ ನಾನು ಪ್ರತಿದಿನ ಗಣಪತಿ ಸ್ತೋತ್ರವನ್ನು ಹೇಳುತ್ತಿದ್ದೆನು. ನಾನು ಪ್ರತಿದಿನ ಸಾಯಂಕಾಲ ರಾಮರಕ್ಷಾಸ್ತೋತ್ರವನ್ನು ಕೇಳಿ ಶ್ರೀರಾಮನನ್ನು ಸ್ಮರಿಸುತ್ತಿದ್ದೆನು.

೧ ಆ. ಅನುಭೂತಿ – ಗರ್ಭವತಿ ಇದ್ದಾಗ ನಾನು ಶಿವನ ಚಿತ್ರವನ್ನು ಬಿಡಿಸಿದ್ದೆನು. ಆ ಸಮಯದಲ್ಲಿ ಚಿತ್ರವನ್ನು ಬಿಡಿಸುತ್ತಿರುವಾಗ ನನಗೆ ಆದಿಯೋಗಿ (ಶಿವ) ಮತ್ತು ಆದಿಶಕ್ತಿ ಇವರ ಆಶೀರ್ವಾದವು ಲಭಿಸಿದುದರ ಅರಿವಾಯಿತು.

೨. ಜನಿಸಿದ ನಂತರ

ಸೌ. ರೇಣುಕಾ ರಾಘವೇಂದ್ರ

೨ ಅ. ಜನ್ಮದಿಂದ ೧೧ ತಿಂಗಳುಗಳವರೆಗೆ : ಚಿ. ಋಶಂಕನು ಆರು ತಿಂಗಳಿನಿಂದಲೇ ಭಕ್ತಿಗೀತೆಗಳನ್ನು ಏಕಾಗ್ರತೆಯಿಂದ ಕೇಳುತ್ತಾನೆ. ಮನೆಯಲ್ಲಿ ಪೂಜೆಯ ಸಮಯದಲ್ಲಿ ಆರತಿಯನ್ನು ಮಾಡುವಾಗ ಅವನು ಅದರಲ್ಲಿ ಪಾಲ್ಗೊಳ್ಳುತ್ತಾನೆ. ಆರತಿಯಾದ ನಂತರ ಅವನು ಆರತಿಯನ್ನು ತೆಗೆದುಕೊಳ್ಳಲು ಮುಂದೆ ಬರುತ್ತಾನೆ.’ – ಸೌ. ರೇಣುಕಾ ರಾಘವೇಂದ್ರ (ತಾಯಿ), ಮೈಸೂರು.

೨ ಆ. ವಯಸ್ಸು ೧ ರಿಂದ ಒಂದೂವರೆ ವರ್ಷಗಳು

೨ ಆ ೧. ಸ್ವಚ್ಛತೆ ಮತ್ತು ಅಚ್ಚುಕಟ್ಟುತನ : ‘ಮನೆಯಲ್ಲಿ ಸುಖಾಸನದ ಹೊದಿಕೆಗಳು ಮುದ್ದೆಯಾಗಿದ್ದರೆ ಅವನು ಅದನ್ನು ಸರಿಪಡಿಸುತ್ತಾನೆ. ಕಿಟಕಿಯ ಮೇಲಿನ ಧೂಳು ಕಂಡರೆ ಅವನು ಅದನ್ನು ತಕ್ಷಣ ಒರೆಸುತ್ತಾನೆ.

೨ ಆ ೨. ಧರ್ಮಾಚರಣೆಯನ್ನು ಮಾಡುವುದು

ಅ. ಅವನಿಗೆ ಪ್ರತಿದಿನ ತಿಲಕವನ್ನು ಹಚ್ಚಿಕೊಳ್ಳಲು ಇಷ್ಟವಾಗುತ್ತದೆ. ಅವನು ತಾನಾಗಿಯೇ ತನಗೆ ತಿಲಕವನ್ನು ಹಚ್ಚಲು ಹೇಳುತ್ತಾನೆ.

ಆ. ಋಶಂಕನಿಗೆ ಕೆಳಗೆ ಕುಳಿತು ಮತ್ತು ಎಲ್ಲರೊಂದಿಗೆ ಊಟ ಮಾಡಲು ಇಷ್ಟವಾಗುತ್ತದೆ.’ – ಸೌ. ರಾಧಾ ಮಂಜುನಾಥ (ಅಜ್ಜಿ (ತಂದೆಯ ತಾಯಿ)), ಮೈಸೂರು

೨ ಆ ೩. ಸಾತ್ತ್ವಿಕತೆಯ ಸೆಳೆತ

೨ ಆ ೩ ಅ. ಮಾಂಸಹಾರ ಇಷ್ಟವಾಗದಿರುವುದು : ‘ಋಶಂಕನಿಗೆ ಮಾಂಸಹಾರವು ಇಷ್ಟವಾಗುವುದಿಲ್ಲ.

೨ ಆ ೩ ಆ. ಸಾತ್ತ್ವಿಕ ವಿಷಯಗಳ ಆಕರ್ಷಣೆ : ಮನೆಯ ಅಂಗಳದಲ್ಲಿನ ರಂಗೋಲಿಯನ್ನು ನೋಡಿ ಅವನಿಗೆ ತುಂಬಾ ಆನಂದವಾಗುತ್ತದೆ. ಅವನು ಆಡುತ್ತಿರುವಾಗಲೂ ರಂಗೋಲಿಯ ಮೇಲೆ ಕಾಲು ಇಡದಂತೆ ನೋಡಿಕೊಳ್ಳುತ್ತಾನೆ. ಕೆಲವೊಮ್ಮೆ ಬೆಳಗ್ಗೆ ರಂಗೋಲಿ ಹಾಕಲು ತಡವಾದರೆ ಅವನು ‘ಅಜ್ಜಿ, ಇವತ್ತು ರಂಗೋಲಿ ಬಿಡಿಸಿಲ್ಲ’, ಎಂದು ಹೇಳಿ ನೆನಪಿಸುತ್ತಾನೆ.

೨ ಆ ೩ ಇ. ಹಸುಗಳನ್ನು ನೋಡಿದರೆ ಋಶಂಕನಿಗೆ ತುಂಬಾ ಆನಂದವಾಗುತ್ತದೆ. ಅವನು ಹಸುಗಳಿಗೆ ನಮಸ್ಕರಿಸುತ್ತಾನೆ. ಅವುಗಳಿಗೆ ಮೇವು ಹಾಕುವಾಗ ಅವನು ಭಯಪಡುವುದಿಲ್ಲ.’ – ಸೌ. ರೇಣುಕಾ ರಾಘವೇಂದ್ರ ಮತ್ತು ಸೌ. ರಾಧಾ ಮಂಜುನಾಥ

೨ ಆ ೪. ಈಶ್ವರನ ಬಗ್ಗೆ ಸೆಳೆತ

ಅ. ‘ಋಶಂಕನಿಗೆ ಶ್ರೀ ಗಣಪತಿ ಮತ್ತು ದತ್ತ ಗುರುಗಳು ತುಂಬಾ ಇಷ್ಟವಾಗುತ್ತಾರೆ. ನಮ್ಮ ಮನೆಯ ಬಾಗಿಲಿಗೆ ಗಣಪತಿಯ ಚಿತ್ರವನ್ನು ಕೆತ್ತಲಾಗಿದೆ. ಅದನ್ನು ನೋಡಿ ಅವನು ಅಲ್ಲಿ ಓಡಾಡುವಾಗ ಅದಕ್ಕೆ ನಮಸ್ಕಾರ ಮಾಡುತ್ತಾನೆ. ಅಲ್ಲಿ ‘ಆರತಿ ಮಾಡುತ್ತಿದ್ದೇನೆ’, ಎಂಬ ಭಾವವನ್ನಿಟ್ಟು ಆರತಿಯನ್ನು ಮಾಡುತ್ತಾನೆ. ನಾವು ಮನೆಯಲ್ಲಿನ ಗೋಡೆಗಳ ಮೇಲೆ ದೇವತೆಗಳ ಛಾಯಾಚಿತ್ರಗಳನ್ನು ಹಚ್ಚಿದ್ದೇವೆ. ಅವನು ಆ ಛಾಯಾಚಿತ್ರಗಳ ಕಡೆಗೆ ನೋಡಿ ನಮಸ್ಕರಿಸುತ್ತಾನೆ.

ಆ. ಸನಾತನವು ನಿರ್ಮಿಸಿದ ಅಷ್ಟದೇವತೆಗಳ ಚಿತ್ರಗಳಲ್ಲಿನ ದೇವತೆಗಳ ಹೆಸರುಗಳನ್ನು ಕೇಳಿದಾಗ ಅವನು ಸರಿಯಾಗಿ ಅದೇ ದೇವತೆಯ ಚಿತ್ರವನ್ನು ತೋರಿಸುತ್ತಾನೆ. ಈ ಕುರಿತು ನಾವು ಯಾರೂ ಅವನಿಗೆ ಹೇಳಲಿಲ್ಲ. ಆದರೂ ಅವನು ದೇವತೆಗಳ ಚಿತ್ರಗಳನ್ನು ಗುರುತಿಸುತ್ತಾನೆ. ಇದು ನಮಗೆ ಆಶ್ಚರ್ಯವೆನಿಸುತ್ತದೆ.

ಇ. ಅವನು ‘ಜಯ ಹನುಮಾನಜಿ, ಜಯ ಜಯ |’, ಎಂದು ಜಯಜಯಕಾರವನ್ನು ಮಾಡುತ್ತಾನೆ. – ಸೌ. ರಾಧಾ ಮಂಜುನಾಥ

ಈ. ‘ಒಮ್ಮೆ ನಾನು ಋಶಂಕನಿಗೆ ‘ವಿಡಿಯೋ ಕಾಲ್’ ಮಾಡಿದ್ದೆನು. ಆಗ ನಾನು ಅವನಿಗೆ ನಮ್ಮ ಮನೆಯಲ್ಲಿರುವ ಶ್ರೀಕೃಷ್ಣನ ಚಿತ್ರವನ್ನು ತೋರಿಸಿದೆನು. ಆಗ ಅವನು ತಕ್ಷಣ ಕೈಗಳನ್ನು ಜೋಡಿಸಿ ಭಾವಪೂರ್ಣ ನಮಸ್ಕಾರ ಮಾಡಿದನು ಮತ್ತು ಅವನು ‘ವಾಸುದೇವ, ವಾಸುದೇವ’, ಎಂದು ಹೇಳಿದನು. (ಅವನು ಶ್ರೀಕೃಷ್ಣನಿಗೆ ‘ವಾಸುದೇವ’ಎನ್ನುತ್ತಾನೆ)

೨ ಆ ೫. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಇರುವ ಸೆಳೆತ : ಋಶಂಕನ ಜೊತೆಗೆ ಸಂಚಾರವಾಣಿಯಲ್ಲಿ ಮಾತನಾಡುವಾಗ ನಾನು ಅವನಿಗೆ, “ನೀನು ಗೋವಾಗೆ ಬರುವೆಯಾ ?” ಎಂದು ಕೇಳಿದೆನು. ಅದಕ್ಕೆ ಅವನು ಏನು ಮಾತನಾಡಲಿಲ್ಲ. ನಂತರ ನಾನು ಅವನಿಗೆ, “ಇಲ್ಲಿ ದೊಡ್ಡ ಅಜ್ಜನವರು ಇದ್ದಾರೆ. (ಅವನು ಪರಾತ್ಪರ ಗುರು ಡಾಕ್ಟರರನ್ನು ‘ದೊಡ್ಡ ಅಜ್ಜ’ ಎನ್ನುತ್ತಾನೆ) ನೀನು ಬರುವೆಯಾ ?” ಎಂದು ಕೇಳಿದೆನು. ಆಗ ಅವನು ತಕ್ಷಣ ‘ಬರುತ್ತೇನೆ’, ಎಂದು ಹೇಳಿದನು. ನಂತರ ನಾನು ಅವನಿಗೆ, “ಇಲ್ಲಿ ವಾಸುದೇವನಿದ್ದಾನೆ. ನೀನು ಬರುವೆಯಾ ?” ಎಂದು ಕೇಳಿದೆನು. ಆಗಲೂ ಅವನು ತಕ್ಷಣ ‘ಬರುತ್ತೇನೆ’, ಎಂದು ಹೇಳಿದನು. ಆಗ ‘ಪ್ರತಿಯೊಂದು ಸಾತ್ತ್ವಿಕ ಜೀವಗಳು ಗುರುದೇವರ ಬಳಿಗೆ ತಾವಾಗಿಯೇ ಆಕರ್ಷಿತ ಗೊಳ್ಳುತ್ತವೆ’, ಎಂದು ಅರಿವಾಗಿ ನನ್ನ ಭಾವಜಾಗೃತವಾಯಿತು.

೨ ಆ ೬. ಋಶಂಕನೊಂದಿಗೆ ಮಾತನಾಡುವಾಗ ನನಗೆ ಆನಂದವಾಗುತ್ತದೆ. ಅವನು ಏನು ಮಾತನಾಡದಿದ್ದರೂ, ಅವನ ಕೃತಿಗಳನ್ನು ನೋಡಿ ನನಗೆ ಒಳ್ಳೆಯದೆನಿಸುತ್ತದೆ.’ – ಸೌ. ದೀಪಾ ಔಂಧಕರ, ರತ್ನಾಗಿರಿ (ಸೋದರತ್ತೆ (ತಂದೆಯ ಚಿಕ್ಕಮ್ಮನ ಮಗಳು))

೩. ಮೇಲಿನ ಬರವಣಿಗೆಯೊಂದಿಗೆ ಕೊಡಲು ಚಿ. ಋಶಂಕನ ಛಾಯಾಚಿತ್ರವನ್ನು ತೆಗೆಯುವಾಗ ಆದ ತೊಂದರೆ

ಋಶಂಕನು ಛಾಯಾಚಿತ್ರವನ್ನು ತೆಗೆಯಲು ಕೊಡದಿರುವುದು ಮತ್ತು ಕಾರಣವಿಲ್ಲದೇ ಅಳುವುದು ಮತ್ತು ಆ ಸಮಯದಲ್ಲಿ ಮನೆಯಲ್ಲಿ ಎಲ್ಲರಿಗೂ ಕಿರಿಕಿರಿಯಾಗುವುದು : ‘ಋಶಂಕನ ಛಾಯಾಚಿತ್ರವನ್ನು ತೆಗೆಯಲು ಅವನಿಗೆ ಸಾತ್ತ್ವಿಕ ಬಟ್ಟೆಗಳನ್ನು ತೊಡಿಸಿ ತಿಲಕವನ್ನು ಹಚ್ಚಿ ಅವನನ್ನು ತಯಾರು ಮಾಡಿದೆನು; ಆದರೆ ಛಾಯಾಚಿತ್ರವನ್ನು ತೆಗೆಯುತ್ತಿರುವಾಗ ಅವನು ತುಂಬಾ ತೊಂದರೆ ಕೊಡತೊಡಗಿದನು. ಅವನು ಛಾಯಾಚಿತ್ರವನ್ನು ತೆಗೆಯಲು ಬಿಡುತ್ತಿರಲಿಲ್ಲ. ಅವನು ಬೆಳಗಿನಿಂದ ಮಧ್ಯಾಹ್ನದವರೆಗೆ ಯಾವುದೇ ಕಾರಣವಿಲ್ಲದೇ ಅಳುತ್ತಿದ್ದನು. ‘ಅವನು ಏಕೆ ಅಳುತ್ತಿದ್ದಾನೆ ?’, ಎಂದು ಮನೆಯಲ್ಲಿ ಯಾರಿಗೂ ಗಮನಕ್ಕೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ಮನೆಯಲ್ಲಿ ಎಲ್ಲರಿಗೂ ಕಿರಿಕಿರಿಯಾಯಿತು.

ಋಶಂಕನಲ್ಲಿನ ಸ್ವಭಾವದೋಷ : ಹಠಮಾರಿತನ

ಕೃತಜ್ಞತೆ

‘ಹೇ ಗುರುದೇವಾ, ‘ತಮ್ಮ ಕೃಪೆಯಿಂದಲೇ ನನಗೆ ಋಶಂಕನಲ್ಲಿನ ಗುಣವೈಶಿಷ್ಟ್ಯಗಳನ್ನು ಬರೆಯಲು ಸಾಧ್ಯವಾಯಿತು’, ಇದಕ್ಕಾಗಿ ನಾನು ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’ – ಸೌ. ರಾಧಾ ಮಂಜುನಾಥ (೨೭.೬.೨೦೨೧)