ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸಂತರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವ್ವವಿದ್ಯಾಲಯವು ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್) ಎಂಬ ಉಪಕರಣದ ಮೂಲಕ ಮಾಡಿರುವ ವೈಜ್ಞಾನಿಕ ಪರೀಕ್ಷಣೆ

‘ಸಂತರು ಈಶ್ವರನೊಂದಿಗೆ ಏಕರೂಪವಾಗಿರುವುದರಿಂದ ಅವರಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿರುತ್ತದೆ. ಸಂತರ ಹಸ್ತಾಕ್ಷರಗಳಿಂದ ಚೈತನ್ಯ ಪ್ರಕ್ಷೇಪಿಸುತ್ತಿರುತ್ತದೆ, ಆದುದರಿಂದ ಸಂತರ ಹಸ್ತಾಕ್ಷರಗಳನ್ನು ಜೋಪಾನ ಮಾಡುವ ಹಿಂದೂಗಳ ಪ್ರಾಚೀನ ಪರಂಪರೆಯಿದೆ. ಪರಾತ್ಪರ ಗುರು ಡಾ. ಆಠವಲೆಯವರು ‘ಪರಾತ್ಪರ ಗುರು ಪದವಿಯಲ್ಲಿನ ಸಮಷ್ಟಿ ಸಂತರರಾಗಿದ್ದಾರೆ. ಅವರು ಈಶ್ವರಿ ರಾಜ್ಯದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. ಮಾರ್ಚ್ ೨೦೨೧ ರಲ್ಲಿ ಪರಾತ್ಪರ ಗುರು ಡಾಕ್ಟರರ ಮೇಲೆ ಅನಿಷ್ಟ ಶಕ್ತಿಗಳು ಸೂಕ್ಷ್ಮದಿಂದ ಮಾಡಿದ ಆಕ್ರಮಣಗಳಿಂದ ಅವರ ಪ್ರಾಣಶಕ್ತಿ ಕಡಿಮೆಯಾಗಿ ಅವರಿಗೆ ಬಹಳ ಆಯಾಸವಾಗಿತ್ತು, ಹಾಗೆಯೇ ಅವರ ಶಾರೀರಿಕ ತೊಂದರೆಗಳಲ್ಲಿಯೂ ಹೆಚ್ಚಳವಾಗಿತ್ತು. ಅನಾರೋಗ್ಯದ ಕಾಲಾವಧಿಯಲ್ಲಿಯೂ (ಮಾರ್ಚ್-ಎಪ್ರಿಲ್ ತಿಂಗಳುಗಳಲ್ಲಿ) ಅಲ್ಪಕಾಲ ವಿಶ್ರಾಂತಿ ಪಡೆದುಕೊಂಡು ಅವರು ಗ್ರಂಥ-ಸಂಕಲನ, ಲೇಖನಗಳ ಪರಿಶೀಲನೆ ಈ ಸೇವೆಗಳನ್ನು ಮಾಡುತ್ತಿದ್ದರು. ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಿಂದ ಪ್ರಕ್ಷೇಪಿಸುವ ಸ್ಪಂದನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು ರಾಮನಾಥಿಯ (ಗೋವಾ) ಸನಾತನ ಆಶ್ರಮದಲ್ಲಿ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ವಿಷಯದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ – ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಚೈತನ್ಯವಿರುವುದು

ಸಾಮಾನ್ಯ ವ್ಯಕ್ತಿಗಳಲ್ಲಿ ರಜ-ತಮದ ಪ್ರಮಾಣ ಹೆಚ್ಚಿರುವುದರಿಂದ ಅವರಲ್ಲಿ ಸಾತ್ತ್ವಿಕತೆ ಇರುವುದಿಲ್ಲ. ಈ ಪರೀಕ್ಷಣೆಯ ತುಲನೆಗಾಗಿ ಒಬ್ಬ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯ ಹಸ್ತಾಕ್ಷರಗಳ ಪರೀಕ್ಷಣೆಯನ್ನೂ ಮಾಡಲಾಯಿತು. ಈ ಹಸ್ತಾಕ್ಷರಗಳಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ; ಅವುಗಳಲ್ಲಿ ಅಧಿಕ ಪ್ರಮಾಣದಲ್ಲಿ ‘ಇನ್‌ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ನಕಾರಾತ್ಮಕ ಊರ್ಜೆಗಳು ಕಂಡು ಬಂದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೭.೨೦ ಮೀಟರ್ ಮತ್ತು ೬.೧೦ ಮೀಟರ್ ಇದ್ದವು. ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಸೌ. ಮಧುರಾ ಕರ್ವೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯವಿದೆ : ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಲ್ಲಿ ೨೨೭ ಮೀಟರ್‌ನಿಂದ ೩೨೮ ಮೀಟರ್ ಗಳಷ್ಟು ಸಕಾರಾತ್ಮಕ ಊರ್ಜೆಯಿರುವುದು ಪರೀಕ್ಷಣೆ ಯಿಂದ ಕಂಡುಬಂದಿತು. ಇದು ವೈಶಿಷ್ಟ್ಯಪೂರ್ಣವಾಗಿದೆ ಇದರ ಕಾರಣ ವೆಂದರೆ, ಪರಾತ್ಪರ ಗುರು ಡಾಕ್ಟರರಲ್ಲಿ ಶೇ. ೫ ರಷ್ಟು ವಿಷ್ಣುತತ್ತ್ವ್ವವಿದ್ದು, ಅದು ಜಾಗೃತವಾಗಿ ಕಾರ್ಯನಿರತವಾಗಿದೆ. ಪರಾತ್ಪರ ಗುರು ಡಾಕ್ಟರರಿಂದ ವಾತಾವರಣದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. ಅವರ ಹಸ್ತಾಕ್ಷರಗಳಲ್ಲಿ ಇಷ್ಟು ಚೈತನ್ಯವಿದೆ ಎಂದಾದರೆ ಪ್ರತ್ಯಕ್ಷ ಅವರಲ್ಲಿ ಎಷ್ಟು ಚೈತನ್ಯವಿರಬಹುದು.

೨ ಆ. ಪರಾತ್ಪರ ಗುರು ಡಾ. ಆಠವಲೆಯವರು ಅನಾರೋಗ್ಯದಲ್ಲಿದ್ದಾಗಿನ ಹಸ್ತಾಕ್ಷರಗಳಿಂದ ಕೂಡ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು :

ಪರಾತ್ಪರ ಗುರು ಡಾಕ್ಟರರ ಪ್ರಾಣಶಕ್ತಿ ಬಹಳ ಕಡಿಮೆಯಿದ್ದಾಗ, ಅವರಿಗೆ ಕುಳಿತು ಸೇವೆ ಮಾಡಲು ಆಗದಿದ್ದಾಗ ಅವರು ಮಂಚದಲ್ಲಿ ಮಲಗಿ ಸೇವೆ ಮಾಡುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರಿಗೆ ಸ್ಥೂಲದೇಹದಿಂದ ಅನಾರೋಗ್ಯವಿದ್ದರೂ, ಅವರು ಸತತ ಆನಂದಾವಸ್ಥೆಯಲ್ಲಿ ಇರುವುದರಿಂದ (ಸಂತರ ಮನೋಲಯವಾಗಿರುವುದರಿಂದ, ಅಲ್ಲದೇ ಅವರ ದೇಹಬುದ್ಧಿ ಅತ್ಯಲ್ಪ ಅಥವಾ ಇಲ್ಲದ್ದರಿಂದ ಅವರು ಸತತ ಆನಂದಾವಸ್ಥೆಯಲ್ಲಿರುತ್ತಾರೆ – ಸಂಕಲನಕಾರರು) ಮತ್ತು ಅವರಿಂದ ಈಶ್ವರನ ಕಾರ್ಯಕ್ಕಾಗಿ ಬಹಳಷ್ಟು ಪ್ರಮಾಣದಲ್ಲಿ ವಿಷ್ಣುತತ್ತ್ವ (ಚೈತನ್ಯ) ಪ್ರಕ್ಷೇಪಿಸುವುದರಿಂದ ಅವರಿಗೆ ಅನಾರೋಗ್ಯವಿದ್ದರೂ ಹಸ್ತಾಕ್ಷರಗಳಲ್ಲಿಯೂ ಬಹಳ ಚೈತನ್ಯವಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೧.೬.೨೦೨೧)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.