೧. ಸ್ವಾರ್ಥಕ್ಕಾಗಿ ನಾಗಗಳಂತಹ ದೈವೀ ಯೋನಿಯನ್ನು ಬಳಸಿ ಹಣವನ್ನು ಸಂಪಾದಿಸುವುದು, ಅಂದರೆ ಆ ಪ್ರಜಾತಿಯ ಮೇಲೆ ದೌರ್ಜನ್ಯ ಮಾಡಿದಂತಾಗುವುದು
‘ಕೆಲವು ಸ್ಥಳಗಳಲ್ಲಿ, ಅರಣ್ಯಗಳಲ್ಲಿ ಅಥವಾ ಕೆಲವು ಹಳ್ಳಿಗಳಲ್ಲಿ ಹುತ್ತಗಳಲ್ಲಿರುವ ನಾಗಗಳನ್ನು ಹೊರಗೆ ತೆಗೆದು ರಸ್ತೆಗಳಲ್ಲಿ ಅವುಗಳಿಂದ ಆಟವಾಡಿಸಿ ತೋರಿಸಲಾಗುತ್ತದೆ. ಅನೇಕ ಗಾರುಡಿಗರು ನಾಗಗಳನ್ನು ಆಟವಾಡಿಸಿ ಹಣವನ್ನು ಸಂಪಾದಿಸುವುದು ಕಂಡು ಬರುತ್ತದೆ. ಇದಕ್ಕಾಗಿ ನಾಗಗಳ ಹಲ್ಲುಗಳನ್ನು ಸಹ ಕೀಳಲಾಗುತ್ತದೆ. ನಾಗಗಳು ಯಾರನ್ನೂ ಕಚ್ಚಬಾರದೆಂಬುದು ಅದರ ಹಿಂದಿನ ಉದ್ದೇಶವಾಗಿರುತ್ತದೆ. ಮನುಷ್ಯನು ತನ್ನ ಸ್ಥಾರ್ಥಕ್ಕಾಗಿ ನಾಗಗಳಂತಹ ದೈವೀ ಯೋನಿಯನ್ನು ಬಳಸಿ ಒಂದು ರೀತಿಯಲ್ಲಿ ಈ ಪ್ರಜಾತಿಯ ಮೇಲೆ ದೌರ್ಜನ್ಯವನ್ನೆಸಗಲು ಪ್ರಯತ್ನಿಸುತ್ತಿದ್ದಾನೆ.
೨. ನಾಗಗಳ ರೂಪದಲ್ಲಿ ಅನೇಕ ದಿವ್ಯ ಜೀವಗಳು ಸಾಧನೆಯನ್ನು ಮಾಡುತ್ತಿರುವುದರಿಂದ ಅವುಗಳಿಗೆ ತೊಂದರೆ ಕೊಡುವುದರಿಂದ ಮನುಷ್ಯನ ಪಾಪವು ಹೆಚ್ಚಾಗುತ್ತಿರುವುದು
ಅನೇಕ ಬಾರಿ ನಾಗಗಳ ರೂಪದಲ್ಲಿ ಅನೇಕ ದಿವ್ಯ ಜೀವಗಳು ಸಾಧನೆಯನ್ನು ಮಾಡುತ್ತಿರುತ್ತವೆ. ನಾಗಗಳಿಗೆ ತೊಂದರೆ ಕೊಡುವುದು ಎಂದರೆ ಒಂದು ರೀತಿಯಲ್ಲಿ ಅವರ ಸಾಧನೆಯಲ್ಲಿ ಅಡಚಣೆ ತಂದಂತಾಗುತ್ತದೆ. ಹಿಂದಿನ ಜನ್ಮದಲ್ಲಿ ಬಾಕಿ ಉಳಿದ ಸಾಧನೆಯನ್ನು ಪೂರ್ಣಗೊಳಿಸಲು, ಅವರು ನಾಗಯೋನಿಯಲ್ಲಿ ಜನ್ಮ ಪಡೆದಿರುತ್ತಾರೆ. ಈ ನಾಗಗಳಿಗೆ ತೊಂದರೆ ನೀಡುವ ರೀತಿಯಲ್ಲಿ ಅವುಗಳನ್ನು ಬಳಸಿ ಅವುಗಳ ಪೂಜೆ-ಅರ್ಚನೆ ಮಾಡುವುದರಿಂದ ಅವರು ಮಾಡುವ ತಪಸ್ಸಿನಲ್ಲಿ ಅಡಚಣೆ ಬರುತ್ತದೆ. ಆದುದರಿಂದ ಮನುಷ್ಯನ ಪುಣ್ಯಸಂಚಯವಾಗುವ ಬದಲು ಪಾಪವು ಹೆಚ್ಚಾಗುತ್ತದೆ.
೩. ಹಿಂದಿನ ಕಾಲದಲ್ಲಿ ‘ನಾಗ’ ಎಂದರೆ ಜನರ ಶ್ರದ್ಧಾಸ್ಥಾನವಾಗಿರುವುದರಿಂದ ನಾಗಗಳು ತಾವಾಗಿಯೇ ಹುತ್ತಗಳ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡುವುದು
ಹಿಂದಿನ ಕಾಲದಲ್ಲಿ ಜನರು ಸಾತ್ತ್ವಿಕ ಮತ್ತು ಸಾಧನೆಯನ್ನು ಮಾಡುವವರಾಗಿದ್ದರು. ಈಶ್ವರನ ಕುರಿತು ಅವರಲ್ಲಿ ಭಾವವಿತ್ತು. ಅವರಲ್ಲಿನ ಭಾವ ಮತ್ತು ಅವರ ಸಾಧನೆ ಇವುಗಳಿಂದ ಹುತ್ತಗಳಲ್ಲಿ ತಪಸ್ಸು ಮಾಡುತ್ತಿರುವ ದಿವ್ಯ ನಾಗಗಳು ತಾವಾಗಿಯೇ ಹುತ್ತಗಳಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡುತ್ತಿದ್ದವು. ಅವುಗಳ ಪೂಜೆಯಾದ ನಂತರ ಆ ನಾಗಗಳು ತಾವಾಗಿಯೇ ಹುತ್ತಗಳಲ್ಲಿ ಹೋಗಿ ಪುನಃ ತಮ್ಮ ಸಾಧನೆಯನ್ನು ಮಾಡುತ್ತಿದ್ದವು. ಹಿಂದಿನ ಜನರು ನಾಗಪಂಚಮಿಯ ದಿನದಂದು ಯಾವಾಗಲೂ ನಾಗಗಳನ್ನು ಸ್ಪರ್ಶಿಸಿ ಅಥವಾ ಅವುಗಳನ್ನು ಹಿಡಿದು ತೊಂದರೆ ನೀಡುತ್ತಿರಲಿಲ್ಲ. ಇಂದಿನಂತೆ ಅವರಿಗೆ ನಾಗಗಳೆಂದರೆ ಮನೋರಂಜನೆಯ ಸಾಧನವಾಗಿರದೇ, ಅವು ಅವರ ಶ್ರದ್ಧಾಸ್ಥಾನವಾಗಿದ್ದವು.
೪. ಸನಾತನ ಹಿಂದೂ ಧರ್ಮವು ಎಲ್ಲ ಪ್ರಾಣಿಮಾತ್ರರಲ್ಲಿ ಈಶ್ವರನನ್ನು ನೋಡಲು ಕಲಿಸಿದುದರಿಂದ ಭಾವವಿಟ್ಟು ನಾಗದೇವತೆಯ ಮನಃಪೂರ್ವಕ ಪೂಜೆಯನ್ನು ಮಾಡಿದರೆ ಅವರ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗುವುದು
ಸನಾತನ ಹಿಂದೂ ಧರ್ಮವು ಮನುಷ್ಯನಿಗೆ ಎಲ್ಲ ಪ್ರಾಣಿಮಾತ್ರರಲ್ಲಿಯೂ ಈಶ್ವರನನ್ನು ನೋಡಲು ಕಲಿಸುತ್ತದೆ. ಆದುದರಿಂದ ಈ ನಾಗಗಳ ಕಾಳಜಿ ತೆಗೆದುಕೊಳ್ಳುವುದು, ಅವುಗಳ ಸಾಧನೆಯಲ್ಲಿ ವ್ಯತ್ಯಯ ಬಾರದಂತೆ ನೋಡಿಕೊಳ್ಳುವುದು ಮತ್ತು ಅವುಗಳ ರಕ್ಷಣೆ ಮಾಡುವುದು, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದಿನ ಜನರಂತೆ ನಮ್ಮ ಸಾಧನೆ ಇರದಿದ್ದರೂ ನಾವು ಅವರಂತೆ ಭಾವವಿಟ್ಟು ಮನಃಪೂರ್ವಕ ನಾಗದೇವತೆಯ ಪೂಜೆಯನ್ನು ಮಾಡಬೇಕು. ಇದರಿಂದ ನಾಗದೇವತೆಯ ನಿಜವಾದ ಕೃಪೆಯನ್ನು ಸಂಪಾದಿಸಲು ಸಾಧ್ಯವಾಗುತ್ತದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ತಿರುವಣ್ಣಾಮಲೈ, ತಮಿಳುನಾಡು. (೨೦.೪.೨೦೨೦)