ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರೋತ್ಸವವನ್ನು ಹೇಗೆ ಆಚರಿಸಬೇಕು ?

ಕರ್ಮಕಾಂಡದ ಸಾಧನೆಗನುಸಾರ ಆಪತ್ಕಾಲದಲ್ಲಿ ಯಾವುದಾದರೊಂದು ವರ್ಷಕುಲಾಚಾರದಂತೆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅಥವಾ ಕರ್ಮದಲ್ಲಿ ಏನಾದರೂ ನ್ಯೂನ್ಯತೆಗಳು ಉಳಿದಿದ್ದರೆ, ಮುಂದಿನ ವರ್ಷ ಅಥವಾ ಮುಂದಿನ ಕಾಲದಲ್ಲಿ ಯಾವಾಗ ಸಾಧ್ಯವಿರುತ್ತದೆಯೋ, ಆಗ ಆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಅಧಿಕ ಉತ್ಸಾಹದಿಂದ ಆಚರಿಸಬೇಕು.

ನವರಾತ್ರೋತ್ಸವ ಆರಂಭ ಆಶ್ವಯುಜ ಶುಕ್ಲ ಪಕ್ಷ ಪ್ರತಿಪದೆ (೧೭.೧೦.೨೦೨೦)

ಪಾತಾಳದಲ್ಲಿ ವಾಸಿಸುವ ಅಸುರಿ ಶಕ್ತಿಯ ಬಲ ಹೆಚ್ಚಾಗಿದ್ದರಿಂದ ಅವುಗಳು ಬ್ರಹ್ಮಾಂಡದಲ್ಲಿರುವ ಪೃಥ್ವಿ, ಸ್ವರ್ಗ ಮತ್ತು ಉಚ್ಚ ಲೋಕಗಳ ಮೇಲೆ ದಂಡೆತ್ತಿ ಹೋಗಿ ಅಲ್ಲಿ ವಾಸಿಸುತ್ತಿದ್ದ ಸಾತ್ತ್ವಿಕ ಜೀವಗಳ ಸಾಧನೆಯಲ್ಲಿ ವಿಘ್ನ ತರಲು ಪ್ರಯತ್ನಿಸಿದವು. ನವರಾತ್ರಿಯ ಅವಧಿಯಲ್ಲಿ ದೇವಿಯ ಸಕಾರಾತ್ಮಕ ಊರ್ಜೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.

ನವದುರ್ಗಾ

ಮಾರ್ಕಂಡೇಯ ಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ. ಭಗವಾನ ಹಿರಣ್ಯಗರ್ಭಮನಿಗಳು ಮಂತ್ರಯೋಗ ಸಮೀಕ್ಷೆಯಲ್ಲಿ ಹೇಳಿರುವ ಶ್ರೀ ದುರ್ಗಾಸಪ್ತಶತಿಯಲ್ಲಿನ ದೇವಿಯ ಹೆಸರುಗಳ ಶಾಸ್ತ್ರೀಯ ಅರ್ಥ ಮತ್ತು ಇಂದಿನ ಭೌತಿಕ ವಿಜ್ಞಾನವು ಮಾಡಿರುವ ಪ್ರಗತಿಯ ಬಗ್ಗೆ ಇಲ್ಲಿ ನಾವು ವಿಚಾರ ಮಾಡೋಣ.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.

ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು 

ವಿವಾಹದಂತಹ ಯಾವುದಾದರೊಂದು ವಿಧಿಯ ನಂತರ ಈ ಕುಲದೇವತೆ ಇರುವವರ ಮನೆಯಲ್ಲಿ ದೇವಿಯ ಗೊಂದಲವನ್ನು (ಒಂದು ಕುಲಾಚಾರ) ಹಾಕುತ್ತಾರೆ. ಕೆಲವರ ಮನೆಯಲ್ಲಿ ವಿವಾಹದಂತಹ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದ್ದರಿಂದ ಸತ್ಯನಾರಾಯಣನ ಪೂಜೆಯನ್ನು ಮಾಡುತ್ತಾರೆ ಅಥವಾ ಕೋಕಣಸ್ಥ ಬ್ರಾಹ್ಮಣರಲ್ಲಿ ದೇವಿಗೆ ಹಾಲು-ಮೊಸರನ್ನು ಅರ್ಪಿಸುತ್ತಾರೆ, ಇದು ಸಹ ಹಾಗೇ ಆಗಿದೆ.

ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಚ್ಚಿನ ಜನರು ಉಪವಾಸವನ್ನು ಮಾಡುತ್ತಾರೆ. ಒಂಬತ್ತು ದಿನಗಳು ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರಥಮ ದಿನ ಹಾಗೂ ಅಷ್ಟಮಿಯಂದು ಉಪವಾಸವನ್ನು ಅವಶ್ಯವಾಗಿ ಮಾಡುತ್ತಾರೆ. ದೇವಿ ಉಪಾಸನೆಯ ಇತರ ಭಾಗಗಳೊಂದಿಗೆ ನವರಾತ್ರಿಯ ಕಾಲಾವಧಿಯಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂದು ಜಪಿಸಬೇಕು.

ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ.

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಈ ಅಗ್ನಿ ನೈಸರ್ಗಿಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿಸಲ್ಪಡುವ ಸೂಕ್ಷ್ಮ ತೇಜದಾಯಕ ಲಹರಿಗಳು ಸೂಕ್ಷ್ಮ ಸ್ತರದಲ್ಲಿರುವ ರಜ-ತಮಾತ್ಮಕ ಕಣಗಳನ್ನು ವಿಘಟಿತಗೊಳಿಸಬಲ್ಲವು. ಒಲೆಯ ಮೇಲಿನ ಅಡುಗೆಯನ್ನು ತಯಾರಿಸುವಾಗ ಆಹಾರದ ಮೇಲೆ ಅಗ್ನಿಯ ಸಂಸ್ಕಾರವಾಗಿ ಸಾತ್ತ್ವಿಕ ಆಹಾರ ತಯಾರಾಗುತ್ತದೆ. ಇದರದೇ ಅನುಭವವು ಪರೀಕ್ಷಣೆಯಲ್ಲಿ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಕಂಡು ಬಂದಿತು. ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪವೂ ನಕಾರಾತ್ಮಕ ಸ್ಪಂದನಗಳು ಇರಲಿಲ್ಲ ಹಾಗೂ ಬಹಳ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು.

ಪ್ರಾಣಿಗಳ ಬಗ್ಗೆ ನಾವಿನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡುವ ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ

ಕೆಲವು ಸಾಧಕ ಜೀವಗಳು ಮಾನವೇತರ ಯೋನಿಗಳಲ್ಲಿ (ಪಶು-ಪಕ್ಷಿ ಮತ್ತು ವನಸ್ಪತಿ) ಜನ್ಮ ಪಡೆದು ಅವುಗಳ ಪ್ರಾರಬ್ಧದ ಭೋಗವನ್ನು ಅನುಭವಿಸಿ ಮುಗಿಸುತ್ತವೆ. ಅವು ಸಾತ್ತ್ವಿಕ ಸ್ಥಳದಲ್ಲಿ ಮತ್ತು ಸಾತ್ತ್ವಿಕ ವ್ಯಕ್ತಿಗಳ ಕಡೆಗೆ ಸಹಜವಾಗಿ ಆಕರ್ಷಿಸಲ್ಪಡುತ್ತವೆ ಮತ್ತು ಅವರ ಸಹವಾಸದಲ್ಲಿರುತ್ತವೆ. ಸನಾತನದ ಆಶ್ರಮದಲ್ಲಿರುವ ಸಾತ್ತ್ವಿಕತೆಯಿಂದ ಕೆಲವು ಪ್ರಾಣಿ ಮತ್ತು ಪಕ್ಷಿ, ಉದಾ. ಪಾತರಗಿತ್ತಿ, ಜಿಗಣೆ ಇತ್ಯಾದಿ ಆಶ್ರಮದಲ್ಲಿ ತಾವಾಗಿಯೇ ಬರುತ್ತವೆ.