ಶರದೀಯ ಋತುಚರ್ಯೆ – ಶರದ ಋತುವಿನಲ್ಲಿ ಆರೋಗ್ಯವಂತರಾಗಿರಲು ಆಯುರ್ವೇದೀಯ ಉಪಾಯಗಳು !
ಮಳೆಗಾಲದಲ್ಲಿ ಜೀರ್ಣಶಕ್ತಿ ಮಂದವಾಗಿರುತ್ತದೆ. ಶರದಋತುವಿನಲ್ಲಿ ಅದು ಕ್ರಮೇಣ ಹೆಚ್ಚಾಗುತ್ತದೆ. ಆದುದರಿಂದ ಹಸಿವಾದ ಮೇಲೆಯೇ ಊಟ ಮಾಡಬೇಕು. ಹಸಿವಿಲ್ಲದಾಗ ಊಟ ಮಾಡಿದರೆ, ಜೀರ್ಣ ಶಕ್ತಿ ಹಾಳಾಗುತ್ತದೆ ಹಾಗೂ ಪಿತ್ತದ ತೊಂದರೆಯಾಗುತ್ತದೆ.