ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಹೀಗಿರುವಾಗ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎನ್ನುವ ಪ್ರಶ್ನೆ ಬರುತ್ತದೆ. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು? ಎನ್ನುವ ವಿಷಯದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಓದುಗರು ಈ ಲೇಖನದಲ್ಲಿ ನೀಡಿರುವ ವನಸ್ಪತಿಗಳನ್ನು ಹೊರತುಪಡಿಸಿ, ಇನ್ನಿತರೆ ವನಸ್ಪತಿಗಳನ್ನು ಕೂಡ ಮನೆಯಲ್ಲಿ ಬೆಳೆಸಬಹುದು. ಇಲ್ಲಿಯವರೆಗಿನ ಲೇಖನಗಳಲ್ಲಿ ನಾವು ತುಳಸಿ, ಅಡುಸೋಗೆ, ಮಾಕಾ, ಪುನರ್ನವ, ಬ್ರಾಹ್ಮಿ, ಶತಾವರಿ, ಅರಿಶಿಣ, ಕಹಿಬೇವು ಮತ್ತು ಪಾರಿಜಾತ ಇತ್ಯಾದಿ ಔಷಧಿ ವನಸ್ಪತಿಗಳ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಇಂದು ಅದರ ಮುಂದಿನ ಭಾಗವನ್ನು ನೋಡೋಣ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:  https://sanatanprabhat.org/kannada/47807.html

ಮಾರ್ಗದರ್ಶಕರು : ಡಾ. ದಿಗಂಬರ ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ವಿದ್ಯಾಪೀಠ ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ  ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

ಸಂಕಲನಕಾರರು   :   ಶ್ರೀ. ಮಾಧವ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೨೩. ಲಾವಂಚ (ಬಾಳದ ಬೇರು)

೧ ಲಾವಂಚದ ಪೊದೆ ಮತ್ತು ೨ ಲಾವಂಚದ ಬೇರು

೨೩ ಅ. ಮಹತ್ವ : ಇದರ ಬೇರುಗಳಿಗೆ ಬಹಳ ಸುಗಂಧ ಬರುತ್ತದೆ ಮತ್ತು ಅವು ಬಹಳ ತಂಪಾಗಿರುತ್ತವೆ. ಬೇಸಿಗೆಯ ದಿನಗಳಲ್ಲಿ ಇದು ವಿಶೇಷವಾಗಿ ಉಪಯೋಗವಾಗುತ್ತದೆ. ಲಾವಂಚದ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮಣ್ಣು ನೀರಿನೊಂದಿಗೆ ಹರಿದು ಹೋಗುವುದಿಲ್ಲ. ಲಾವಂಚದ ಬೇರುಗಳನ್ನು ಬೇಸಿಗೆಯಲ್ಲಿ ಒಣಗಿಸಿದ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬಟ್ಟೆಗಳನ್ನಿಡುವ ಕಪಾಟಿನಲ್ಲಿ ಇಟ್ಟರೆ ೫-೬ ವರ್ಷಗಳ ವರೆಗೆ ಬಾಳಿಕೆ ಬರುತ್ತವೆ. ಇದರಿಂದ ಬಟ್ಟೆಗಳಿಗೂ ಸುಗಂಧ ಬರುತ್ತದೆ ಮತ್ತು ಆವಶ್ಯಕವಿದ್ದಾಗ ನಾವು ಅವುಗಳನ್ನು ಉಪಯೋಗಿಸಬಹುದು.

೨೩ ಆ. ಬೆಳೆಸುವುದು : ಲಾವಂಚದ ಸಸಿಗಳು ನರ್ಸರಿಗಳಲ್ಲಿ ಮಾರಾಟಕ್ಕೆ ಸಿಗುತ್ತವೆ. ಚಹಾದ ಹುಲ್ಲಿನಂತೆಯೇ (ನಿಂಬೆ ಹುಲ್ಲು) ಲಾವಂಚದ ಪೊದೆಗಳು ಬೆಳೆಯುತ್ತವೆ. ಯಾರ ಬಳಿಯಾದರೂ ಲಾವಂಚದ ಪೊದೆಗಳಿದ್ದರೆ, ಚಹಾ ಹುಲ್ಲಿನ ಬೇರನ್ನು ತೆಗೆದು ಬೆಳೆಸುವಂತೆಯೇ, ಲಾವಂಚದ ಬೇರುಗಳನ್ನು ತೆಗೆದು ಬೆಳೆಸಬಹುದು. ಲಾವಂಚವನ್ನು ಭೂಮಿಯಲ್ಲಿ ಬೆಳೆಸಿದರೆ ಅದರ ಬೇರುಗಳನ್ನು ಅಗೆದು ತೆಗೆಯುವಾಗ ಅವು ತುಂಡಾಗಿ ವ್ಯರ್ಥವಾಗುತ್ತವೆ. ಹಾಗಾಗಬಾರದೆಂದು ಲಾವಂಚವನ್ನು ಪ್ಲಾಸ್ಟಿಕಿನ ಗೋಣಿಚೀಲಗಳಲ್ಲಿ ಬೆಳೆಸಬೇಕು. ಇದಕ್ಕಾಗಿ ೨೫ ಕಿಲೋ. ಧಾನ್ಯದ ಖಾಲಿ ಗೋಣಿಚೀಲಗಳನ್ನು ಉಪಯೋಗಿಸಬೇಕು. ಬುಡದಲ್ಲಿ ಕೊಳೆತ ಸೆಗಣಿ ಗೊಬ್ಬರವನ್ನು ಹಾಕಬೇಕು ಮತ್ತು ಮರಳುಮಿಶ್ರಿತ ಮಣ್ಣನ್ನು ಗೋಣಿಚೀಲದಲ್ಲಿ ತುಂಬಿ ಮೇಲೆ ಲಾವಂಚದ ಬೇರುಗಳನ್ನು ನೆಡಬೇಕು. ಕೆಳಗೆ ಸೆಗಣಿ ಗೊಬ್ಬರವಿರುವುದರಿಂದ ಅದನ್ನು (ಪೋಷಕಾಂಶಗಳನ್ನು) ಪಡೆಯಲು ಲಾವಂಚದ ಬೇರುಗಳು ಉದ್ದ ಬೆಳೆಯುತ್ತವೆ ಮತ್ತು ಸಾಧಾರಣ ಒಂದು-ಒಂದೂವರೆ ವರ್ಷದಲ್ಲಿ ಚೀಲದ ತುಂಬಾ ಲಾವಂಚದ ಬೇರುಗಳು ಸಿಗುತ್ತವೆ. ಲಾವಂಚದ ಬೇರುಗಳನ್ನು ತೆಗೆಯುವಾಗ ಅವುಗಳನ್ನು ಮಣ್ಣಿನೊಂದಿಗೆ ನೀರಿನಲ್ಲಿ ಕೆಲವು ಕಾಲ ನೆನೆಸಿಡಬೇಕು ಮತ್ತು ನಂತರ ನೀರಿನಲ್ಲಿ ಅಲುಗಾಡಿಸಿ ಅದರ ಮಣ್ಣನ್ನು ತೆಗೆಯಬೇಕು. ಇದರಿಂದ ಸ್ವಚ್ಛ ಬೇರುಗಳು ಸಿಗುತ್ತವೆ.

೨೪. ಚೆಂಡು ಹೂವು

ಮನೆಯ ಸುತ್ತಲೂ ಚೆಂಡು ಹೂವಿನ ಗಿಡಗಳಿದ್ದರೆ ಸೊಳ್ಳೆಗಳ ಸಮಸ್ಯೆ ಕಡಿಮೆಯಾಗುತ್ತದೆ. ಗಾಯ ಮಾಸಲು ಚೆಂಡು ಹೂವಿನರಸ ಉಪಯೋಗವಾಗುತ್ತದೆ. ಹೂವಿನ ದಳಗಳನ್ನು ಒಣಗಿಸಿ ಬೀಜಗಳೆಂದು ಉಪಯೋಗಿಸಬಹುದು.

(ಮುಂದುವರಿಯುವುದು)

ಕೃಷಿಗಾಗಿ ಔಷಧಿ ಸಸ್ಯಗಳ ಬೀಜ, ಸಸಿ ಇತ್ಯಾದಿಗಳು ಎಲ್ಲಿ ದೊರೆಯುತ್ತವೆ ?

೧. ಔಷಧಿ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಸಿಗಳು ದೊರೆಯುವ ಸ್ಥಳಗಳು

. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ, ಬೆಂಗಳೂರು. ದೂ. (080) 28568000

ಆ. ಕರ್ನಾಟಕ ರಾಜ್ಯ ಗಿಡಮೂಲಿಕೆ ಔಷಧಿ ಪ್ರಾಧಿಕಾರ, ಬೆಂಗಳೂರು. ದೂ. (080) 23464089.

ವಿಳಾಸ : ನಂ. 401, 4ನೇ ಮಹಡಿ, ವನ ವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 03.

ಇ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ. ದೂ. (080) 23086100

೨. ಇತರ ರಾಜ್ಯಗಳಲ್ಲಿನ ಮಹತ್ವದ ಸರಕಾರಿ ಸಂಸ್ಥೆಗಳು

ಅ. ಸಿಎಸ್‍ಐಆರ್ – ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಆಂಡ್  ಅರೋಮ್ಯಾಟಿಕ್ ಪ್ಲ್ಯಾಂಟ್ಸ್ (ಸೀಮ್ಯಾಪ್), ಲಖ್ನೌ, ಉತ್ತರಪ್ರದೇಶ (0522-2718629)

ಆ. ಡೈರೆಕ್ಟೊರೇಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ ರಿಸರ್ಚ್, ಬೋರಿಯಾವಿ, ಗುಜರಾತ. (02692 – 271602)

. ಜವಾಹರಲಾಲ ನೆಹರು ಕೃಷಿ ವಿಶ್ವವಿದ್ಯಾಲಯ, ಜಬಲಪುರ, ಮಧ್ಯಪ್ರದೇಶ (0761-2681706)