ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !
ಆಪತ್ಕಾಲದಲ್ಲಿ ಆಧುನಿಕ ವೈದ್ಯರು (ಡಾಕ್ಟರ್), ಆಸ್ಪತ್ರೆ, ಔಷಧಿಗಳು ಸಿಗದಿದ್ದಾಗ, ಅಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಅವರಿಗಾಗುವ ವಿವಿಧ ತೊಂದರೆಗಳಿಗೆ ಹೋಮಿಯೋಪತಿಯ ಸ್ವಯಂ ಚಿಕಿತ್ಸೆ (ಯಾರಿಗೂ ತಮ್ಮ ಮೇಲೆಯೇ ಮಾಡಿಕೊಳ್ಳಲು ಸಾಧ್ಯವಾಗುವ ಚಿಕಿತ್ಸೆ) ಮಾಡಿಕೊಳ್ಳಬಹುದು, ಈ ಕಾರಣಕ್ಕಾಗಿ ಸನಾತನವು ತುರ್ತಾಗಿ ಈ ವಿಷಯದ ಮಾಹಿತಿ ನೀಡುವ ಗ್ರಂಥಗಳನ್ನು ರಚಿಸುತ್ತಿದೆ.
ಯಾವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ಹೋಮಿಯೋಪತಿಯ ಸ್ವಯಂಚಿಕಿತ್ಸೆ’ ಈ ವಿಷಯವಾಗಿ ಮಾಹಿತಿ ಇದ್ದರೆ ಅವರು ಈ ಮಾಹಿತಿ ಬರೆದು ಅಥವಾ ಬೆರಳಚ್ಚು ಮಾಡಿ ಆದಷ್ಟು ಬೇಗನೆ ಸೌ. ಭಾಗ್ಯಶ್ರೀ ಸಾಮಂತ ಇವರ ಹೆಸರಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು. ಈ ವಿಷಯದ ಬಗ್ಗೆ ಮಾಹಿತಿ ನೀಡುವ ಗ್ರಂಥ ಅಥವಾ ಲೇಖನ ಲಭ್ಯವಿದ್ದರೆ ಅದನ್ನು ಸಹ ಕಳುಹಿಸಬಹುದು. ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಇವರ ಪರಿಚಿತರು ಅಥವಾ ಸಂಬಂಧಿಕರು ಇವರಿಗೆ ಈ ಸಂದರ್ಭದಲ್ಲಿ ಏನಾದರೂ ಮಾಹಿತಿ ಇದ್ದರೆ ಅದನ್ನು ಸಹ ಕಳಿಸಬೇಕು.
ವಿ-ಅಂಚೆ ವಿಳಾಸ : [email protected]
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/ಬಿ, ರಾಮನಾಥಿ, ಬಾಂದಿವಡೆ , ಫೊಂಡಾ, ಗೋವಾ. ಪಿನ್ – ೪೦೩೪೦೧
– ಹೋಮಿಯೋಪತಿ ವೈದ್ಯ ಅಂಜೇಶ ಕಣಗಲೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೪.೧೧.೨೦೨೧)