ಮಳೆಗಾಲದಲ್ಲಿನ ಜ್ವರ ಹಾಗೂ ಕೊರೊನಾ ಸೋಂಕಿನ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ
ಏನನ್ನು ತಿನ್ನದೇ ಉಪವಾಸ ಮಾಡಿದರೆ ಅಗ್ನಿಯ ಮೇಲೆ ಹೆಚ್ಚಿನ ಭಾರ ಬೀಳುವುದಿಲ್ಲ. ಉಪವಾಸಕ್ಕೆ ಆಯುರ್ವೇದದಲ್ಲಿ ‘ಲಂಘನ’ ಎಂದು ಕರೆಯುತ್ತಾರೆ. ಲಂಘನ ಮಾಡಿದರೆ ಶರೀರದಲ್ಲಿ ಯಾವಾಗಲೂ ಇರುವ ಪಚನಕ್ರಿಯೆಯಿಂದ ಸ್ವಲ್ಪ ವಿಶ್ರಾಂತಿ ದೊರಕಿ ಜ್ವರದಿಂದ ಚೇತರಿಸಿಕೊಳ್ಳಲು ಸಮಯ ಸಿಗುತ್ತದೆ.