ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಔಷಧಿ ವನಸ್ಪತಿಗಳು ಬಹಳಷ್ಟಿವೆ, ಹೀಗಿರುವಾಗ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎನ್ನುವ ಪ್ರಶ್ನೆ ಬರುತ್ತದೆ. ಪ್ರಸ್ತುತ ಲೇಖನದಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು ? ಎನ್ನುವ ವಿಷಯದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಓದುಗರು ಈ ಲೇಖನದಲ್ಲಿ ನೀಡಿರುವ ವನಸ್ಪತಿಗಳನ್ನು ಹೊರತುಪಡಿಸಿ, ಇನ್ನಿತರೆ ವನಸ್ಪತಿಗಳನ್ನು ಕೂಡ ಮನೆಯಲ್ಲಿ ಬೆಳೆಸಬಹುದು. ಇಲ್ಲಿಯವರೆಗಿನ ಲೇಖನಗಳಲ್ಲಿ ನಾವು ತುಳಸಿ, ಅಡುಸೋಗೆ, ಮಾಕಾ, ಪುನರ್ನವ, ಬ್ರಾಹ್ಮಿ, ಶತಾವರಿ, ಅರಿಶಿಣ, ಕಹಿಬೇವು ಮತ್ತು ಪಾರಿಜಾತ ಇತ್ಯಾದಿ ಔಷಧಿ ವನಸ್ಪತಿಗಳ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಇಂದು ಅದರ ಮುಂದಿನ ಭಾಗವನ್ನು ನೋಡೋಣ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/48290.html

ಮಾರ್ಗದರ್ಶಕರು : ಡಾ. ದಿಗಂಬರ ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ವಿದ್ಯಾಪೀಠ ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ  ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

ಸಂಕಲನಕಾರರು   :   ಶ್ರೀ. ಮಾಧವ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

೨೫. ಅಶ್ವಗಂಧ

ಅಶ್ವಗಂಧ

೨೫. ಆ ಮಹತ್ವ : ಇದು ಬದನೆಕಾಯಿ ಜಾತಿಯ ವನಸ್ಪತಿಯಾಗಿದೆ. ಇದರ ಬೇರುಗಳು ಶಕ್ತಿವರ್ಧಕವಾಗಿವೆ. ಇದು ಹೆಚ್ಚು ಬಳಕೆಯಲ್ಲಿರುವ  ಔಷಧಿಯಾಗಿದೆ.

೨೫ ಆ. ಕೃಷಿ : ಇದು ೬ ತಿಂಗಳ ಬೆಳೆಯಾಗಿದೆ. ಮಳೆಗಾಲದ ನಂತರ ಭತ್ತದ ಕೊಯ್ಲಿನ ನಂತರ ಭತ್ತದ ಹೊಲದಲ್ಲಿ ಅಶ್ವಗಂಧದ ಬೆಳೆಯನ್ನು ತೆಗೆದುಕೊಳ್ಳಬಹುದು. ಇದು ಇಬ್ಬನಿಯ ಸಹಾಯದಿಂದ ಬೆಳೆಯುತ್ತದೆ. ಆದುದರಿಂದ ಇದಕ್ಕೆ ಪ್ರತ್ಯೇಕವಾಗಿ ನೀರಿನ ಆವಶ್ಯಕತೆ ಇರುವುದಿಲ್ಲ. ಇದರ ಕೃಷಿಯನ್ನು ಬೀಜಗಳಿಂದ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ವ್ಯಾವಸಾಯಿಕ ಸ್ತರದಲ್ಲಿ ಕೃಷಿಯನ್ನು ಮಾಡುವುದಿದ್ದರೆ ‘ನಾಗೋರಿ’ ಜಾತಿಯ ಅಶ್ವಗಂಧದ ಬೀಜಗಳನ್ನು ಉಪಯೋಗಿಸಬೇಕು. ಈ ಜಾತಿಯ ಗಿಡಗಳ ಬೇರುಗಳು ಹೆಬ್ಬೆರಳಿನಷ್ಟು ದಪ್ಪಗಿರುತ್ತವೆ. ಇದನ್ನು ಮನೆಯಲ್ಲಿ ಬೆಳೆಸುವುದಿದ್ದರೆ ಕನಿಷ್ಠ ೩ ರಿಂದ ೪ ಸಸಿಗಳನ್ನು ನೆಡಬೇಕು. ಮನೆಯ ಸುತ್ತಲೂ ಜಾಗವಿದ್ದರೆ ೫೦ ರಿಂದ ೧೦೦ ಸಸಿಗಳನ್ನು ನೆಟ್ಟರೂ ಸಹ ಅವುಗಳ ಉಪಯುಕ್ತವೇ. ಹಣ್ಣುಗಳು ಬಿಟ್ಟಾಗ ಅವು ಬಣ್ಣ ಕೆಂಪಾಗುತ್ತದೆ ಮತ್ತು ಎಲೆಗಳು ಉದುರತೊಡಗುತ್ತವೆ. ಆಗ ಬೇರುಗಳನ್ನು ಅಗೆದು ತೆಗೆಯಬೇಕು. ಬೇರುಗಳನ್ನು ತೊಳೆದು ಒಣಗಿಸಿ ಅವುಗಳ ಪುಡಿ ಮಾಡಿಡಬೇಕು. ಹಣ್ಣುಗಳಲ್ಲಿ ಸಿಗುವ ಬೀಜಗಳಿಂದ ಈ ವನಸ್ಪತಿಯ ಕೃಷಿಯನ್ನು ಪುನಃ ಮಾಡಬಹುದು. ವನಸ್ಪತಿಯ ಮೇಲಿನ ಭಾಗವನ್ನು ದನಕರುಗಳಿಗೆ ಆಹಾರವೆಂದು ಉಪಯೋಗಿಸಬಹುದು.

೨೬. ಸೊಗದೆಬೇರು (ಅನಂತಮೂಲ)

ಸೊಗದೆಬೇರು (ಅನಂತಮೂಲ)

೨೬ ಅ. ಮಹತ್ವ : ಇದು ರಕ್ತಶುದ್ಧಿಯನ್ನು ಮಾಡುವ ಒಂದು ಶ್ರೇಷ್ಠ ಔಷಧಿಯಾಗಿದೆ. ಇದರ ಬೇರುಗಳನ್ನು ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಈ ಬೇರುಗಳಿಗೆ ಬಹಳ ಒಳ್ಳೆಯ ಸುಗಂಧ ಬರುತ್ತದೆ ಇದರ ನಿತ್ಯ ಸೇವನೆಯಿಂದ ಗರ್ಭಾಶಯದಲ್ಲಿನ ಗಂಟುಗಳು ಕರಗಲು ಸಹಾಯವಾಗುತ್ತದೆ. ಈ ವನಸ್ಪತಿಗಳು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡು ಬರುತ್ತದೆ; ಆದರೆ ಈಗ ಇದು ವಿನಾಶದ ಅಂಚಿನಲ್ಲಿದೆ. ಈ ವನಸ್ಪತಿಯನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಬೆಳೆಸಬೇಕು.

೨೬ ಆ. ಕೃಷಿ : ಈ ವನಸ್ಪತಿಯ ಎಲೆಗಳನ್ನು ಕಿತ್ತಾಗ ಬಿಳಿ ಬಣ್ಣದ ಹಾಲು (ರಸ) ಬರುತ್ತದೆ. ಕೊಂಕಣಿಯಲ್ಲಿ ಈ ವನಸ್ಪತಿಗೆ ‘ದೂಧಶಿರಿ’ ಎಂದು ಹೇಳುತ್ತಾರೆ. ಎಲೆಗಳು ಚೂಪು ಮತ್ತು ಹಸಿರು ಬಣ್ಣದ್ದಾಗಿರುತ್ತವೆ. ಅವುಗಳ ಮೇಲೆ ಬಿಳಿ ಬಣ್ಣದ ಅಡ್ಡ-ಉದ್ದ ಗೆರೆಗಳಿರುತ್ತವೆ. ಇದರ ಬೇರುಗಳು ಆಳದಲ್ಲಿರುತ್ತವೆ. ಬೇರುಗಳನ್ನು ಅಗೆದು ದೊರಕುವ ಸಸಿಗಳನ್ನು ಮನೆಗೆ ತಂದು ನೆಡಬೇಕು. ಸಸಿಗಳು ಸಿಗುವಲ್ಲಿಂದ ಅವುಗಳನ್ನು ಅಗೆದು ತಂದು ನೆಡಬೇಕು. ಇದರ ಕಾಂಡಗಳ ಅಥವಾ ಬೇರಿನ ತುಂಡುಗಳಿಂದಲೂ ಗಿಡಗಳನ್ನು ಬೆಳೆಸಲು ಬರುತ್ತದೆ. ೨ ವರ್ಷಗಳ ನಂತರ ಇದರ ಬೇರುಗಳನ್ನು ಔಷಧಿಗಳಲ್ಲಿ ಉಪಯೋಗಿಸಲು ಬರುತ್ತದೆ.’

(ಮುಕ್ತಾಯ)

ಕೃಷಿಗಾಗಿ ಔಷಧಿ ಸಸ್ಯಗಳ ಬೀಜ, ಸಸಿ ಇತ್ಯಾದಿಗಳು ಎಲ್ಲಿ ದೊರೆಯುತ್ತವೆ ?

೧. ಔಷಧಿ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಸಿಗಳು ದೊರೆಯುವ ಸ್ಥಳಗಳು

. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ, ಬೆಂಗಳೂರು. ದೂ. (೦೮೦) ೨೮೫೬೮೦೦೦

ಆ. ಕರ್ನಾಟಕ ರಾಜ್ಯ ಗಿಡಮೂಲಿಕೆ ಔಷಧಿ ಪ್ರಾಧಿಕಾರ, ಬೆಂಗಳೂರು. ದೂ. (೦೮೦) ೨೩೪೬೪೦೮೯.

ವಿಳಾಸ : ನಂ. ೪೦೧, ೪ನೇ ಮಹಡಿ, ವನ ವಿಕಾಸ, ೧೮ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – ೦೩.

. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ. ದೂ. (೦೮೦) ೨೩೦೮೬೧೦೦

೨. ಇತರ ರಾಜ್ಯಗಳಲ್ಲಿನ ಮಹತ್ವದ ಸರಕಾರಿ ಸಂಸ್ಥೆಗಳು

. ಸಿಎಸ್‌ಐಆರ್ – ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ (ಸೀಮ್ಯಾಪ್), ಲಖ್ನೌ, ಉತ್ತರಪ್ರದೇಶ (೦೫೨೨-೨೭೧೮೬೨೯)

ಆ. ಡೈರೆಕ್ಟೊರೇಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ ರಿಸರ್ಚ್, ಬೋರಿಯಾವಿ, ಗುಜರಾತ. (೦೨೬೯೨ – ೨೭೧೬೦೨)

. ಜವಾಹರಲಾಲ ನೆಹರು ಕೃಷಿ ವಿಶ್ವವಿದ್ಯಾಲಯ. ಜಬಲಪುರ, ಮಧ್ಯಪ್ರದೇಶ(೦೭೬೧-೨೬೮೧೭೦೬)