ಮುಂಬರುವ ಭೀಷಣ ಆಪತ್ಕಾಲಕ್ಕಾಗಿ, ಹಾಗೆಯೇ ಪ್ರತಿನಿತ್ಯದ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದಿಕ ಔಷಧಗಳು

ಸದ್ಯ ಕೊರೋನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶ್ವಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿಯಿರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಗಳೇ ಇರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೆ ಅವು ಸಂಚಾರಸಾರಿಗೆ ಬಂದಿ’ಯಿಂದಾಗಿ ಸಮಯಕ್ಕೆ ಸರಿಯಾಗಿ ತಲಪುವುದಿಲ್ಲ, ಅಲ್ಲದೇ ಔಷಧಗಳ ಕೊರತೆ ಇರುವುದರಿಂದ ಅವುಗಳ ಕಳ್ಳಸಂತೆ ನಡೆಯುತ್ತಿದೆ. ಇಂತಹ ಅನೇಕ ಕಹಿ ಅನುಭವಗಳನ್ನು ಅನೇಕ ಜನರು ಅನುಭವಿಸಿದ್ದಾರೆ. ಮುಂಬರುವ ಭೀಷಣ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೆ ಸಿದ್ಧತೆಯನ್ನು ಮಾಡುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ದತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ನಿತ್ಯದ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ನಿರ್ಮಾಣ ಮಾಡುತ್ತಿದೆ. ಈ ಔಷಧಗಳು ಶೀಘ್ರದಲ್ಲಿಯೇ ಉಪಲಬ್ಧವಾಗುವವು. ಈ ಔಷಧಗಳ ಮಾಹಿತಿಯನ್ನು ನಾವು ಕ್ರಮವಾಗಿ ನೋಡುತ್ತಿದ್ದೇವೆ.

೭. ಸನಾತನದ ಆಮಲಕ (ನೆಲ್ಲಿಕಾಯಿ) ಚೂರ್ಣ

೭ ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ : ಈ ಔಷಧಿ ತಂಪು ಗುಣಧರ್ಮದ್ದಾಗಿದ್ದು, ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸುತ್ತದೆ. ಇದರ ರೋಗಗಳಲ್ಲಿನ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರ ಜೊತೆಗೆ ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

೭ ಆ. ಸೂಚನೆ

೧. ೩ ರಿಂದ ೭ ವರ್ಷದ ಮಕ್ಕಳಿಗೆ ಕಾಲು ಭಾಗ ಮತ್ತು ೮ ರಿಂದ ೧೪ ವರ್ಷದ ಮಕ್ಕಳಿಗೆ ಅರ್ಧ ಭಾಗ ನೆಲ್ಲಿಕಾಯಿ ಚೂರ್ಣವನ್ನು ಕೊಡಬೇಕು.

೮. ಸನಾತನದ ಯೋಗರಾಜ ಗುಗ್ಗುಳ (ಮಾತ್ರೆಗಳು)

೮ ಅ. ಗುಣಧರ್ಮ ಮತ್ತು ಆಗಬಹುದಾದ ಉಪಯೋಗ : ಇದು ಉತ್ತಮ ವಾತನಾಶಕ ಔಷಧಿಯಾಗಿದೆ. ಇದರ ರೋಗಗಳಲ್ಲಿ ಆಗಬಹುದಾದ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರ ಜೊತೆಗೆ ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧಿಗಳನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧ ಸೇವಿಸುವ ಪದ್ಧತಿ ಅವಧಿ
ವಾತದ ರೋಗಗಳು, ಅರ್ಧಾಂಗವಾಯು, ಕೈಗಳು ನಡಗುವುದು, ತಲೆತಿರುಗುವುದು, ಉಚ್ಚ ರಕ್ತದೊತ್ತಡ, ಬೊಜ್ಜು (ಸ್ಥೂಲಕಾಯ), ಸಂಧಿವಾತ(ಸಂಧಿಗಳಿಗೆ ಬಾವು ಬರುವುದು ಮತ್ತು ಸಂಧಿಗಳು ನೋಯಿಸುವುದು) ಮತ್ತು ಕೈಕಾಲುಗಳು ನೋಯಿಸುವುದು. ದಿನದಲ್ಲಿ ೨ ಮಾತ್ರೆಗಳನ್ನು ೨ – ೩ ಸಲ ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು ೧ ರಿಂದ ೩ ತಿಂಗಳು

೮ ಆ. ಸೂಚನೆ

ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ (ಹುಡಿ) ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುತ್ತದೆ.

೨. ೩ ರಿಂದ ೭ ವರ್ಷದ ಮಕ್ಕಳಿಗೆ ಔಷಧದ ಕಾಲು ಭಾಗ ಮತ್ತು ೮ ರಿಂದ ೧೪ ವರ್ಷದ ಮಕ್ಕಳಿಗೆ ಅರ್ಧ ಭಾಗ ಕೊಡಬೇಕು.

– ವೈದ್ಯ ಮೇಘರಾಜ ಪರಾಡಕರ್, ಸನಾತನ ಆಶ್ರಮ, ರಾಮನಾಥಿ ಗೋವಾ. (೧೧.೬.೨೦೨೧)