ಬರುವ ಮಹಾಭೀಕರ ಆಪತ್ಕಾಲದ ದೃಷ್ಟಿಯಿಂದ ಆಯುರ್ವೇದ ಮತ್ತು ‘ಹೋಮಿಯೋಪತಿಕ್ ಔಷಧಿಗಳ, ಯೋಗಾಸನ ಮತ್ತು ಪ್ರಾಣಾಯಾಮಗಳ ಮಹತ್ವ ಗಮನದಲ್ಲಿಡಿ !

ಯುದ್ಧದ ಕಾಲದಲ್ಲಿ ಔಷಧಗಳ ಸಂಗ್ರಹವನ್ನು ಹೆಚ್ಚಾಗಿ ಸೈನಿಕರಿಗಾಗಿ ಉಪಯೋಗಿಸಲಾಗುತ್ತದೆ. ಇದರಿಂದಾಗಿ ಔಷಧಗಳ ಕೊರತೆಯಾಗುವುದು. ಈ ದೃಷ್ಟಿಯಿಂದ ಕುಟುಂಬಕ್ಕಾಗಿ ಬೇಕಾಗುವ ಔಷಧಗಳನ್ನು ಆಪತ್ಕಾಲದ ಮೊದಲೇ ಖರೀದಿಸಿಡಬೇಕಾಗಿದೆ.

ಬೇಸಿಗೆಯಲ್ಲಿ ಈ ಮುಂದಿನಂತೆ ಆರೋಗ್ಯವನ್ನು ಕಾಪಾಡಿಕೊಳ್ಳಿ !

ಮಾವಿನ ಹಣ್ಣಿನ ಸಿಹಿ ಪಾನಕ, ಲಿಂಬು ಶರಬತ್, ಜೀರಿಗೆಯ ಕಷಾಯ, ಎಳನೀರು, ಹಣ್ಣುಗಳ ರಸ, ಹಾಲು ಹಾಕಿ ಮಾಡಿದ ಅಕ್ಕಿಯ ಪಾಯಸ, ಗುಲ್ಕಂದ ಇತ್ಯಾದಿ ತಂಪು ಹಾಗೂ ದ್ರವ ಪದಾರ್ಥಗಳಲ್ಲಿ ಇವುಗಳಲ್ಲಿ ಯಾವುದು ಸಾಧ್ಯವಿದೆಯೋ ಅಥವಾ ದೊರಕಿದೆಯೋ, ಆ ಆಹಾರವನ್ನು ಉಪಯೋಗಿಸಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.

ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟೂವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

‘ಪ್ರಸ್ತುತ ಕೆಲವು ಜನರು ‘ತ್ರಿಕಟೂ’ ಅಂದರೆ ‘ಶುಂಠಿ, ಕಾಳುಮೆಣಸು ಹಾಗೂ ಹಿಪ್ಪಲಿ’ ಇವುಗಳ ಕಷಾಯವನ್ನು ಪ್ರತಿದಿನ ಸೇವಿಸುತ್ತಿದ್ದಾರೆ. ಆಯುರ್ವೇದದ ಔಷಧಿಗಳನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದಿರುತ್ತದೆ. ತ್ರಿಕಟೂ ಉಷ್ಣವಿರುತ್ತದೆ. ಈಗ ಬೇಸಿಗೆ ಕಾಲವು ಆರಂಭವಾಗಿರುವುದರಿಂದ ತ್ರಿಕಟೂವಿನ ಕಷಾಯದ ಬದಲು ಅಮೃತಬಳ್ಳಿಯನ್ನು ಉಪಯೋಗಿಸಬೇಕು.