ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟೂವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

‘ಪ್ರಸ್ತುತ ಕೆಲವು ಜನರು ‘ತ್ರಿಕಟೂ’ ಅಂದರೆ ‘ಶುಂಠಿ, ಕಾಳುಮೆಣಸು ಹಾಗೂ ಹಿಪ್ಪಲಿ’ ಇವುಗಳ ಕಷಾಯವನ್ನು ಪ್ರತಿದಿನ ಸೇವಿಸುತ್ತಿದ್ದಾರೆ. ಆಯುರ್ವೇದದ ಔಷಧಿಗಳನ್ನು ಋತುಗಳಿಗನುಸಾರ ತೆಗೆದುಕೊಳ್ಳುವುದಿರುತ್ತದೆ. ತ್ರಿಕಟೂ ಉಷ್ಣವಿರುತ್ತದೆ. ಈಗ ಬೇಸಿಗೆ ಕಾಲವು ಆರಂಭವಾಗಿರುವುದರಿಂದ ತ್ರಿಕಟೂವಿನ ಕಷಾಯದ ಬದಲು ಅಮೃತಬಳ್ಳಿಯನ್ನು ಉಪಯೋಗಿಸಬೇಕು.