‘ಉಡುಪು ಆರಾಮದಾಯಕವಾಗಿದೆ, ಎಂಬ ಮೇಲುಮೇಲಿನ ವಿಚಾರ ಮಾಡಿ ತಮೋಗುಣವನ್ನು ಹೆಚ್ಚಿಸುವ ಜೀನ್ಸ್ ಪ್ಯಾಂಟ್ ಧರಿಸುವ ಬದಲು ಸಾತ್ತ್ವಿಕತೆಯನ್ನು ಹೆಚ್ಚಿಸುವ ಉಡುಗೆತೊಡುಗೆಗಳನ್ನು ಧರಿಸುವುದು ಎಲ್ಲ ದೃಷ್ಟಿಯಿಂದ ಹೆಚ್ಚು ಲಾಭದಾಯಕ !

ಜೀನ್ಸ್ ಪ್ಯಾಂಟ್ ಸ್ವೇಚ್ಛಾಚಾರದ ದರ್ಶಕವಾಗಿದ್ದು ಅದರಿಂದ ವ್ಯಕ್ತಿಯ ಅಹಂಕಾರ ಹೆಚ್ಚಾಗುತ್ತದೆ ಮತ್ತು ಅವನಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಜೀನ್ಸ್ ಪ್ಯಾಂಟ್‌ನಲ್ಲಿ ಈಶ್ವರನ ಚೈತನ್ಯವನ್ನು ಗ್ರಹಿಸುವ ಕ್ಷಮತೆ ನಗಣ್ಯವಾಗಿದೆ.

ಹಿಂದೂಸ್ಥಾನದ ಮುಂಬರುವ ಪೀಳಿಗೆಯನ್ನು ಆದರ್ಶವನ್ನಾಗಿಸಿ !

ಮಕ್ಕಳು ದೂರಚಿತ್ರವಾಣಿಯನ್ನು ಸೀಮಿತ; ಆದರೆ ಹಿತಕಾರಿ ಕಾರ್ಯಕ್ರಮಗಳಿಗಾಗಿ ಹೇಗೆ ಉಪಯೋಗ ಮಾಡಬೇಕು ? ‘ಟಿ.ವಿ.,’ ಇಂಟರನೆಟ್ ಮುಂತಾದವುಗಳ ಸಂದರ್ಭದಲ್ಲಿ ಪಾಲಕರು ಮತ್ತು ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ?

ದೇವರಿಗೆ ನೈವೇದ್ಯವನ್ನು ಬಾಳೆಯ ಎಲೆಯ ಮೇಲೇಕೆ ತೋರಿಸಬೇಕು ?

ಬಾಳೆಯ ಎಲೆಯಲ್ಲಿರುವ ಬಣ್ಣದ ಕಣಗಳಿಂದ ಹರಡುವ ಸೂಕ್ಷ ಲಹರಿಗಳು ಆಪತತ್ತ್ವಕ್ಕೆ ಸಂಬಂಧಪಟ್ಟಿರುತ್ತವೆ. ಈ ಬಣ್ಣದ ಕಣಗಳ ಸೂಕ್ಷ್ಮ ಕಂಪನದಿಂದ ಉತ್ಪನ್ನವಾಗುವನಾದವು, ಘಂಟೆಯಿಂದ ಉತ್ಪನ್ನವಾಗುವ ಸೂಕ್ಷ್ಮನಾದದೊಂದಿಗೆ ಸಾಮ್ಯವನ್ನು ತೋರಿಸುತ್ತವೆ. ಈ ಸೂಕ್ಷ್ಮನಾದದಿಂದಾಗಿ ಬಾಳೆಎಲೆಯತ್ತ ಬ್ರಹ್ಮಾಂಡದಲ್ಲಿನ ಅವಶ್ಯವಿರುವ ಉಚ್ಚದೇವತೆಗಳ ತತ್ತ್ವಗಳ ಲಹರಿಗಳು ಬೇಗನೆ ಆಕರ್ಷಿತವಾಗುತ್ತವೆ.

ಹಿಂದೂ (ಭಾರತೀಯ) ಪದ್ಧತಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ಏಕೆ ಸಾತ್ತ್ವಿಕವಾಗಿರುತ್ತವೆ ?: ‘ಫಾಸ್ಟ್ ಫುಡ್ ತಯಾರಿಸುವ

ಪದ್ಧತಿ ಮತ್ತು ಅವುಗಳಲ್ಲಿ ಬಳಸುವ ಪದಾರ್ಥಗಳಿಂದ ಅವುಗಳಲ್ಲಿನ ತಮೋಗುಣವು ಹೆಚ್ಚುತ್ತದೆ, ಹಾಗೆಯೇ ಅವುಗಳ ಕಡೆಗೆ ಕಪ್ಪು ಶಕ್ತಿಯು ಆಕರ್ಷಿತವಾಗುತ್ತದೆ. ತದ್ವಿರುದ್ಧವಾಗಿ ಹಿಂದೂಗಳ (ಭಾರತೀಯರ) ಆಹಾರ ಪದಾರ್ಥಗಳನ್ನು ತಯಾರಿಸುವ ಪದ್ಧತಿ ಮತ್ತು ಅವುಗಳಲ್ಲಿ ಬಳಸುವ ಪದಾರ್ಥಗಳು ಸಾತ್ತ್ವಿಕವಾಗಿರುವುದರಿಂದ, ತಯಾರಿಸಿದ ಪದಾರ್ಥಗಳೂ ಸಾತ್ತ್ವಿಕವಾಗಿರುತ್ತವೆ.

ಸ್ನಾನಗೃಹ ಮತ್ತು ಶೌಚಾಲಯದಲ್ಲಿ ಹೆಚ್ಚು ಸಮಯ ಇರಬೇಡಿ !

ಸ್ನಾನಗೃಹ ಎಂದರೆ ದೇಹಶುದ್ಧಿಯ ಒಂದು ಸ್ಥಳವೇ ಆಗಿದೆ. ಸ್ನಾನಗೃಹದಲ್ಲಿ ದೇಹದ ಶುದ್ಧಿಯಾಗಿ ದೇಹದ ಮೇಲಿನ ರಜ-ತಮಾತ್ಮಕ ಕಲ್ಮಶವು ಸ್ನಾನದ ನೀರಿನ ಮೂಲಕ ಹೊರಗೆ ಹೋಗುತ್ತದೆ. ಹಾಗಾಗಿ ಸ್ನಾನಗೃಹದಲ್ಲಿನ ವಾತಾವರಣವು ರಜ-ತಮಾತ್ಮಕವಾಗಿರುತ್ತದೆ.

ಸನಾತನದ ‘ಸಾತ್ತ್ವಿಕ ವೇಷಭೂಷಣ’ ಈ ಗ್ರಂಥಮಾಲಿಕೆಯ ಹೊಸ ಗ್ರಂಥ ಪ್ರಕಾಶನ !

ಧೋತಿಯು ದೇಹದಲ್ಲಿನ ಈಶ್ವರೀ ಶಕ್ತಿಯನ್ನು ಆವಶ್ಯಕ ಪ್ರಮಾಣದಲ್ಲಿ ಸಗುಣ ಶಕ್ತಿಯಲ್ಲಿ ರೂಪಾಂತರಿಸುತ್ತದೆ ಮತ್ತು ಪ್ರಕ್ಷೇಪಿಸುತ್ತದೆ. ಸರ್ವಸಾಮಾನ್ಯ ಜೀವಗಳಿಗೆ ಸಂತರ ದೇಹದಿಂದ ಪ್ರಕ್ಷೇಪಿಸುವ ಶಕ್ತಿಯಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ.

ಅನೈಚ್ಛಿಕ ಕರ್ಮಗಳು

ಶ್ವಾಸೋಚ್ಛ್ವ್ವಾಸ, ಹೃದಯ ಬಡಿತ, ಕಣ್ಣುರೆಪ್ಪೆಗಳ ಬಡಿತ ಈ ಕರ್ಮಗಳು ಅನೈಚ್ಛಿಕವಾಗಿವೆ. ಹಸಿವೆಯಾದಾಗ ತಿನ್ನುವುದು, ಬಾಯಾರಿಕೆಯಾದಾಗ ನೀರು ಕುಡಿಯುವುದು, ಮೂತ್ರ ಮಾಡುವುದು, ನಿದ್ರೆ ಮಾಡುವುದು ಮುಂತಾದ ಕರ್ಮಗಳು ಜೀವಂತವಾಗಿರಲು ಅವಶ್ಯಕವಾಗಿರುತ್ತವೆ.

ಸನಾತನದ ‘ಸಾತ್ತ್ವಿಕ ವೇಷಭೂಷಣ’ ಈ ಗ್ರಂಥಮಾಲಿಕೆಯ ಹೊಸ ಗ್ರಂಥ ಪ್ರಕಾಶನ !

ಮುಂಡುಗಿಂತ (ಲುಂಗಿಯಂತಹ ವಸ್ತ್ರ) ಧೋತಿ ಶ್ರೇಷ್ಠವಾಗಿರುವುದರ ಶಾಸ್ತ್ರ ಸದ್ಯ ಸಂನ್ಯಾಸಿ ಅಥವಾ ಶಕ್ತಿಮಾರ್ಗದವರು ಉಡುತ್ತಿರುವ ಲುಂಗಿಯಂತಹ ಭಗವಾ ಬಟ್ಟೆ ಇದು ಸಹ ಸದ್ಯದ ಕಾಲಕ್ಕಾಗಿ ಅಯೋಗ್ಯ ! ಇಂದಿನವರೆಗೆ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲದ ಅಧ್ಯಾತ್ಮಶಾಸ್ತ್ರೀಯ ಜ್ಞಾನ ಸಮಾವೇಶ !

ಸ್ತ್ರೀಯರು ಮತ್ತು ಪುರುಷರು ಕುಂಕುಮವನ್ನು ಹೇಗೆ ಹಚ್ಚಿಕೊಳ್ಳಬೇಕು?

ಸ್ತ್ರೀಯರು ತಮ್ಮ ಆಜ್ಞಾಚಕ್ರದ ಮೇಲೆ ಕೆಂಪು ಗೋಲಾಕಾರ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ ಮತ್ತು ಪುರುಷರು ತಮ್ಮ ಆಜ್ಞಾಚಕ್ರದ ಮೇಲೆ ಉದ್ದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಸ್ತ್ರೀಯರು ಹಣೆಯ ಮೇಲೆ ಹಚ್ಚಿಕೊಂಡಿರುವ ಕುಂಕುಮದಿಂದ ತಮ್ಮಲ್ಲಿರುವ ಜಗನ್ಮಾತೆ ಶ್ರೀ ದುರ್ಗಾದೇವಿಯ ತತ್ತ್ವದ ಪೂಜೆಯನ್ನು ಮಾಡುತ್ತಾರೆ.

ಕರ್ಮವೆಂದರೆ ಯಜ್ಞ

ಋಗ್ವೇದದ ಸಮಯದಲ್ಲಿ ಯಜ್ಞಯಾಗಗಳನ್ನು ಮಾಡುವುದು ‘ಕರ್ಮ’ವಾಗಿತ್ತು. ಯಜ್ಞಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸುವುದೇ ಆ ಕಾಲದ ಧರ್ಮವಾಗಿತ್ತು. ಬ್ರಾಹ್ಮಣ ಕಾಲದಲ್ಲಿ ಈ ಯಜ್ಞಸಂಸ್ಥೆಯು ಎಲ್ಲ ರೀತಿಯಲ್ಲಿ ವಿಕಸಿತಗೊಂಡಿತು ಮತ್ತು ಅಷ್ಟೇ ಜಟಿಲವೂ ಆಯಿತು.

Kannada Weekly | Offline reading | PDF