‘ಆಭರಣ ಎಂಬ ಶಬ್ದದ ಉತ್ಪತ್ತಿ-ಅರ್ಥ

೧ ಅ. ಉತ್ಪತ್ತಿ : ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.

೧ ಆ. ಅರ್ಥ :

೧ ಆ ೧. ಋಗ್ವೇದಕ್ಕನುಸಾರ : ಋಗ್ವೇದದಲ್ಲಿ ‘ಆಭೂಷಣ ಎಂಬ ಶಬ್ದವನ್ನು ‘ಶಕ್ತಿದಾತ್ರಿ (ಶಕ್ತಿದಾಯಕ) ವಸ್ತುವನ್ನು ತರುವುದು ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ.

೧ ಆ ೨. ಅಥರ್ವವೇದಕ್ಕನುಸಾರ : ಅಥರ್ವವೇದದಲ್ಲಿ ‘ಆಭೂಷಣ ಎಂಬ ಶಬ್ದವನ್ನು ಮಂತ್ರಸಾಮರ್ಥ್ಯ ಅಥವಾ ಮಂತ್ರಶಕ್ತಿಯಿಂದ ತುಂಬಿದ ವಸ್ತು ಎಂಬರ್ಥದಲ್ಲಿ ನೀಡಲಾಗಿದೆ.

೧ ಆ ೩. ಈಶ್ವರನು ಮನುಷ್ಯನಿಗೆ ನೀಡಿದ ಸ್ಥೂಲರೂಪ ವನ್ನು ಹೊರಗಿನಿಂದ ಅಲಂಕರಿಸುವ ಮಾಧ್ಯಮ ಆಭರಣ.

೧ ಆ ೪. ‘ಆಭರಣ ಎಂದರೆ ಈಶ್ವರನ ತೇಜರೂಪೀ ಸಗುಣತೆಯನ್ನು ಧರಿಸುವುದು, ಆದುದರಿಂದ ‘ಆಭರಣಗಳನ್ನು ಹಾಕಿಕೊಳ್ಳುವುದು ಎಂದು ಹೇಳದೇ, ‘ಆಭರಣಗಳನ್ನು ಧರಿಸುವುದು ಎಂದು ಹೇಳುತ್ತಾರೆ. ತೇಜದ ಸಗುಣ ಕಲಾತ್ಮಕ ದರ್ಶನವೆಂದರೆ ಆಭರಣ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ