
ಪ್ರದಕ್ಷಿಣೆಗಳನ್ನು ಹೇಗೆ ಹಾಕಬೇಕು ?
೧. ಪ್ರದಕ್ಷಿಣೆಗಳನ್ನು ಹಾಕುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಬೇಕು.
೨. ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣ ನಾಮಜಪವನ್ನು ಮಾಡುತ್ತಾ ಮಧ್ಯಮ ಗತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು. ಪ್ರದಕ್ಷಿಣೆಗಳನ್ನು ಹಾಕುವಾಗ ಗರ್ಭಗುಡಿಯನ್ನು (ಅಥವಾ ದೇವಸ್ಥಾನವನ್ನು) ಸ್ಪರ್ಶಿಸಬಾರದು.
ಪ್ರದಕ್ಷಿಣೆಗಳನ್ನು ಹಾಕುವಾಗ ದೇವರ ಹಿಂದಿನ ಬದಿಗೆ ಬಂದ ಮೇಲೆ ನಿಂತು ದೇವರಿಗೆ ನಮಸ್ಕಾರ ಮಾಡಿಯೇ ಮುಂದೆ ಹೋಗಬೇಕು.
೩. ದೇವರಿಗೆ ಸಮಸಂಖ್ಯೆಯಲ್ಲಿ (ಉದಾ. ೨, ೪) ಮತ್ತು ದೇವಿಗೆ ವಿಷಮ ಸಂಖ್ಯೆಂiಲ್ಲಿ (ಉದಾ. ೧, ೩) ಪ್ರದಕ್ಷಿಣೆಗಳನ್ನು ಹಾಕಬೇಕು.
೪. ಪ್ರತಿಯೊಂದು ಪ್ರದಕ್ಷಿಣೆಯ ನಂತರ ನಿಂತು ದೇವರಿಗೆ ನಮಸ್ಕಾರ ಮಾಡಿಯೇ ಮುಂದಿನ ಪ್ರದಕ್ಷಿಣೆಯನ್ನು ಹಾಕಬೇಕು.
ಪ್ರದಕ್ಷಿಣೆಯ ನಂತರ ಏನು ಮಾಡಬೇಕು ?
೧. ದೇವರಿಗೆ ಶರಣಾಗತ ಭಾವದಿಂದ ನಮಸ್ಕಾರ ಮತ್ತು ಪ್ರಾರ್ಥನೆ ಯನ್ನು ಮಾಡಬೇಕು.
೨. ಬಲಗೈಯಿಂದ ತೀರ್ಥವನ್ನು ಸ್ವೀಕರಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾದ ತುದಿಗಳನ್ನು ಅಂಗೈಗೆ ಸ್ಪರ್ಶಿಸಿ, ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಆಮೇಲೆ ಬೆರಳುಗಳನ್ನು ಹಣೆಯಿಂದ ತಲೆಯ ಹಿಂದಿನವರೆಗೆ ಸವರಬೇಕು.
೩. ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು ನಾಮಜಪ ಮಾಡಬೇಕು ಮತ್ತು ಪ್ರಸಾದವನ್ನು ಆದಷ್ಟು ದೇವಸ್ಥಾನದಲ್ಲಿಯೇ ಸೇವಿಸಬೇಕು. ಹೊರಡುವಾಗ ದೇವರಿಗೆ ಮತ್ತೊಮ್ಮೆ ಪ್ರಾರ್ಥನೆ ಮಾಡಬೇಕು. ದೇವಸ್ಥಾನದ ಹೊರಗೆ ಬಂದ ನಂತರ ಅಂಗಣದಿಂದ ಮತ್ತೊಮ್ಮೆ ಕಲಶಕ್ಕೆ ನಮಸ್ಕಾರ ಮಾಡಬೇಕು.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ದೇವಸ್ಥಾನದಲ್ಲಿ ದೇವತೆಯ ದರ್ಶನ ಪಡೆಯುವಾಗಿನಿಂದ ಮಾಡುವ ಕೃತಿಗಳ ಶಾಸ್ತ್ರ)
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ