ಹಿಂದಿನ ಲೇಖನದಲ್ಲಿ ನಾವು ‘ದೇವರ ಮನೆ ಎಲ್ಲಿರಬೇಕು ಮತ್ತು ಅದರ ರಚನೆ’ ಹೇಗಿರಬೇಕು ? ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು. ಈಗ ನಾವು ಮನೆಯ ಎರಡನೇ ಪ್ರಮುಖ ಭಾಗವಾದ ‘ಅಡುಗೆ ಮನೆ’ ಎಲ್ಲಿರಬೇಕು, ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಅಡುಗೆ ಮನೆಯು ಯೋಗ್ಯ ಇರುವುದು ಮಹಿಳೆಯರ ದೃಷ್ಟಿಯಿಂದ ಹೆಚ್ಚು ಅವಶ್ಯಕವಾಗಿರುತ್ತದೆ; ಏಕೆಂದರೆ ಅವರಿಗೆ ದಿನವಿಡಿ ಅಡುಗೆ ಮನೆಯಲ್ಲಿ ಸ್ವತಃ ನಿಂತು ಉತ್ಸಾಹದಿಂದ ಇತರರಿಗಾಗಿ ಅಡುಗೆ ಮಾಡಬೇಕಾಗುತ್ತದೆ, ಅಲ್ಲದೆ ಅಡುಗೆ ಮನೆಯು ಸರಿಯಾದ ದಿಕ್ಕಿನಲ್ಲಿರುವುದು, ಇದು ಆ ವಾಸ್ತುವಿನಲ್ಲಿರುವ ಎಲ್ಲರ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿರುತ್ತದೆ. ಈ ಕಾರಣಕ್ಕಾಗಿ ಅಡುಗೆ ಮನೆಯ ಬಗ್ಗೆ ವಿಚಾರ ಮಾಡುವುದು ಮಹತ್ವದ್ದಾಗಿದೆ.
ಈ ಹಿಂದಿನ ಲೇಖನ ಸಂಖ್ಯೆ ೧೮ ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://sanatanprabhat.org/kannada/182866.html

೧. ಅಡುಗೆ ಮನೆಯ ದೃಷ್ಟಿಯಿಂದ ಆಗ್ನೇಯ ದಿಕ್ಕಿನ ಮಹತ್ವ ಮತ್ತು ‘ಅಗ್ನಿಚಕ್ರ’ದ ವಿಚಾರ
ವಾಸ್ತುಶಾಸ್ತ್ರದಲ್ಲಿ ಅಡುಗೆಮನೆಗಾಗಿ ಪ್ರಾಧಾನ್ಯತೆಯಿಂದ ‘ಅಗ್ನಿಚಕ್ರ’ದ ವಿಚಾರ ಮಾಡಲಾಗುತ್ತದೆ. ಸೂರ್ಯನ ಪರಿಭ್ರಮಣದಿಂದಾಗಿ ವಾಸ್ತುವಿನ ಪ್ರತಿಯೊಂದು ದಿಕ್ಕಿನ ಮೇಲೆ ಬೇರೆ ಬೇರೆ ಕಾಲಾವಧಿಯಲ್ಲಿ ಪರಿಣಾಮ ಆಗುತ್ತಿರುತ್ತವೆ. ಉದಾಹರಣೆಗೆ – ಸೂರ್ಯೋದಯಕ್ಕಿಂತ ಮುಂಚೆಯೇ ಮನೆಯ ಪೂರ್ವಭಾಗವು ಬಿಸಿಯಾಗತೊಡಗುತ್ತದೆ. ನಸುಕಿನ ೪.೩೦ ರಿಂದ ಬೆಳಗಿನ ೭.೩೦ ಈ ಕಾಲಾವಧಿಯಲ್ಲಿ ಪೂರ್ವ ದಿಕ್ಕಿನ ಮೇಲೆ ಪರಿಣಾಮವಾಗುತ್ತದೆ. ಮುಂದೆ ಬೆಳಗ್ಗೆ ೭.೩೦ ರಿಂದ ಬೆಳಗ್ಗೆ ೧೦.೩೦ ಈ ಕಾಲಾವಧಿಯಲ್ಲಿ ಆಗ್ನೇಯ ದಿಕ್ಕಿನ ಮೇಲೆ ಸೂರ್ಯನ ಪ್ರಭಾವವಿರುತ್ತದೆ. ನಂತರ ಮಧ್ಯಾಹ್ನದ ಸಮಯದಲ್ಲಿ ದಕ್ಷಿಣ ನಂತರ ನೈಋತ್ಯ, ಪಶ್ಚಿಮ ಈ ಕ್ರಮದಲ್ಲಿ ಸೂರ್ಯನ ಶಕ್ತಿಯ ಪರಿಣಾಮವಾಗುತ್ತಾ ಹೋಗುತ್ತದೆ.
೨೪ ಗಂಟೆಗಳಲ್ಲಿ ೮ ದಿಕ್ಕುಗಳ ಮೇಲೆ ಸೂರ್ಯನ ಪರಿಭ್ರಮಣದ ಪರಿಣಾಮವಾಗುತ್ತಾ ಹೋಗುತ್ತದೆ, ಹಾಗೆಯೇ ಅಲ್ಲಿರುವ ಜನರ ಮೇಲೆಯೂ ದೀರ್ಘಕಾಲ ಪರಿಣಾಮ ಆಗುತ್ತದೆ. ಸೂರ್ಯನು ಮುಂದೆ ಸಾಗುತ್ತಿದ್ದಂತೆ, ಹಿಂದಿನ ದಿಕ್ಕು ನಿಧಾನವಾಗಿ ಶಾಂತ ಮತ್ತು ತಣ್ಣಗಾಗುತ್ತಾ ಹೋಗುತ್ತದೆ. ಸೂರ್ಯನು ಪೂರ್ವ ದಿಕ್ಕಿಗೆ ಬರುವ ಮೊದಲೇ ಸ್ವಲ್ಪ ಸಮಯ ಅಲ್ಲಿ ಅವನ ಊರ್ಜೆಯಿಂದಾಗಿ ಕ್ರಿಯಾಶೀಲತೆ ಹೆಚ್ಚಾಗತೊಡಗುತ್ತದೆ. ಆಗ ಸೂರ್ಯನು ಪ್ರತ್ಯಕ್ಷ ಆ ದಿಕ್ಕಿನಲ್ಲಿ ಇರುವಾಗ, ಕ್ರಿಯಾಶೀಲತೆ ಅತ್ಯುಚ್ಚ ಮಟ್ಟದಲ್ಲಿರುತ್ತದೆ. ಸೂರ್ಯನು ಮುಂದೆ ಸಾಗಿದಂತೆ ಕ್ರಿಯಾಶೀಲತೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ವಾಸ್ತುಶಾಸ್ತ್ರದಲ್ಲಿ ಈ ಅಗ್ನಿಚಕ್ರಕ್ಕೆ ಬಹಳ ಮಹತ್ವವನ್ನು ನೀಡಲಾಗಿದೆ. ಆದುದರಿಂದ ಮನೆಯ ಒಳಾಂಗಣದ ರಚನೆಯನ್ನು ಮಾಡುವಾಗ ಈ ಅಗ್ನಿಚಕ್ರದ ವಿಚಾರ ಮಾಡುವುದು ಆವಶ್ಯಕವಾಗಿದೆ. ಬೆಳಗ್ಗೆ ೭.೩೦ ರಿಂದ ೧೦.೩೦ ಈ ಕಾಲಾವಧಿಯಲ್ಲಿ ಸೂರ್ಯನು ಆಗ್ನೇಯ ದಿಕ್ಕಿನಲ್ಲಿ ಪ್ರಭಾವಶಾಲಿಯಾಗಿರುತ್ತಾನೆ. ಇದೇ ಸಮಯ ಸಾಮಾನ್ಯವಾಗಿ ಅಡುಗೆ ಮಾಡುವ ದೃಷ್ಟಿಯಿಂದ ಯೋಗ್ಯ ಇರುತ್ತದೆ. ಆದುದರಿಂದ ‘ಅಡುಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು’ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.

‘ಅಪರಾಜಿತಪೃಚ್ಛಾ’ ಎಂಬ ಗ್ರಂಥದ ಪ್ರಕಾರ ಅಡುಗೆಮನೆಗಾಗಿ ಆಗ್ನೇಯ ಮೂಲೆಯನ್ನು ಆಯ್ದುಕೊಳ್ಳಲು ಹೇಳಲಾಗಿದೆ. ಈ ಸ್ಥಳದಲ್ಲಿ ಹೆಚ್ಚು ಸಮಯ ಇರುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ; ಏಕೆಂದರೆ ಆವಶ್ಯಕವಾಗಿರುವ ಎಳೆ ಸೂರ್ಯಕಿರಣಗಳ ಲಾಭ ಆಗ್ನೇಯ ದಿಕ್ಕಿನಲ್ಲಿ ಹೆಚ್ಚು ಕಾಲ ಇರುತ್ತದೆ. ಎಳೆ ಬಿಸಿಲಿನಲ್ಲಿರುವ ‘ಇನ್ಫ್ರಾರೆಡ್’ ಕಿರಣಗಳು ಶರೀರಕ್ಕೆ ಉಪಯುಕ್ತವಾಗಿದ್ದು, ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು ಸಹ ಪ್ರಮುಖ ಕಾರ್ಯವನ್ನು ಮಾಡುತ್ತವೆ. ಈ ದಿಕ್ಕಿನಲ್ಲಿ ಅಡುಗೆ ಮನೆಯು ಇರುವುದರಿಂದ ಮೂಳೆಗಳ ಬಲವರ್ಧನೆ ಮತ್ತು ಮಾನಸಿಕ ಸ್ವಾಸ್ಥ್ಯ ಇವೆರಡರ ಲಾಭವು ನಮಗೆ ದೊರೆಯುತ್ತಿರುತ್ತದೆ.
೧ ಅ. ಈಶಾನ್ಯ ದಿಕ್ಕಿನಲ್ಲಿ ಅಡುಗೆ ಮನೆ ಇರುವ ಬಗ್ಗೆ ಮಾರ್ಗದರ್ಶನ :
ಅಂತರಿಕ್ಷೇ ಭವೇಚ್ಚುಲ್ಲೀ ಸತ್ಯಕೇ ಸ್ಯಾದುಲೂಖಲಮ್ |
ಐಶಾನ್ಯಾಂ ಪಚನಸ್ಥಾನಂ ಸರ್ವೇಷಾಂ ದೇಹಿನಾಂ ಹಿತಮ್ ||
– ಮಯಮತಮ್, ಅಧ್ಯಾಯ ೨೭, ಶ್ಲೋಕ ೧೦೦
ಅರ್ಥ : ‘ಅಂತರಿಕ್ಷ’ (ನಭ, ಆಕಾಶ)’ ಈ ಪದದಲ್ಲಿ ಒಲೆ ಇರಬೇಕು ಮತ್ತು ‘ಸತ್ಯ’ ಪದದಲ್ಲಿ ಒರಳು ಇರಬೇಕು ಮತ್ತು ‘ಈಶಾನ’ (ಶಿಖಿ)’ ಪದದಲ್ಲಿ ಪಚನಸ್ಥಾನ (ಅಡುಗೆ ಮನೆ) ಇರುವುದು, ಇದು ಎಲ್ಲರಿಗೂ ಹಿತಕರವಾಗಿದೆ.
‘ಮಯಮತಮ್’ ಎಂಬ ಗ್ರಂಥದಲ್ಲಿ ಹಿಂದಿನ ದಿನಚರಿಯನ್ನು ಅನುಸರಿಸಿ ಈಶಾನ್ಯದಿಕ್ಕಿಗೆ ಅಡುಗೆಮನೆ ಇರಬೇಕೆಂದು ಹೇಳಲಾಗಿದೆ. ಈ ಸ್ಥಳವು ಎಲ್ಲರಿಗೂ ಹಿತಕರವಾಗಿದೆ ಎಂದೂ ಹೇಳಲಾಗಿದೆ; ಆದರೆ ಈಶಾನ್ಯ ದಿಕ್ಕಿನಲ್ಲಿ ಅಡುಗೆಮನೆ ಇದ್ದರೆ ನಸುಕಿನಲ್ಲಿ ಬೇಗ ಅಡುಗೆ ಮಾಡುವ ಪ್ರಸಂಗ ಬರುತ್ತದೆ. ಇಂದಿನ ಜೀವನಶೈಲಿಗೆ ಇದು ಅಷ್ಟು ಹೊಂದಾಣಿಕೆಯಾಗುವುದಿಲ್ಲ; ಆದ್ದರಿಂದ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಿ, ‘ಆಕಾಶ’ ಪದದಲ್ಲಿ ಒಲೆಯನ್ನು ಇರಿಸಬೇಕು.

೨. ವರ್ಣಕ್ಕನುಗುಣವಾಗಿ ಒಲೆ ಹೇಗಿರಬೇಕು ?
ನರಶೀರ್ಷಕವನ್ನೃಪಸ್ಯ ಚುಲ್ಲೀ ಚತುರಸ್ರಂ ದ್ಯುಸದಾಂ ಮಹೀಸುರಾಣಾಮ್ |
ಚತುರಾಯತಕಂ ವಿಶಾಂ ಪರೇಷಾಮಿತರೇಷಾಮಿತರೇಷು ಸರ್ವಮಿಷ್ಟಮ್ ||
– ಮಯಮತಮ್, ಅಧ್ಯಾಯ ೨೭, ಶ್ಲೋಕ ೧೦೩
ಅರ್ಥ : ರಾಜನಿಗಾಗಿ ಒಲೆ ಅಥವಾ ಅಗ್ನಿಸ್ಥಾನವನ್ನು ನಿರ್ಮಿಸುವುದಿದ್ದರೆ ಅದನ್ನು ಮನುಷ್ಯನ ತಲೆಯ ಆಕಾರದಲ್ಲಿ, ಅಂದರೆ ಗೋಲಾಕಾರದಲ್ಲಿ ನಿರ್ಮಿಸಬೇಕು. ದೇವಾಲಯಗಳು ಅಥವಾ ಬ್ರಾಹ್ಮಣ ವರ್ಣದವರಿಗಾಗಿ ಒಲೆಯನ್ನು ಚೌಕಾಕಾರದಲ್ಲಿ ನಿರ್ಮಿಸಬೇಕು. ವೈಶ್ಯ ವರ್ಣದವರಿಗಾಗಿ ಆಯತಾಕಾರದಲ್ಲಿ ಹಾಗೂ ಇತರರಿಗಾಗಿ ಬೇರೆ ಬೇರೆ ಆಕಾರಗಳಲ್ಲಿ ಒಲೆಯನ್ನು ನಿರ್ಮಿಸಬೇಕು.
೩. ಒಲೆಗಳ ಸಂಖ್ಯೆ
ಇಂದ್ವಗ್ನಿಭೂತಮುನಿನಂದಕರುದ್ರಸಂಖ್ಯಾಶ್ಚುಲ್ಯೋ |
– ಮಯಮತಮ್, ಅಧ್ಯಾಯ ೨೭, ಶ್ಲೋಕ ೧೦೪
ಅರ್ಥ : ಇಂದು ಎಂದರೆ ೧, ಅಗ್ನಿ ಎಂದರೆ ೩, ಭೂತ ಎಂದರೆ ೫, ಮುನಿ ಎಂದರೆ ೭, ನಂದಕ ಎಂದರೆ ೯ ಮತ್ತು ರುದ್ರ ಎಂದರೆ ೧೧ (ಸಂಸ್ಕೃತದಲ್ಲಿ ಸಂಖ್ಯೆಗಳಿಗಾಗಿ ಮೇಲಿನಂತೆ ಶಬ್ದಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಇಂದು ಎಂದರೆ ಚಂದ್ರ, ಅವನು ಒಬ್ಬನೆ ಇರುವುದರಿಂದ ಇಂದು ಎಂಬ ಪದವನ್ನು ಒಂದು ಸಂಖ್ಯೆಗಾಗಿ ಬಳಸಲಾಗಿದೆ, ಭೂತ ಎಂದರೆ ಪಂಚಮಹಾಭೂತಗಳು, ಆದ್ದರಿಂದ ಈ ಪದವನ್ನು ೫ ಎಂಬ ಅಂಕಿಯನ್ನು ಅರಿತುಕೊಳ್ಳಲು ಬಳಸಲಾಗುತ್ತದೆ.) ಒಲೆಗಳ ಸಂಖ್ಯೆ ವಿಷಮ ಅಂದರೆ ೧, ೩, ೫, ೭, ೯, ೧೧ ಹೀಗಿರಬೇಕು.
೪. ಅಡುಗೆ ಮನೆಯ ವಿನ್ಯಾಸದ ಮಹತ್ವ
ಅಡುಗೆ ಮನೆಯ ಒಳಾಂಗಣದ ವಿನ್ಯಾಸ ಮಾಡುವಾಗ ಈಗಿನ ಕಾಲದಲ್ಲಿ ನಲ್ಲಿ (Tap) , ಸಿಂಕ್, ಫ್ರಿಡ್ಜ್ ಮತ್ತು ಇತರ ಉಪಕರಣಗಳು ಇತ್ಯಾದಿ ಅನೇಕ ವಿಷಯಗಳು ಅಡುಗೆ ಮನೆಯಲ್ಲಿ ಇರುತ್ತವೆ. ಅವುಗಳ ರಚನೆಯನ್ನು ಮಾಡುವಾಗಲೂ ನಾವು ದಿಕ್ಕುಗಳ ತತ್ತ್ವ್ವವನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ನೀರಿನ ವ್ಯವಸ್ಥೆಯನ್ನು ಅಡುಗೆ ಮನೆಯ ಈಶಾನ್ಯ ಭಾಗದಲ್ಲಿ ಮಾಡಬೇಕು. ವಿದ್ಯುತ್ ಉಪಕರಣಗಳು ನಿರಂತರವಾಗಿ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಅವುಗಳ ವ್ಯವಸ್ಥೆಯನ್ನು ಆಗ್ನೇಯ ಭಾಗದಲ್ಲಿ ಮಾಡಬೇಕು. ಹಸಿ ಕಸ ಇತ್ಯಾದಿಗಳನ್ನು ವಾಯವ್ಯ ಭಾಗದಲ್ಲಿಡಬೇಕು. ಅಡುಗೆ ಮನೆಯ ಒಳಾಂಗಣದ ವಿನ್ಯಾಸವನ್ನು ಮಾಡುವಾಗ ನಾವು ಈ ವಿಚಾರವನ್ನು ಮಾಡಬಹುದು. ಅಡುಗೆ ಮಾಡುವ ಗೃಹಿಣಿಯ ಮುಖವು ಯಾವಾಗಲೂ ಪೂರ್ವ ದಿಕ್ಕಿಗೆ ಇರುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಅಡುಗೆ ಮನೆಯ ಇತರ ಎಲ್ಲ ಸರಿಯಾದ ವಿನ್ಯಾಸದ ಪ್ರಯೋಜನಗಳನ್ನು ನಾವು ಪಡೆಯಬಹುದು. ‘ಎಲ್ಲರಿಗೂ ಈ ರೀತಿಯಾಗಿ ಅಡುಗೆ ಮನೆಯ ಸರಿಯಾದ ವಿನ್ಯಾಸವನ್ನು ಮಾಡಲು ಪ್ರೇರಣೆ ಸಿಗಲಿ ಮತ್ತು ಆ ಮೂಲಕ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಉತ್ತಮ ಆರೋಗ್ಯವು ಲಭಿಸಲಿ’, ಎಂದು ಗುರುಗಳ ಚರಣಗಳಲ್ಲಿ ಪ್ರಾರ್ಥನೆ !
(ಆಧಾರ ಗ್ರಂಥ : ಮಯಮತಮ್, ಮಾನಸಾರ, ರಾಜವಲ್ಲಭ, ಅಪರಾಜಿತಪೃಚ್ಛಾ)
– ಗುರುಸೇವಕ ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೩೧.೩.೨೦೨೬)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !