ಮುರುಡೇಶ್ವರ

ಸಮುದ್ರದಡದಲ್ಲಿ ನೆಲೆನಿಂತ ಶಿವನ ಅತಿ ಎತ್ತರವಾದ ಪ್ರತಿಮೆ

ಇದು ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವೂ ಇದೆ.

ಪುರಾಣದ ಕತೆ

ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೇ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಈ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನ ಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆ ಗಳ ಪ್ರಸಿದ್ಧ ತಾಣವಾಗಿತ್ತು ಅಂತೆಯೆ ಇಂದಿಗೂ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಹಾಸತಿಯರ ಕುರುಹುಗಳು, ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು.

(ಆಧಾರ : ವಿವಿಧ ಜಾಲತಾಣಗಳು)