ಶಾಸ್ತ್ರ ವಿಭಾಗ : ಪ್ರಾಚೀನ ಶಾಸ್ತ್ರ ಸರಳ ಭಾಷೆಯಲ್ಲಿ

೧. ’ಮೈಮೇಲೆ ಹಲ್ಲಿ ಬೀಳುವುದು ಅಥವಾ ಓತಿಕ್ಯಾತ ಹತ್ತುವುದು’, ಇವುಗಳ ಫಲ
ಅ. ’ಪುರುಷರ ಮೈಮೇಲೆ ಬಲ ಭಾಗ, ಹೊಟ್ಟೆ, ನಾಭಿ, ಹೃದಯ ಅಥವಾ ಮಸ್ತಕದ ಮೇಲೆ ಹಲ್ಲಿ ಬಿದ್ದರೆ ಶುಭ ಫಲವೆಂದು ತಿಳಿಯಬೇಕು. ಪುರುಷರ ಮೈಮೇಲೆ ಎಡ ಭಾಗದ ಮೇಲೆ ಹಲ್ಲಿ ಬಿದ್ದರೆ ಅಶುಭ ಫಲವೆಂದು ತಿಳಿಯಬೇಕು. ಸ್ತ್ರೀಯರ ವಿಷಯದಲ್ಲಿ ಇದನ್ನು ವಿರುದ್ಧವಾಗಿ (ಎಡಭಾಗ ಶುಭ, ಬಲಭಾಗ ಅಶುಭ) ತಿಳಿಯಬೇಕು.
ಆ. ಹಲ್ಲಿ ಬೀಳುವುದಕ್ಕೆ ಯಾವ ಫಲವಿದೆಯೋ, ಅದೇ ಫಲವು ಆಯಾ ಜಾಗದಲ್ಲಿ ಓತಿಕ್ಯಾತ ಹತ್ತುವುದಕ್ಕೂ ಅನ್ವಯಿಸುತ್ತದೆ.
೨. ಅಶುಭ ಫಲವಿದ್ದಲ್ಲಿ ಈ ದೋಷವನ್ನು ದೂರ ಮಾಡಲು ಮಾಡಬೇಕಾದ ಉಪಾಯಗಳು

ಅ. ಮೇಲಿನಂತೆ ಹಲ್ಲಿ ಅಥವಾ ಓತಿಕ್ಯಾತದ ಸ್ಪರ್ಶವಾದರೆ ತಕ್ಷಣವೇ ಮೈಮೇಲಿನ ಬಟ್ಟೆಗಳ ಸಮೇತ ಸ್ನಾನ ಮಾಡಬೇಕು. ಸಾಧ್ಯವಿದ್ದಲ್ಲಿ ಪಂಚಗವ್ಯ (ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಮತ್ತು ದರ್ಭೆ ನೆನೆಸಿದ ನೀರಿನ ಮಿಶ್ರಣ) ಪ್ರಾಶನ ಮಾಡಬೇಕು.
ಆ. ’ಆಜ್ಯಾವಲೋಕನ’ ಅಂದರೆ ಕರಗಿಸಿದ ತುಪ್ಪವನ್ನು ಒಂದು ತಟ್ಟೆಯಲ್ಲಿ ಹಾಕಿ ಅದರಲ್ಲಿ ತಮ್ಮ ಮುಖವನ್ನು ನೋಡಿ ಕೊಳ್ಳಬೇಕು. ’ಹಲ್ಲಿ ಬಿದ್ದ ಅಥವಾ ಓತಿಕ್ಯಾತ ಹತ್ತಿದ್ದರಿಂದ ಉಂಟಾಗುವ ದೋಷವು ನಿವಾರಣೆಯಾಗಲಿ’ ಎಂದು ಇಷ್ಟ ದೇವತೆಯಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ನಂತರ ಆ ತುಪ್ಪವನ್ನು ದೀಪಕ್ಕೆ ಹಾಕಿ ದೇವರೆದುರು ದೀಪ ಹಚ್ಚಬೇಕು.
ಇ. ಸಾಧ್ಯವಿದ್ದಲ್ಲಿ ’ಪಲ್ಲಿಸರಠ ಶಾಂತಿ’ ವಿಧಿಯನ್ನು ಮಾಡಬೇಕು. ಇದಕ್ಕಾಗಿ ಸ್ಥಳೀಯ ಪುರೋಹಿತರ ಮಾರ್ಗದರ್ಶನ ಪಡೆದು ಈ ವಿಧಿಯನ್ನು ಮಾಡಬೇಕು.’
(ಆಧಾರ : ’ಧರ್ಮಸಿಂಧು’ ಗ್ರಂಥ) – ಶ್ರೀ. ಅಮರ ಜೋಶಿ, ಸನಾತನ ವೇದಪಾಠಶಾಲೆ (೮.೪.೨೦೨೬)
’ಮೇಲಿನ ಲೇಖನವು ನಮ್ಮ ಅಲ್ಪಬುದ್ಧಿಯ ಪ್ರಕಾರವಾಗಿದೆ. ಇದರಲ್ಲಿ ವಿದ್ವಾಂಸರಿಗೆ ಯಾವುದಾದರೂ ಬದಲಾವಣೆಗಳನ್ನು ಸೂಚಿಸುವುದಿದ್ದರೆ ಅಥವಾ ಹೆಚ್ಚಿನ ಮಾಹಿತಿ ನೀಡುವುದಿದ್ದರೆ ಸನಾತನ ವೇದಪಾಠಶಾಲೆಯ ದೂರವಾಣಿ ಸಂಖ್ಯೆ ೮೧೮೦೯೬೮೬೬೦ ಅನ್ನು ಸಂಪರ್ಕಿಸಬೇಕು !’
– ಶ್ರೀ. ಅಮರ ಜೋಶಿ, ಸನಾತನ ವೇದಪಾಠಶಾಲೆ (೮.೪.೨೦೨೬)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !