ಗೋ ರಕ್ಷಣೆ ಮಾಡುವುದಕ್ಕಾಗಿ ನಿರುದ್ಯೋಗಿಗಳಿಗೆ ಹಸುಗಳನ್ನು ಸಾಕುವ ಜವಾಬ್ದಾರಿ ನೀಡಲಾಗುವುದು !

ಉತ್ತರಖಂಡದಲ್ಲಿ ಪುಷ್ಕರ ಸಿಂಹ ಧಾಮಿ ಸರಕಾರದ ಅಭಿನಂದನೆ ! ಗೋಮಾತೆಯು ಎಲ್ಲಾ ರೀತಿಯಲ್ಲೂ ಮಹತ್ವದ್ದಾಗಿರುವುದರಿಂದ ಭಾಜಪದ ಇತರ ರಾಜ್ಯಗಳಲ್ಲಿ ಸಹ ಹಸುಗಳ ರಕ್ಷಣೆ ಮಾಡುವುದಕ್ಕಾಗಿ ಸರಕಾರಿ ಮಟ್ಟದಲ್ಲಿ ಇಂತಹ ಯೋಜನೆ ಜಾರಿ ಮಾಡುವುದು ಅವಶ್ಯಕವಾಗಿದೆ !

ಈದ್ ಸಮಯದಲ್ಲಿ ಮುಸ್ಲಿಂ ಬಾಹುಳ್ಯವಿರುವ ಮಂಗಲೌರ (ಹರಿದ್ವಾರ) ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ನ್ಯಾಯಾಲಯ ಹಿಂತೆಗೆದುಕೊಂಡಿದೆ

ಜುಲೈ ೧೦ ರಂದು ಈದ್-ಉಲ್-ಫಿತರ್ ಪ್ರಯುಕ್ತ ಮುಸ್ಲಿಂ ಬಾಹುಳ್ಯವಿರುವ ಮಂಗಲೌರಿನಲ್ಲಿ (ಹರಿದ್ವಾರ) ಕಸಾಯಿಖಾನೆಗಳ ಮೇಲಿನ ನಿಷೇಧವನ್ನು ಉತ್ತರಾಖಂಡ ಉಚ್ಚನ್ಯಾಯಾಲಯ ಹಿಂಪಡೆದಿದೆ. ಮಾರ್ಚ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ, ಉತ್ತರಾಖಂಡದ ಭಾಜಪ ಸರಕಾರವು ಹರಿದ್ವಾರ ಜಿಲ್ಲೆಯ ಎಲ್ಲಾ ಕಸಾಯಿಖಾನೆಗಳನ್ನು ನಿಷೇಧಿಸಿ ಅವುಗಳ ಪರವಾನಗಿಯನ್ನು ರದ್ದುಗೊಳಿಸಿತ್ತು.

ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಹೋಗಿ ದರ್ಶನ ಪಡೆಯಲು ಅನುಮತಿ !

ಉತ್ತರಾಖಂಡ ರಾಜ್ಯದಲ್ಲಿನ ಭಾಜಪ ಸರಕಾರವು ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿನ ಪ್ರವೇಶದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಈಗ ಯಾತ್ರಿಕರು ಗರ್ಭಗುಡಿಗೆ ಹೋಗಿ ದರ್ಶನ ಪಡೆಯಬಹುದು.

ಹರಿದ್ವಾರದಲ್ಲಿ ಚಲಿಸುತ್ತಿರುವ ವಾಹನದಲ್ಲಿ ತಾಯಿ ಸಹಿತ ಆಕೆಯ ೬ ವರ್ಷದ ಮಗಳ ಮೇಲೆ ಸಾಮೂಹಿಕ ಬಲಾತ್ಕಾರ

ಇಲ್ಲಿ ಚಲಿಸುತ್ತಿರುವ ವಾಹನದಲ್ಲಿ ಮಹಿಳೆ ಮತ್ತು ಆಕೆಯ ೬ ವರ್ಷದ ಮಗಳ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ‘ಮನೆಗೆ ಬಿಡುತ್ತೇನೆ’ ಎಂದು ಹೇಳಿ ಸೋನು ಎಂಬ ಆರೋಪಿ ಇಬ್ಬರನ್ನು ತನ್ನ ವಾಹನದಲ್ಲಿ ಕೂಡಿಸಿದನು.

ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಆಸ್ತಿಯಿಂದ ಹೊರಗಿಡಲು ಹರಿದ್ವಾರ ನ್ಯಾಯಾಲಯದ ನಿರ್ಧಾರ

ಪೋಷಕರಿಗೆ ಕಿರುಕುಳ ನೀಡುವ ಮಕ್ಕಳನ್ನು ಅವರ ಆಸ್ತಿಯಿಂದ ಹೊರಗಿಡಲು ಇಲ್ಲಿನ ನ್ಯಾಯಾಲಯವೊಂದು ತೀರ್ಪು ನೀಡಿದೆ. ೬ ವೃದ್ಧ ದಂಪತಿಗಳ ಮೇಲೆ ದೌರ್ಜನ್ಯ ಎಸಗಿದ ಮಕ್ಕಳ ವಿರುದ್ಧ ಹಾಗೂ ಅವರಿಗೆ ನೀಡಿರುವ ಆಸ್ತಿಯನ್ನು ಮರಳಿ ಪಡೆಯುವಂತೆ ಅರ್ಜಿ ಸಲ್ಲಿಸಿದ್ದರು.

ಚಾರಧಾಮ ಯಾತ್ರೆಯ ದಾರಿಯಲ್ಲಿರುವ ಕಸದಿಂದ ಪರಿಸರಕ್ಕೆ ಅಪಾಯ ! – ತಜ್ಞರ ಚಿಂತೆ

ಚಾರಧಾಮ ಯಾತ್ರೆಯ ದಾರಿಯಲ್ಲಿ ಸದ್ಯ ಎಲ್ಲೆಡೆ ಪ್ಲಾಸ್ಟೀಕಿನ ಚೀಲಗಳು, ಬಾಟಲಿಗಳೊಂದಿಗೆ ಕಸದ ರಾಶಿ ಕಂಡುಬರುತ್ತಿದೆ, ಇದು ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿವೆ.

ಜೈಷೆ-ಏ-ಮೋಹಮ್ಮದ್ ನಿಂದ ಹರಿದ್ವಾರದ ಧಾರ್ಮಿಕ ಸ್ಥಳಗಳ ಸಹಿತ ೯ ರೈಲ್ವೆ ಸ್ಟೇಷನ್ ಗಳಿಗೆ ಬಾಂಬ್ ಬೆದರಿಕೆ

ರಾಜ್ಯದ ರೂಡಕೀ ರೈಲ್ವೆ ಸ್ಟೇಷನ್ ಅಧಿಕಾರಿಗಳಿಗೆ ಬೆದರಿಕೆಯ ಪತ್ರ ದೊರೆತಿದ್ದು ಅದರಲ್ಲಿ ಮೆ ೨೧ ರ ನಂತರ ಹರಿದ್ವಾರದ ಮಂಶಾದೇವಿ ಮತ್ತು ಚಂಡಿದೇವಿ ಇವುಗಳ ಜೊತೆಗೆ ಅನ್ಯ ಧಾರ್ಮಿಕ ಸ್ಥಳ, ಹಾಗೂ ಲಕ್ಷರ್, ನಜರಾಬಾದ್, ಡೆಹರಾಡೂನ್, ರೂಡಕೀ, ರಿಷಿಕೇಶ್ ಮತ್ತು ಹರಿದ್ವಾರದ ರೈಲ್ವೆ ಸ್ಟೇಷನಗಳ ಮೇಲೆ ಬಾಂಬು ದಾಳಿ ನಡೆಸಲಾಗುವ ಬೆದರಿಕೆ ಒಡ್ಡಲಾಗಿದೆ.

ಬದರಿನಾಥ ಧಾಮದ ದ್ವಾರಗಳನ್ನು ತೆರೆಯಲಾಗಿದೆ !

ಕೊರೋನಾ ಮಹಾಮಾರಿಯಿಂದಾಗಿ ಕಳೆದ ೨ ವರ್ಷಗಳಿಂದ ಮುಚ್ಚಲಾಗಿದ್ದ ಬದ್ರಿನಾಥ ಧಾಮದ ದ್ವಾರಗಳನ್ನು ಮೇ ೮ರ ಮುಂಜಾವಿನಲ್ಲಿ ತೆರೆಯಲಾಯಿತು. ಈಗ ಭಕ್ತರಿಗೆ ಮುಂದಿನ ೬ ತಿಂಗಳ ವರೆಗೆ ಬದ್ರಿವಿಶಾಲನ ದರ್ಶನ ಲಭಿಸಲಿದೆ.

ಹಿಮಾಲಯದ ೫೧ ಶಕ್ತಿಪೀಠಗಳ ಸಂರಕ್ಷಣೆಗಾಗಿ ಮನವಿ

ಹಿಮಾಲಯದಲ್ಲಿರುವ ೫೧ ಶಕ್ತಿ ಪೀಠಗಳ ಸಂರಕ್ಷಣೆಯ ಸಂದರ್ಭದಲ್ಲಿ ಮನವಿ ದಾಖಲಿಸಲಾಗಿರುವುದರ ವಿಚಾರಣೆ ನಡೆಸುವಾಗ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬರುವ ೬ ವಾರಗಳಲ್ಲಿ ಉತ್ತರ ನೀಡಲು ಹೇಳಲಾಗಿದೆ. ಈ ಮನವಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಕಕ್ಷಿದಾರ ಮಾಡಲಾಗಿದೆ.

ಉತ್ತರಾಖಂಡದಲ್ಲಿ ಆಡಳಿತವು ಹಿಂದೂ ಮಹಾಪಂಚಾಯತಕ್ಕೆ ಅನುಮತಿ ನಿರಾಕರಿಸಿತು !

ಉತ್ತರಾಖಂಡದಲ್ಲಿ ಡಾಡಾ ಜಲಾಲಪೂರ ಎಂಬ ಗ್ರಾಮದಲ್ಲಿ ಆಯೋಜಿಸಲಾದ ಹಿಂದು ಮಹಾಪಂಚಾಯತಕ್ಕೆ ಹರಿದ್ವಾರ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದೆ. ಅಲ್ಲಿ ಅನುಚ್ಛೇದ ೧೪೪ (ಸಂಚಾರ ನಿಶೇಧಾಜ್ಞೆ) ಅನ್ನು ಜಾರಿಗೊಳಿಸಲಾಗಿದೆ.